"ಸಿದ್ದಾರ್ಥ್ ಜತೆ ನಟಿಸೋಕೆ ಹಾಸಿಗೆ ಹಂಚಿಕೊಳ್ಳಲು ಸಿದ್ಧ"; ಆಕೆ ಹೀಗೆ ಹೇಳೇ ಇಲ್ಲ

By ಫಿಲ್ಮಿಬೀಟ್ ಡೆಸ್ಕ್

ತಮಿಳು ನಟಿ ಗಾಯತ್ರಿ ರೆಮಾ ಕೆಲ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಕಿರುತೆರೆಯ 'ಡ್ಯಾನ್ಸ್ ಜೋಡಿ ಡ್ಯಾನ್ಸ್' ಶೋನಲ್ಲಿ ಭಾಗವಹಿಸಿ ಆಕೆ ಗಮನ ಸೆಳೆದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆಕೆ ಸಾಕಷ್ಟು ಬಾರಿ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಇದೆ. ನನಗೂ ಈ ರೀತಿಯ ಅನುಭವವಾಗಿದೆ. ಬರೀ ಚಿತ್ರರಂಗ ಅಲ್ಲ, ಸಾಕಷ್ಟು ಕಡೆಗಳಲ್ಲಿ ಈ ರೀತಿ ನಡೆಯುತ್ತಿರುತ್ತದೆ. ಬಣ್ಣದಲೋಕ ಆಗಿರುವ ಕಾರಣ ಚಿತ್ರರಂಗದ ಬಗ್ಗೆ ಹೆಚ್ಚು ಸುದ್ದಿ ಆಗುತ್ತದೆ ಎಂದಿದ್ದಾರೆ. ಇನ್ನು ತಮಿಳು ನಟ ಸಿದ್ದಾರ್ಥ್ ನನಗೆ ಬಹಳ ಇಷ್ಟ. ಆತನೊಟ್ಟಿಗೆ ನಟಿಸೋಕೆ ಅವಕಾಶ ಬಂದಿತ್ತು. ನಿರ್ಮಾಪಕರು ಕಮೀಟ್‌ಮೆಂಟ್ ಕೇಳಿದರು, ನಾನು ಒಪ್ಪಲಿಲ್ಲ ಎಂದು ಹಿಂದೆ ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದಾರೆ.

Fact check Gayatri Rema didn t say she ready to commitment for actor siddharth s film

"ಸಿದ್ದಾರ್ಥ್ ಜತೆ ನಟಿಸೋಕೆ ಹಾಸಿಗೆ ಹಂಚಿಕೊಳ್ಳಲು ಸಿದ್ಧ" ಎಂದು ಗಾಯತ್ರಿ ರೆಮಾ ಹೇಳಿರುವುದಾಗಿ ಸುದ್ದಿ ವೈರಲ್ ಆಗುತ್ತಿದೆ. ಆದರೆ ಆಕೆ ಯಾವುದೇ ಸಂದರ್ಶನದಲ್ಲಿ ಈ ರೀತಿಯ ಹೇಳಿಕೆ ನೀಡಿಲ್ಲ. ಕೆಲ ತೆಲುಗು ವೆಬ್‌ಸೈಟ್‌ಗಳಲ್ಲಿ ಕೂಡ ಇಂತಹ ಸುದ್ದಿ ಪ್ರಕಟವಾಗಿದೆ. ಇನ್ನು ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಆಕೆ ಸಖತ್ ಬೋಲ್ಡ್ ಆಗಿ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಯಾರು ಕೂಡ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡುವುದಿಲ್ಲ. ಕೆಲವರು ಒಪ್ಪಿ ಎಲ್ಲದಕ್ಕೂ ಸಿದ್ಧ ಎನ್ನುತ್ತಾರೆ. ಚಿತ್ರಕ್ಕೆ ಸಹಿ ಮಾಡುವಾಗಲೇ ಈ ರೀತಿ ಇದೆ ಎಂದು ಹೇಳಿಬಿಡುತ್ತಾರೆ. ಇಷ್ಟವಿದ್ದರೆ ಒಪ್ಪಿಕೊಳ್ಳಬಹುದು, ಇಲ್ಲದಿದ್ದರೆ ಇಲ್ಲ. ಕೈ ಹಿಡಿದು ಎಳೆಯುವುದು, ಜ್ಯೂಸ್‌ನಲ್ಲಿ ಏನಾದರೂ ಬೆರೆಸಿ ಬಲವಂತ ಮಾಡುವುದು ಮಾತ್ರ ತಪ್ಪು ಎಂದು ಗಾಯತ್ರಿ ರೆಮಾ ಹೇಳಿದ್ದಾರೆ.

