ಅವಳು ನಾನಲ್ಲ ; ಆದಿತಿ ರಾವ್ ಹೈದರಿ ಹೆಸರಿನಲ್ಲಿ ಮೋಸದ ಜಾಲ, ಸಿದ್ದಾರ್ಥ್ ಪತ್ನಿ ಹಿಂದೆ ಬಿದ್ದ ಕಿರಾತಕ ಯಾರು ?
ಹೇಳಿ ಕೇಳಿ ಇದು 5G ಯುಗ. ಈ ಯುಗದಲ್ಲಿ ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಹಲವರು ಹೈರಾಣಾಗಿದ್ದರೆ ಮತ್ತೊಂದು ಕಡೆ ಸೈಬರ್ ವಂಚಕರಿಂದ ಹಲವರು ಕಂಗಾಲಾಗುತ್ತಿದ್ಧಾರೆ. ಬದಲಾದ ಈ ಕಾಲದಲ್ಲಿ ಹಣದಾಸೆಗೆ ಕಳ್ಳರು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (NCRB)..
ವರದಿಯ ಪ್ರಕಾರ ಭಾರತದಲ್ಲಿ ದಿನಕ್ಕೆ ಸರಾಸರಿ 7,000 ಸೈಬರ್ ಅಪರಾಧ ದೂರುಗಳು ದಾಖಲಾಗುತ್ತಿವೆ. ಈ ಸಂಖ್ಯೆ 2021 ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 85% ಕೇಸ್‌ಗಳು ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿವೆ.

ಇನ್ನೂ ಸೆಲೆಬ್ರೇಟಿಗಳ ಪಾಡು ಹೇಳಲು ಅಸಾಧ್ಯ. ಒಂದು ಕಡೆ ಡಿಜಿಟಲ್ ಕಾಮುಕರು ಇವರ ಹಿಂದೆ ಬಿದ್ದಿರುತ್ತಾರೆ. ಮತ್ತೊಂದು ಕಡೆ ಇವರ ಹೆಸರಿನಲ್ಲಿ ವಂಚನೆ ಮಾಡಲು ಕಿರಾತಕರು ಸದಾ ಸಿದ್ಧವಾಗಿಯೇ ಇರುತ್ತಾರೆ. ಮತ್ತೂ ಕೆಲವರು ಈ ತಾರೆಯರ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಹ್ಯಾಕ್ ಮಾಡುತ್ತಾರೆ.
ಹೀಗೆ ಹ್ಯಾಕ್ ಮಾಡುವದರಿಂದ ಇವರಿಗೆ ಸಿಗುವ ಲಾಭವಾದರೂ ಏನು..? ಎನ್ನುವುದು ಅವರಿಗೆ ಗೊತ್ತಾದರೂ ಸದ್ಯ ತಾರೆಯರ ಹೆಸರಿನಲ್ಲಿ ಮೋಸದ ಬಲೆ ಬೀಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಆದಿತಿ ರಾವ್ ಹೈದರಿ ಪ್ರಕರಣ ಸದ್ಯದ ಉದಾಹರಣೆ.
ಹೌದು, ಆದಿತಿ ರಾವ್ ಹೈದರಿ .. ಪ್ರಖ್ಯಾತ ನಾಯಕಿ. ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮನದರಸಿ. ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಆದಿತಿ ರಾವ್ ಹೈದರಿ ಅವರ ಮೇಲೀಗ ಕಿರಾತಕರ ಕಣ್ಣು ಬಿದ್ದಿದೆ. ಇದಕ್ಕೆ ಪುರಾವೆ ಎನ್ನುವಂತೆ ಆದಿತಿ ರಾವ್ ಅವರ ಫೋಟೊಗಳನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ತನ್ನನ್ನು ತಾನು ಆದಿತಿ ರಾವ್ ಹೈದರಿ ಎಂಬಂತೆ ಬಿಂಬಿಸುತ್ತಿದ್ದಾನೆ. ವಾಟ್ಸಾಫ್ ಮೂಲಕ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾನೆ. ಫೋಟೊಗ್ರಾಫರ್‌ಗಳನ್ನು ಸಂಪರ್ಕಿಸುತ್ತಿದ್ದಾನೆ.
ಅದೃಷ್ಟವಶಾತ್ ಈ ವಿಚಾರ ಆದಿತಿ ರಾವ್ ಹೈದರಿಯ ಗಮನಕ್ಕೆ ಬಂದಿದ್ದು ಆದಿತಿ ರಾವ್ ಹೈದರಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ. ಮೋಸ ಹೋಗಬೇಡಿ ನಿಮ್ಮನ್ನು ಸಂಪರ್ಕ ಮಾಡುತ್ತಿರುವ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಆದಿತಿ ರಾವ್ ಹೈದರಿ,ನನ್ನ ಹೆಸರಿನಲ್ಲಿ ನಕಲಿ ವ್ಯಕ್ತಿಯೊರ್ವ ಫೋಟೊಗ್ರಾಫರ್‌ಗಳನ್ನು ಸಂಪರ್ಕ ಮಾಡುತ್ತಿದ್ಧಾನೆ. ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುತ್ತಿದ್ದಾನೆ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಈ ಮೂಲಕ ನಾನು ವಿಚಾರಗಳನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಕೆಲಸದ ಕುರಿತು ನನ್ನೆಲ್ಲಾ ನಿರ್ಧಾರಗಳು ನನ್ನ ತಂಡದ ಮೂಲಕವೇ ನಾನು ರವಾನೆ ಮಾಡುತ್ತೇನೆ ಎಂದು ಹೇಳಿರುವ ಆದಿತಿ ರಾವ್ ಹೈದರಿ, ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ವ್ಯೆಯಕ್ತಿಕ ಫೋನ್ ಬಳಸುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಹೆಸರಿನಲ್ಲಿ ಯಾರಾದರೂ ನಿಮ್ಮ ಜೊತೆ ವ್ಯವಹಾರ ಮಾಡಿದರೆ ಅವರಿಂದ ಎಚ್ಚರದಿಂದಿರಿ ಎಂದು ದಯವಿಟ್ಟು ಜಾಗರೂಕರಾಗಿರಿ ನಿಮಗೆ ಏನಾದರೂ ವಿಚಿತ್ರ ಎನಿಸಿದರೆ, ನನ್ನ ತಂಡದ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಇತ್ತೀಚೆಗೆ ಆದಿತಿ ರಾವ್ ಹೈದರಿ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಬಂದ ''ಹೀರಾಮಂಡಿ'' ಯಲ್ಲಿ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಸಿದ್ದಾರ್ಥ್ ಜೊತೆ ಕಳೆದ ವರ್ಷ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆದಿತಿ ರಾವ್ ಹೈದರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಪ್ತಪದಿ ತುಳಿದಿದ್ದರು.


Click it and Unblock the Notifications











