For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಸಿನಿಮಾಕ್ಕೆ ಮತ್ತೊಬ್ಬ ನಟ ರಾಕ್ಷಸನ ಪ್ರವೇಶ

  |

  ಕಮಲ್ ಹಾಸನ್ ನಟನಾ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಹಲವು ವಿಧದ ಪಾತ್ರಗಳನ್ನು ಮಾಡುವ ಮೂಲಕ ತಮ್ಮ ನಟನಾ ಪ್ರತಿಭೆ ಎಂಥಹುದ್ದು ಎಂದು ಈಗಾಗಲೇ ಸಾಬೀತು ಪಡಿಸಿದ್ದಾರೆ.

  ನಟನೆಯ ವಿಷಯದಲ್ಲಿ ತಮಗೆ ತಾವು ಸವಾಲು ಎಸೆದುಕೊಳ್ಳುವ ಕಮಲ್ ಹಾಸನ್. ಕಮರ್ಶಿಯಲ್ ಮಾದರಿಯ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ನಟಿಸುತ್ತಲೇ ಬಂದಿದ್ದಾರೆ. ಈಗಲೂ ಅಂಥಹಾ ಪ್ರಯತ್ನಗಳಲ್ಲಿ ನಿರತರಾಗಿದ್ದಾರೆ.

  ಕಮಲ್ ಹಾಸನ್ ಈಗ 'ವಿಕ್ರಂ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ಸಹ ಇದ್ದಾರೆ. ಹೊಸ ಸುದ್ದಿಯೆಂದರೆ ಈ ಸಿನಿಮಾಕ್ಕೆ ಖ್ಯಾತ ನಟ ಫಹಾದ್ ಫಾಸಿಲ್‌ ಸಹ ಎಂಟ್ರಿ ಕೊಟ್ಟಿದ್ದಾರೆ ಎಂಬುದು. ಈಗಾಗಲೇ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಫಹಾದ್ ತಮಿಳಿನ 'ವಿಕ್ರಂ'ನಲ್ಲೂ ಅದೇ ಮಾದರಿಯ ಪಾತ್ರದಲ್ಲಿ ನಟಿಸಲಿದ್ದಾರೆ.

  ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಫಹಾದ್

  ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಫಹಾದ್

  ತಮ್ಮ ಅತ್ಯದ್ಭುತ ನಟನೆ ಮೂಲಕ ದೇಶದ ಗಮನ ಸೆಳೆದಿರುವ ನಟ ಫಹಾದ್ ಫಾಸಿಲ್, ಕಮಲ್ ಹಾಸನ್ ಜೊತೆಗೆ 'ವಿಕ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರಧಾರಿ ವಿಜಯ್ ಸೇತುಪತಿಗೆ ಸಹಾಯ ಮಾಡುವ ಪಾತ್ರ ಫಹಾದ್‌ದಾಗಿದೆ.

  ವಿಲನ್ ಪಾತ್ರದಲ್ಲಿ ವಿಜಯ್ ಸೇತುಪತಿ

  ವಿಲನ್ ಪಾತ್ರದಲ್ಲಿ ವಿಜಯ್ ಸೇತುಪತಿ

  ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ತಾನು ಮಾಡಿದ ಅಪರಾಧವನ್ನು ಕಣ್ಣಾರೆ ಕಂಡವರನ್ನು ಕೊಲೆ ಮಾಡುತ್ತಾ ಕೊನೆಗೆ ಕಮಲ್ ಹಾಸನ್ ಅನ್ನು ಎದುರು ಹಾಕಿಕೊಳ್ಳುತ್ತಾರೆ ವಿಜಯ್ ಸೇತುಪತಿ. ಇದು ಸಿನಿಮಾದ ಒನ್‌ಲೈನರ್.

  ನಟನೆಯ ಪೈಪೋಟಿ ನೋಡಲು ಸಿನಿಪ್ರೇಕ್ಷಕರ ಕಾತರ

  ನಟನೆಯ ಪೈಪೋಟಿ ನೋಡಲು ಸಿನಿಪ್ರೇಕ್ಷಕರ ಕಾತರ

  ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಮೂವರು ಈ ಕಾಲದ ಅತ್ಯುತ್ತಮ ನಟರು 'ವಿಕ್ರಂ' ಸಿನಿಮಾಕ್ಕಾಗಿ ಒಂದಾಗುತ್ತಿದ್ದು, ಇವರ ನಟನೆಯ ಪೈಪೋಟಿ ಸಿನಿಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವುದು ಖಾಯಂ. ಫಹಾದ್ ಫಾಸಿಲ್‌ಗೆ 'ವಿಕ್ರಂ' ಮೂರನೇ ತಮಿಳು ಸಿನಿಮಾ ಈ ಮೊದಲು, 'ವೇಲೈಕಾರನ್', 'ಸೂಪರ್ ಡಿಲಕ್ಸ್' ಸಿನಿಮಾದಲ್ಲಿ ಫಹಾದ್ ನಟಿಸಿದ್ದಾರೆ.

  ಕೊರೊನ ಪಾಸಿಟಿವ್ ವಿಚಾರವನ್ನ instagramನಲ್ಲಿ ಹಂಚಿಕೊಂಡ Samyuktha Hegde!!
  ಇನ್ನೂ ಇಬ್ಬರು ಪ್ರತಿಭಾವಂತ ನಟರಿದ್ದಾರೆ

  ಇನ್ನೂ ಇಬ್ಬರು ಪ್ರತಿಭಾವಂತ ನಟರಿದ್ದಾರೆ

  ಸಿನಿಮಾದಲ್ಲಿ ಕಮಲ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಜೊತೆಗೆ 'ಅಂಗಮಲೈ ಡೈರೀಸ್', 'ಜಲ್ಲಿಕಟ್ಟು' ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಅಂಟೋನಿ ವರ್ಗೀಸ್ ಮತ್ತು ಖ್ಯಾತ ನೃತ್ಯ ನಿರ್ದೇಶಕ, ನಟ ಪ್ರಭುದೇವಾ ಸಹ ಇರಲಿದ್ದಾರೆ. 'ವಿಕ್ರಂ' ಸಿನಿಮಾವನ್ನು ಲೋಕೇಶ್ ಕನಗರಾಜನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿ ಪಾತ್ರ ಇರುವುದಿಲ್ಲ ಎನ್ನಲಾಗಿದೆ.

  English summary
  Fahadh Fazil will act in Kamal Haassan's Vikram Tamil movie. Vijay Sethupathi also acting in that movie. Lokesh Kanagarajan directing it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X