ಬರೋಬ್ಬರಿ 12 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ ಬಂದ ಖ್ಯಾತ ನಟಿ

ಸಿನಿಮಾ ಅನ್ನೋದು ಬಿಟ್ಟೆನೆಂದರೂ ಬಿಡದೀ ಮಾಯೆ. ಒಮ್ಮೆ ಬಣ್ಣ ಹಚ್ಚಿದ ಮೇಲೆ ಮುಗೀತು. ಮತ್ತೆ ಮತ್ತೆ ತೆರೆಮೇಲೆ ಬರಬೇಕು ಎನ್ನುವ ಆಸೆ ಮೂಡುತ್ತದೆ. ಸಿನಿಮಾಗೆ ಎಂಥಹವರನ್ನು ಸೆಳೆಯುವ ಆಯಸ್ಕಾಂತೀಯ ಶಕ್ತಿಯಿದೆ. ಸಿನಿಮಾ ಸಹವಾಸವೇ ಬೇಡ ಎಂದು ಹೋದವರು ಮತ್ತೆ ವಾಪಸ್ ಬಂದಿದ್ದಾತೆ.

90ರ ದಶಕದ ಖ್ಯಾತ ನಟಿಯೊಬ್ಬರು ರಾಜಕೀಯರಂಗದಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. ಹಾಗಾಗಿ ಸಿನಿಮಾಗಳಲ್ಲಿ ನಟಿಸೋದು ನಿಲ್ಲಿಸಿದ್ದರು. ಸದಾ ಸರ್ಕಾರ ಕೆಲಸಗಳು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡುತ್ತಾ ಕಾಣಿಸಿಕೊಳ್ಳುತ್ತಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಕೆಲ ದಿನಗಳ ಸೈಲೆಂಟ್ ಆಗಿದ್ದ ನಟಿ 12 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಆ ನಟಿ ಮತ್ಯಾರು ಅಲ್ಲ ರೋಜಾ.

Famous actress Returns to Cinema After 12 Years Makes a Comeback with Tamil Film Lenin Pandiyan

ತಿರುಪತಿಯಲ್ಲಿ ಹುಟ್ಟಿ ಬೆಳೆದ ಶ್ರೀಲತಾ 1991ರಲ್ಲಿ ಬಂದ 'ಪ್ರೇಮ ತಪಸ್ಸು' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸೆಲ್ವಮಣಿ ನಿರ್ದೇಶನದ 'ಚೆಂಬರುತ್ತಿ' ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಗ್ಲಾಮರಸ್ ರೋಲ್‌ಗಳಲ್ಲಿ ಕೂಡ ಮಿಂಚಿ ಗಮನ ಸೆಳೆದಿದ್ದರು. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ರೋಜಾ ಕಮಾಲ್ ಮಾಡಿದ್ದರು.

1993ರಲ್ಲಿ ಬಂದಿದ್ದ 'ಗಡಿಬಿಡಿ ಗಂಡ' ಕನ್ನಡದಲ್ಲಿ ರೋಜಾ ನಟಿಸಿದ ಚೊಚ್ಚಲ ಚಿತ್ರ. 'ಕಲಾವಿದ', 'ಪ್ರೇಮೋತ್ಸವ', 'ಗ್ರಾಮ ದೇವತೆ', 'ಪರ್ವ' ಹಾಗೂ 'ಮೌರ್ಯ' ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ರೋಜಾ ಮಿಂಚಿದ್ದಾರೆ. 90ರ ದಶಕದಲ್ಲಿ ನಾಯಕಿಯಾಗಿ ಮರೆದ ಚೆಲುವೆ ಬಳಿಕ ನಿಧಾನವಾಗಿ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. 1998ರಲ್ಲಿ ಆಂಧ್ರದ ಟಿಡಿಪಿ ಪಕ್ಷ ಸೇರಿದ್ದ ರೋಜಾ ರಾಜಕೀಯರಂಗದಲ್ಲಿ ಕೂಡ ಮೆರೆದರು.

2 ಬಾರಿ ಟಿಡಿಪಿ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ರೋಜಾ ಬಳಿಕ ವೈಎಸ್‌ಆರ್‌ಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. 2014 ಹಾಗೂ 2019ರಲ್ಲಿ ನಗರಿ ಕ್ಷೇತ್ರದಿಂದ ಗೆದ್ದು ಶಾಸಕಿಯಾಗಿದ್ದರು. ಜಗನ್ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿ ಕೂಡ ಸೇವೆ ಸಲ್ಲಿಸಿದ್ದರು. 2024ರ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಎದುರು ವೈಎಸ್‌ಆರ್‌ಪಿ ಸೋತಿತ್ತು. ರೋಜಾ ತಮ್ಮದೇ ಕ್ಷೇತ್ರದಲ್ಲಿ ಸೋಲುಂಡರು.

ಸದ್ಯ 'ಲೆನಿನ್ ಪಾಂಡಿಯನ್' ಎಂಬ ತಮಿಳು ಚಿತ್ರದಲ್ಲಿ ರೋಜಾ ನಟಿಸಿದ್ದಾರೆ. ದಶಕದ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ಡಿ ಗ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಖುಷ್ಬು ಸೇರಿದಂತೆ ಅಭಿಮಾನಿಗಳು ಚಿತ್ರರಂಗದಲ್ಲಿ ರೋಜಾ ಅವರ ಸೆಕೆಂಡ್ ಇನ್ನಿಂಗ್ಸ್‌ಗೆ ಶುಭ ಕೋರಿದ್ದಾರೆ.

ರಾಜಕೀಯರಂಗದಲ್ಲಿ ರೋಜಾ ಸಾಕಷ್ಟು ನೋವು ಅನುಭವಿಸಿದ್ದರು. ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಜೊತೆಗೆ ವಿರೋಧ ಪಕ್ಷದವರ ಕಟು ಟೀಕೆಗಳಿಗೆ ಗುರಿಯಾಗಿದ್ದರು. ನಿರ್ದೇಶಕ ಸೆಲ್ವಮಣಿ ಅವರನ್ನು 2002ರಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ರೋಜಾ ಕಾರಣಕ್ಕೆ ಮಕ್ಕಳು ಕೂಡ ಸೋಶಿಯಲ್ ಮೀಡಿಯಾ ಟ್ರೋಲ್ ಎದುರಿಸುವಂತಾಗಿತ್ತು.

ತಮಿಳಿನ 'ಎನ್ ವಝಿ ಥಾನಿ ವಝಿ' ರೋಜಾ ನಟಿಸಿದ್ದ ಕೊನೆಯ ಸಿನಿಮಾ. ಇನ್ನು ಕನ್ನಡದಲ್ಲಿ 'ಮೌರ್ಯ' ಚಿತ್ರದಲ್ಲಿ ನಟಿಸಿದ್ದೆ ಕೊನೆ. ಎಸ್. ನಾರಾಯಣ್ ನಿರ್ದೇಶನದ ಆ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತಾಯಿ ಪಾತ್ರದಲ್ಲಿ ರೋಜಾ ಮಿಂಚಿದ್ದರು. 'ನೂರು ಸಾರಿ ಹೇಳಿದರೂ' ಹಾಡು ಸೂಪರ್ ಹಿಟ್ ಆಗಿತ್ತು.

More from Filmibeat

Read more about: roja kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X