ನನಗೆ ಸಿದ್ದಾರ್ಥ್‌ ಜೊತೆ ಒಂದು ಸಿನಿಮಾ ಅವಕಾಶ ಇದೆ ಎಂದು ನಿರ್ಮಾಪಕರೊಬ್ಬರು ಹೇಳಿದರು. ನನಗೆ ಬಹಳ ಖುಷಿಯಾಯಿತು. ನನ್ನ ಫೇವರಿಟ್ ನಟ. ಅದ್ಯಾವ ಮಟ್ಟಿಗೆ ಅಂದ್ರೆ ಈಗಲೇ ಅವರು ಮದುವೆ ಆಗೋಣ ಎಂದು ಕರೆದರೆ ನಾನು ಒಪ್ಪಿಕೊಂಡುಬಿಡುತ್ತೇನೆ. ಅಷ್ಟು ಇಷ್ಟ. ಅವರೊಟ್ಟಿಗೆ ಸಿನಿಮಾ ಅವಕಾಶ ಎಂದು ನಿರ್ಮಾಪರು ಹೇಳಿದರು. ಆಸ್ಟೇಲಿಯಾದಲ್ಲಿ ಶೂಟಿಂಗ್ ನನ್ನೊಟ್ಟಿಗೆ ಇರಬೇಕು ಎಂದು ಆ ನಿರ್ಮಾಪಕ ಬಹಿರಂಗವಾಗಿ ಹೇಳಿದ್ದ. ನಾನು ಒಪ್ಪಲಿಲ್ಲ. ಅಲ್ಲಿಗೆ ಆ ಕತೆ ಮುಗೀತು.

Fact check Gayatri Rema didn t say she ready to commitment for actor siddharth s film

ಆ ನಿರ್ಮಾಪಕ ನಿಜಕ್ಕೂ ಸಿದ್ದಾರ್ಥ್‌ ಜೊತೆ ಸಿನಿಮಾ ಮಾಡಲು ಮುಂದಾಗಿದ್ದನಾ? ಸಿದ್ದಾರ್ಥ್ ಅವರನ್ನು ಅಪ್ರೋಚ್ ಮಾಡಿದ್ದರಾ? ಅವರು ನಟಿಸಲು ಒಪ್ಪಿದ್ದರೋ, ಇಲ್ಲವೋ ಗೊತ್ತಿಲ್ಲ. ಅಥವಾ ಕೆಟ್ಟ ಉದ್ದೇಶದಿಂದಲೇ ನಿರ್ಮಾಪಕರು ನನ್ನ ಬಳಿ ಸುಳ್ಳು ಹೇಳಿದ್ರಾ? ಎನ್ನುವುದು ಮಾತ್ರ ನನಗೆ ಗೊತ್ತಿಲ್ಲ, ನನಗಂತೂ ಛೇ ಈ ಚಿತ್ರಕ್ಕೆ ಈ ರೀತಿ ಹೇಳಿಬಿಟ್ಟರಲ್ಲ ಅಂತ ಬೇಸರವಾಗಿತ್ತು ಎಂದು ಗಾಯತ್ರಿ ರೆಮಾ ವಿವರಿಸಿದ್ದರು.

ಕೇರಳ ಮೂಲದ ಗಾಯತ್ರಿ ರೆಮಾ ತಮಿಳಿನ 'ಟೂರಿಂಗ್ ಟಾಕೀಸ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ದೊರ', ಕಾಸು ಮೇಲೆ ಕಾಸು, ಮೋಹಿನಿ, ಟೇಕ್ ಡೈವರ್ಷನ್, ಅಕ್ಕು, ರಾ ರಾ ಸರಸಕು ರಾರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್ ಸೀರಿಸ್‌ಗಳಲ್ಲಿ ಕೂಡ ಗಾಯತ್ರಿ ರೆಮಾ ಬಣ್ಣ ಹಚ್ಚಿದ್ದಾರೆ.

More from Filmibeat

English summary
Gayatri Rema shocking comments abut film industry casting couch;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X