ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ
Recommended Video
ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಈಗ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮೇಲೆ ಹರ್ಭಜನ್ ಏನು ಮಾಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿತ್ತು. ಆದ್ರೀಗ ಹರ್ಭಜನ್ ತೆರೆ ಮೇಲೆ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.
ಹೌದು, ಹರ್ಭಜನ್ ಸಿಂಗ್ ಭರ್ಜರಿ ಸುದ್ದಿಯೊಂದಿಗೆ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ವಿಶೇಷ ಅಂದರೆ ಈ ಬಾರಿ ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಸಿನಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಹರ್ಭಜನ್ ಸಿಂಗ್ 'ಫ್ರೆಂಡ್ ಶಿಪ್' ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿ, ಹರ್ಭಜನ್ ಸಿನಿಮಾ ಬಗ್ಗೆ ತಮಿಳಿನಲ್ಲಿಯೆ ಬರೆದುಕೊಂಡಿದ್ದಾರೆ. ಹರ್ಭಜನ್ ಸಿಂಗ್ ಮೊದಲ ಸಿನಿಮಾದ ಫಸ್ಟ್ ಲುಕ್ ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಅಂದ್ಹಾಗೆ ಪೋಸ್ಟರ್ ನಲ್ಲಿ ಇಬ್ಬರು ವ್ಯಕ್ತಿಗಳ ಕೈಗಳಿಗೆ ಒಂದೇ ಬೇಡಿ ಹಾಕಲಾಗಿದೆ. ಈ ಪೋಸ್ಟರ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್ ನ ಕೆಳಗೆ ಇದೆ ಮೊದಲ ಬಾರಿಗೆ ಕ್ರಿಕೆಟ್ ಲೆಜೆಂಡ್ ಒಬ್ಬರು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎದು ಬರೆಯಲಾಗಿದೆ.
ಫ್ರೆಂಡ್ ಶಿಪ್ ಚಿತ್ರಕ್ಕೆ ಇಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾನ್ ಪೌಲ್ ಹಾಗೂ ಶ್ಯಾಮ್ ಸೂರ್ಯ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ಭಜ್ಜಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಟಪ್, ಸ್ಟೈಲ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.


Click it and Unblock the Notifications











