ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಜಿತ್‌ಗೆ ಬೆದರಿಕೆ ಕರೆ
ತಮಿಳಿನ ಖ್ಯಾತ ನಟ ಅಜಿತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಶನಿವಾರ ಸಂಜೆ ವೇಳೆಗೆ ಬೆದರಿಕೆ ಕರೆ ಬಂದಿದೆ.
Recommended Video
ಅಜಿತ್ ಅವರ ಇಂಜಮ್‌ಬಕ್ಕಮ್ ನಗರದಲ್ಲಿರುವ ಮನೆಗೆ ಬಾಂಬ್ ಇಟ್ಟಿರುವುದಾಗಿ ಕಿಡಿಕೇಡಿಗಳು ಸುಳ್ಳು ಕರೆ ಮಾಡಿದ್ದರು. ಪೊಲೀಸರು ಮನೆಗೆ ಬಂದು ತನಿಖೆ ಮಾಡಿದ್ದಾರೆ. ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಕರೆ ಹಿನ್ನೆಲೆಯಲ್ಲಿ ಪೊಲೀಸ್, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಬಂದು ಅಜಿತ್ ನಿವಾಸವನ್ನು ತಪಾಸಣೆ ನಡೆಸಿದವು.
ಇದಕ್ಕೆ ಮುನ್ನಾ ಎರಡು ಬಾರಿ ಅಜಿತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಬಂದಿದೆ. ಒಮ್ಮೆ 2014 ರಲ್ಲಿ ಹಾಗೂ 2017 ರಲ್ಲಿ ಇದೇ ರೀತಿಯ ಸುಳ್ಳು ಕರೆ ಬಂದಿತ್ತು.

ಕೆಲವೇ ದಿನಗಳ ಹಿಂದೆ ನಟ ವಿಜಯ್ ಮನೆಗೂ ಇದೇ ರೀತಿ ಸುಳ್ಳು ಬಾಂಬ್ ಕರೆ ಬಂದಿತ್ತು. ಆಗಲೂ ಸಹ ಪೊಲೀಸರು ಪೂರ್ಣ ತಪಾಸಣೆ ಮಾಡಿದರು.
ಅದರ ಹಿಂದೆ ಸೂಪರ್ ಸ್ಟಾರ್ ರಜನೀಕಾಂತ್ ಅವರ ನಿವಾಸಕ್ಕೂ ಸಹ ಇಂಥಹುದೇ ಸುಳ್ಳು ಕರೆ ಬಂದಿತ್ತು. ರಜನೀಕಾಂತ್ ನೀವಾಸಕ್ಕೆ ಆಗಾಗ್ಗೆ ಈ ರೀತಿಯ ಸುಳ್ಳು ಕರೆಗಳು ಬರುತ್ತಲೇ ಇರುತ್ತವೆ. ಪ್ರತಿಬಾರಿಯೂ ಪೊಲೀಸರು ತಪಾಸಣೆ ನಡೆಸುತ್ತಾರೆ.


Click it and Unblock the Notifications











