For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಪುಟ್ನಂಜ' ಬೆಡಗಿಯ ರೋಮ್ಯಾನ್ಸ್

  |

  ತಲೈವಾ ರಜನಿಕಾಂತ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸೂಪರ್ ಸ್ಟಾರ್ ಸಿನಿಮಾ ಮಾಡುತ್ತಾರಾ ಅಥವಾ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಿಸಿಕೊಳ್ಳುತ್ತಾರಾ ಎನ್ನುವ ಗೊಂದಲ ಕೂಡ ಅನೇಕರಲ್ಲಿ ಇದೆ. ಆದರೆ ಮೂಲಗಳ ಪ್ರಕಾರ ಸೂಪರ್ ಸ್ಟಾರ್ 'ತಲೈವರ್ 168' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  10 ದಿನಗಳು ಮುಂಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಜನಿಕಾಂತ್10 ದಿನಗಳು ಮುಂಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಜನಿಕಾಂತ್

  ಈಗಾಗಲೆ 'ತಲೈವರ್ 168' ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದ್ದು ತಲೈವಾಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸೂಪರ್ ಸ್ಟಾರ್ ಜೊತೆ 'ಪುಟ್ನಂಜ' ಖ್ಯಾತಿಯ ನಟಿ ಮೀನಾ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಖುಷ್ಬೂ ಜಾಗಕ್ಕೆ ಮೀನಾ

  ಖುಷ್ಬೂ ಜಾಗಕ್ಕೆ ಮೀನಾ

  ಈ ಮೊದಲು ಮೀನಾ ಜಾಗಕ್ಕೆ ನಟಿ ಖುಷ್ಬೂ ಹೆಸರು ಕೇಳಿ ಬರುತ್ತಿತ್ತು. ಆದರೀಗ ಖುಷ್ಬೂ ಬದಲಿಗೆ ಮೀನಾ ರಜನಿಕಾಂತ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಮೀನಾ ಜೊತೆ ಮಾತುಕತೆ ನಡೆಸಿರುವ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡುವುದೊಂದು ಭಾಕಿ ಇದೆ. ಮೀನಾ ಮತ್ತು ರಜನಿಕಾಂತ್ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ.

  ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್

  ರಜಿನಿಕಾಂತ್ ಮಗಳಾಗಿ ಕೀರ್ತಿ

  ರಜಿನಿಕಾಂತ್ ಮಗಳಾಗಿ ಕೀರ್ತಿ

  ವಿಶೇಷ ಅಂದರೆ ಚಿತ್ರದಲ್ಲಿ 'ಮಹಾನಟಿ' ಖ್ಯಾತಿಯ ನಟಿ ಕೀರ್ತಿ ಸುರೇಶ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಸೂಪರ್ ಸ್ಟಾರ್ ಮಗಳ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರಂತೆ. ಮೊದಲ ಬಾರಿಗೆ ಕೀರ್ತಿ ಸುರೇಶ್, ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಿರುಥೈ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಹುಟ್ಟುಹಬ್ಬಕ್ಕೆ ಸೆಟ್ಟೇರುವ ಸಾಧ್ಯತೆ

  ಹುಟ್ಟುಹಬ್ಬಕ್ಕೆ ಸೆಟ್ಟೇರುವ ಸಾಧ್ಯತೆ

  ರಜನಿಕಾಂತ್ ಸದ್ಯ ದರ್ಬಾರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇನ್ನು ಇದೇ ತಿಂಗಳು 12ಕ್ಕೆ ಸೂಪರ್ 69ನೇ ಹುಟ್ಟುಹಬ್ಬ. ಅಭಿಮಾನಿಗಳು ಈಗಾಗಲೆ ತಲೈವಾ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಹುಟ್ಟುಹಬ್ಬದ ದಿನವೇ 'ತಲೈವರ್ 168' ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.

  ರಜನಿಗೆ ವಿಲನ್ ಆಗುವ ಆಫರ್ ರಿಜೆಕ್ಟ್ ಮಾಡಿದ್ರು ರಕ್ಷಿತ್ರಜನಿಗೆ ವಿಲನ್ ಆಗುವ ಆಫರ್ ರಿಜೆಕ್ಟ್ ಮಾಡಿದ್ರು ರಕ್ಷಿತ್

  'ಹೆಂಡ್ತೀರ್ ದರ್ಬಾರ್' ಕನ್ನಡ ಕೊನೆಯ ಸಿನಿಮಾ

  'ಹೆಂಡ್ತೀರ್ ದರ್ಬಾರ್' ಕನ್ನಡ ಕೊನೆಯ ಸಿನಿಮಾ

  ನಟಿ ಮೀನಾ ಇತ್ತೀಚಿಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಅಪರೂಪ. ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ಮಾಡುತ್ತಿರುವ ಮೀನಾ ಈಗ ಅನೇಕ ವರ್ಷಗಳ ಬಳಿಕ ಸೂಪರ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಮೀನಾ ಕನ್ನಡದಲ್ಲಿ ಕೊನೆಯದಾಗಿ 'ಹೆಂಡ್ತೀರ್ ದರ್ಬಾರ್' ಚಿತ್ರದಲ್ಲಿ ಮಿಂಚಿದ್ದಾರೆ.

  English summary
  Famous Actress Meena is heroine for Super star Rajinikanth Thalaivar 168 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X