ವೀಡಿಯೋ ಕಾಲ್‌ನಲ್ಲೇ ಮಗನ ನಿಶ್ವಿತಾರ್ಥ ಮಾಡಿದ ಖ್ಯಾತ ನಟ, ಮಾಜಿ ಕೇಂದ್ರ ಸಚಿವ

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಯಾವುದೋ ಮೂಲೆಯಲ್ಲಿರುವವರು ಮತ್ಯಾವುದೋ ಊರಿನಲ್ಲಿರುವವರನ್ನು ಕೈ ಹಿಡಿಯುತ್ತಾರೆ. ಊರಿಂದ ಊರು, ಜಿಲ್ಲೆ, ರಾಜ್ಯ ದಾಟಿ ದೇಶ- ವಿದೇಶದಲ್ಲಿರುವವರು ಸಂಬಂಧ ಬೆಳೆಸುತ್ತಾರೆ.

ಬಹಳ ವಿಭಿನ್ನ ರೀತಿಯಲ್ಲಿ ಮದುವೆ ಮಾಡಿಕೊಳ್ಳುವವರನ್ನು ನೋಡುತ್ತಿರುತ್ತೇವೆ. ಕೋಟಿ ಕೋಟಿ ಖರ್ಚು ಮಾಡಿ ಅಂಬಾನಿ ಮಗನ ರೀತಿ ವೈಭವೋಪೇತವಾಗಿ ಮದುವೆ ಆಗುವವರು ಇದ್ದಾರೆ. ಬರೀ ದೇವಸ್ಥಾನದಕ್ಕೆ ಹೋಗಿ ತಾಳಿ ಕಟ್ಟಿಕೊಂಡು ಬರುವವರು ನಮ್ಮ ನಡುವೆ ಇದ್ದಾರೆ. ಸಾಮೂಹಿಕ ವಿವಾಹ, ಮಂತ್ರ ಮಾಂಗಲ್ಯ, ರಿಜಿಸ್ಟರ್ ಮ್ಯಾರೇಜ್ ಹೀಗೆ ಭಿನ್ನ ವಿಭಿನ್ನವಾಗಿ ಎರಡು ಮನಸ್ಸು, ದೇಹಗಳ ಕಲ್ಯಾಣ ನಡೆಯುತ್ತದೆ. ಡಿಫ್‌ರೆಂಟ್ ಆಗಿ ಮದುವೆ ಆಗಬೇಕು ಎಂದು ನೀರಿನ ಆಳದಲ್ಲಿ, ಹಾರಾಡುವ ವಿಮಾನದಲ್ಲಿ ಮದುವೆ ಆಗುವುದನ್ನು ಕೇಳಿದ್ದೇವೆ.

Famous actor s son gets engaged to over a video call

ಖ್ಯಾತ ತಮಿಳು ನಟ ಹಾಗೂ ರಾಜಕೀಯ ಮುಖಂಡ ನೆಪೊಲಿಯನ್ ತಮ್ಮ ಮಗನ ನಿಶ್ಚಿತಾರ್ಥವನ್ನು ವೀಡಿಯೋ ಕಾಲ್‌ನಲ್ಲಿ ಮಾಡಿ ಮುಗಿಸಿದ್ದಾರೆ. ಕೆಲ ಅನಿವಾರ್ಯ ಕಾರಣಗಳಿಂದ ಈ ರೀತಿ ತಮ್ಮ ಮಗ ಧನುಷ್ ಮದುವೆ ನಿಶ್ಚಯ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ನೆಪೊಲಿಯನ್ ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ವೀಡಿಯೋ ಕಾಲ್‌ ನಿಶ್ಚಿತಾರ್ಥಕ್ಕೆ ಕಾರಣ ಏನು? ಮುಂದೆ ಓದಿ.

ಒಂದ್ಕಾಲದಲ್ಲಿ ಖಳನಟನಾಗಿ ಪೋಷಕ ನಟನಾಗಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನೆಪೋಲಿಯನ್ ಬಳಿಕ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಹುಟ್ಟೂರು ಬಿಟ್ಟು ಅಮೆರಿಕಾಗೆ ಹೋಗಿ ಫ್ಯಾಮಿಲಿ ಸಮೇತ ಸೆಟ್ಲ್ ಆಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಧನುಷ್ ಸಹ ಒಬ್ಬ.

Famous actor s son gets engaged to over a video call

ಚಿಕ್ಕಂದಿನಲ್ಲೇ ಧನುಷ್ ಮಸ್ಕುಲರ್ ಡಿಸ್ಟ್ರೋಫಿ ಎನ್ನುವ ಸಮಸ್ಯೆಯಿಂದ ಆತ ಬಳಲುತ್ತಿದ್ದಾನೆ. ಹಾಗಾಗಿ ವ್ಹೀಲ್‌ಚೇರ್‌ನಲ್ಲಿ ಉಳಿಯುವಂತಾಗಿದೆ. ಸದ್ಯ ಆತನಿಗೆ ಮದುವೆ ಫಿಕ್ಸ್ ಆಗಿತ್ತು. ನಿಶ್ಚಿತಾರ್ಥ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದ ಧನುಷ್ ಅಮೆರಿಕಾದಿಂದ ಭಾರತಕ್ಕೆ ವಿಮಾನದಲ್ಲಿ ಬರುವುದು ಸಾಧ್ಯವಾಗಲಿಲ್ಲ. ಹಾಗಾಗಿ ತಂದೆ ನೆಪೋಲಿಯನ್ ತಮಿಳುನಾಡಿನ ತಿರುನಲ್ವೇಲಿಗೆ ಬಂದಿದ್ದಾರೆ.

ಭಾವಿ ಸೊಸೆ ಅಕ್ಷಯ ಭಾರತದಲ್ಲಿ.. ಮಗ ಧನುಷ್ ಅಮೇರಿಕಾದಲ್ಲಿ.. ವೀಡಿಯೋ ಕಾಲ್‌ನಲ್ಲೇ ನಿಶ್ವಿತಾರ್ಥ ನೆರವೇರಿಸಿದ್ದಾರೆ. ಮಗ ವೀಡಿಯೋ ಕಾಲ್‌ನಲ್ಲಿ ನೋಡುತ್ತಿರುವಂತೆ ನೆಪೋಲಿಯನ್ ದಂಪತಿ ಬೀಗರ ಜೊತೆ ತಟ್ಟೆ ಬದಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ಇನ್ನು ಧನುಷ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿಶ್ಚಿತಾರ್ಥದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಕೆಲವೇ ತಿಂಗಳಲ್ಲಿ ಧನುಷ್- ಅಕ್ಷಯ ಮದುವೆ ನಡೆಯಲಿದೆ. ಆಪ್ತರನ್ನು, ಸಿನಿಮಾ ತಾರೆಯರನ್ನು ಮಗನ ಮದುವೆಗೆ ಆಹ್ವಾನಿಸಲು ನೆಪೊಲಿಯನ್ ನಿರ್ಧರಿಸಿದ್ದಾರೆ. ನೆಪೋಲಿಯನ್ ಕನ್ನಡದಲ್ಲಿ 'ಗರ್ವನಮೆಂಟ್', 'ಜಯಸೂರ್ಯ', 'ಬಿಲ್ಲಾ ರಂಗ' ಹಾಗೂ 'ರೌಡಿ ಬ್ರದರ್ಸ್' ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actor's son gets engaged via video call
Read more about: tamil actor kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X