For Quick Alerts
  ALLOW NOTIFICATIONS  
  For Daily Alerts

  ಸೂರ್ಯಾ ಹೊಸ ಸಿನಿಮಾ ಬಗ್ಗೆ ಸುಳ್ಳುಸುದ್ದಿ: ಗರಂ ಆದ ನಿರ್ಮಾಪಕ

  |

  ಸೂರರೈ ಪೊಟ್ರು ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ನಟ ಸೂರ್ಯಾ ಇದೀಗ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  ಅರುವಾ, ವಡಿವಾಸಲ್, ನವರಸ, ಸೂರ್ಯಾ 39, ಸೂರ್ಯಾ 40, ರಾಕೆಟ್ರಿ, ಪಾರ್ಟಿ ಸಿನಿಮಾಗಳು ಸೂರ್ಯಾ ಕೈಯಲ್ಲಿವೆ. ಇವುಗಳಲ್ಲಿ ಭಾರಿ ಕುತೂಹಲ ಕೆರಳಿಸಿರುವುದು ವೆಟ್ರಿಮಾರನ್ ನಿರ್ದೇಶನದ 'ವಡಿವಾಸಲ್' ಸಿನಿಮಾ.

  ಅಮೇಜಾನ್‌ನಲ್ಲಿ 10 ಕೋಟಿ ವೀಕ್ಷಣೆ ಕಂಡ 'ಸೂರರೈ ಪೊಟ್ರು': ಲಾಭ ಎಷ್ಟು?

  ಈ ಸಿನಿಮಾದ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇದು ಸಿನಿಮಾದ ನಿರ್ಮಾಪಕ ಕಲೈಪುಲಿ ಎಸ್ ತನು ಅವರ ಸಿಟ್ಟೇರಿಸಿದೆ.

  ವೆಟ್ರಿಮಾರನ್ ಸಿನಿಮಾದಿಂದ ಸೂರ್ಯಾ ಹೊರಬಂದಿದ್ದಾರೆ. ನಿರ್ಮಾಪಕರು-ಸೂರ್ಯಾ ನಡುವೆ ವಾಗ್ದಾಳಿ ನಡೆದಿದೆ ಎಂಬೆಲ್ಲಾ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಈ ಗಾಳಿಸುದ್ದಿಗಳಿಗೆಲ್ಲಾ ನಿರ್ಮಾಪಕ ಕಲೈಪುಲಿ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಾರೆ.

  ಸೂರ್ಯಾ-ವೆಟ್ರಿಮಾರನ್ ಜೋಡಿಯ 'ವಡಿವಾಸಲ್' ಸಿನಿಮಾ ಪ್ರಾರಂಭವಾಗಲಿದೆ, ಸಿನಿಮಾ ನಿಂತಿಲ್ಲ, ಅಥವಾ ಸೂರ್ಯಾ ಸಿನಿಮಾದಿಂದ ಹಿಂದೆ ಸರಿದಿಲ್ಲ. ಯಾರೊ ಕಿಡಿಗೇಡಿಗಳು ನನ್ನ ಚಿತ್ರ ಉಳ್ಳ ಫೇಕ್‌ ಟ್ವಿಟ್ಟರ್ ಖಾತೆಯಿಂದ ಹೀಗೊಂದು ಸುಳ್ಳು ಸುದ್ದಿಹಬ್ಬಿಸಿದ್ದಾರೆ ಎಂದಿದ್ದಾರೆ.

  ನಟ ಸೂರ್ಯಾ ಮುಂದಿನ ಸಿನಿಮಾಕ್ಕೆ ಕನ್ನಡತಿ ನಾಯಕಿ?

  ನಟ ಸೂರ್ಯಾ ಇದೇ ಮೊದಲ ಬಾರಿಗೆ ವೆಟ್ರಿಮಾರನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವೆಟ್ರಿಮಾರನ್ ತಮಿಳಿನ ಮಾತ್ರವಲ್ಲದೆ ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಅವರ ಹಿಂದಿನ ಸಿನಿಮಾ ಅಸುರನ್ ಭಾರಿ ಹಿಟ್ ಆಗಿತ್ತು. ಈ ಸೂಪರ್ ಹಿಟ್ ಜೋಡಿ ಜೊತೆಯಾಗಿರುವ 'ವಡಿವಾಸಲ್' ಭಾರಿ ನಿರೀಕ್ಷೆ ಕೆರಳಿಸಿದೆ.

  English summary
  Fake news spreading about Vetrimaran and Suriya's next movie Vadivasal. Producer gave clarity on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X