ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯ ಮಗಳು ಚಿತ್ರರಂಗಕ್ಕೆ ಎಂಟ್ರಿ..

ಸ್ಟಾರ್ ನಟ, ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದೇನು ಅಲ್ಲ. ದಶಕಗಳಿಂದ ಇದು ನಡೆಯುತ್ತಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್‌ ಎಲ್ಲಾ ಕಡೆ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ನಟ, ನಟಿಯರು ಬರುತ್ತಲೇ ಇರುತ್ತಾರೆ. ತಂತ್ರಜ್ಞರ ಮಕ್ಕಳು ನಾಯಕ, ನಾಯಕಿ ಆಗಿರುವುದು ಅಥವಾ ತೆರೆಹಿಂದೆ ಕೆಲಸ ಮಾಡುವುದು ಗೊತ್ತೇಯಿದೆ. ಇತ್ತೀಚೆಗೆ ನೆಪೋಟಿಸಂ ವಿವಾದ ಸದ್ದು ಮಾಡಿದ್ದು ಮರೆಯುವಂತಿಲ್ಲ.

ಸಿನಿಮಾ ಹಿನ್ನೆಲೆ ಇದ್ದು ಬಿಟ್ಟರೆ ಸಾಕು ಅಂದ, ಪ್ರತಿಭೆ ಇಲ್ಲದೇ ಇದ್ದರೂ ಅವಕಾಶ ಸಿಕ್ಕಿಬಿಡುತ್ತದೆ ಎನ್ನುವ ವಾದ ಬಹುತೇಕರದ್ದು. ಏನೇ ಹಿನ್ನೆಲೆ ಇದ್ದರೂ ಅದು ಒಂದೆರಡು ಚಿತ್ರಕ್ಕಷ್ಟೆ. ಚಿತ್ರರಂಗದಲ್ಲಿ ಉಳಿದು ಬೆಳೆಯಬೇಕು ಅಂದರೆ ಪ್ರತಿಭೆ, ಪರಿಶ್ರಮ ಬೇಕೇಬೇಕು ಎನ್ನುವ ವಾದ ಕೆಲವರದ್ದು. ಏನೇ ನೆಪೋಟಿಸಂ ಎಂದು ಚರ್ಚೆ ಮಾಡಿದರೂ ಸ್ಟಾರ್ ನಟ, ನಟಿಯರ ಮಕ್ಕಳು ಬಣ್ಣದಲೋಕಕ್ಕೆ ಕಾಲಿಡುತ್ತಲೇ ಇದ್ದಾರೆ. ಪ್ರತಿಭೆ, ಅದೃಷ್ಟ ಇದ್ದವಳು ಉಳಿಯುತ್ತಾರೆ. ಇಲ್ಲದವರು ಮರೆಯಾದ ಉದಾಹರಣೆ ಕಣ್ಣ ಮುಂದಿದೆ.

Famous South Indian actress s daughter is ready to make her cinema debut

ಇದೀಗ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯ ಮಗಳು ಬಣ್ಣದಲೋಕಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಆಕೆಯ ಹೊಸ ಫೋಟೊಶೂಟ್ ಸಖತ್ ಸೌಂಡ್ ಮಾಡ್ತಿದೆ. ಇದನ್ನು ನೋಡಿ ಯಾವಾಗ ಸಿನಿ ಆರಂಗೇಟ್ರಂ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಿಢೀರನೆ ಆಕೆಯ ಫೋಟೊಗಳು ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ನಟ, ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಅದೇ ರೀತಿ ಈಗ ಅವಂತಿಕಾ ಸಿನಿಮಾದಲ್ಲಿ ನಟಿಸಬೇಕು ಎಂದು ಕೆಲವರು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಅವಂತಿಕಾ ಸುಂದರ್ ಈಗಾಗಲೇ ಚಿತ್ರರಂಗಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನು ಸಹೋದರಿ ಆನಂದಿತಾ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬರು ಸಿನಿಮಾ ನಿರ್ಮಾಣ ಹಾಗೂ ಮತ್ತೊಬ್ಬರು ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. ಆನಂದಿತಾ ಈಗಾಗಲೇ ತಮ್ಮ ಅವ್ನಿ ಸಿನಿಮ್ಯಾಕ್ಸ್ ಚಿತ್ರ ನಿರ್ಮಾಣ ಸಂಸ್ಥೆಯ ಡೈರೆಕ್ಟರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಅವಂತಿಕಾ ಸಿನಿಮಾ ಡೆಬ್ಯೂ ಇನ್ನೂ ಆಗಿಲ್ಲ. ಬಾಲನಟಿಯಾಗಿ 2 ತೆಲುಗು ಚಿತ್ರಗಳಲ್ಲಿ ಆಕೆ ನಟಿಸಿದ್ದಾರೆ.

Famous South Indian actress s daughter is ready to make her cinema debut

ಅಂದಹಾಗೆ ಅವಂತಿಕಾ ಹಾಗೂ ಆನಂದಿತಾ ತಮಿಳಿನ ಖ್ಯಾತ ನಟಿ ಖುಷ್ಬೂ ಹಾಗೂ ನಿರ್ದೇಶಕ ಸುಂದರ್. ಸಿ ದಂಪತಿಯ ಮಕ್ಕಳು. ತಾಯಿಯನ್ನೇ ಹೋಲುವ ಆವಂತಿಕಾ ಚಿತ್ರರಂಗಕ್ಕೆ ಬರುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಸದ್ಯ ಆಕೆಯ ಹೊಸ ಫೋಟೊಶೂಟ್ ಮತ್ತಷ್ಟು ಕುತೂಹಲ ಮೂಡಿಸಿದೆ. ಟ್ರೆಡೀಷನಲ್, ಮಾಡ್ರನ್ ಹೀಗೆ ಎಲ್ಲರೂ ಲುಕ್‌ನಲ್ಲಿ ಅವಂತಿಕಾ ಮಾಡಿಸಿರುವ ಫೋಟೊಶೂಟ್ ಅಭಿಮಾನಿಗಳ ಗಮನ ಸೆಳೆದಿದೆ.

ಮಕ್ಕಳ ಸಿನಿ ಕರಿಯರ್ ಬಗ್ಗೆ ಖುಷ್ಭು ಸುಂದರ್ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ದೊಡ್ಡಮಗಳು ಅವಂತಿಕಾ ನಟನೆಯಲ್ಲಿ ಆಸಕ್ತಿ ಇದೆ ಎನ್ನುತ್ತಾಳೆ. ನಟಿಸಲಿ, ನಮ್ಮ ಬ್ಯಾನರ್ ಅಲ್ಲ. ಬೇರೆ ಬ್ಯಾನರ್‌ನಲ್ಲೇ ಆಕೆ ಚಿತ್ರರಂಗಕ್ಕೆ ಪರಿಚಯವಾಗುತ್ತಾಳೆ ಎಂದು ಕಳೆದ ವರ್ಷ ಸಂದರ್ಶನದಲ್ಲಿ ಖುಷ್ಬೂ ಹೇಳಿದ್ದರು. ನಟಿ ಖುಷ್ಬೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ರಣಧೀರ' ಸಿನಿಮಾ ಮೂಲಕ ಆಕೆಯನ್ನು ರವಿಚಂದ್ರನ್ ಕನ್ನಡಕ್ಕೆ ಪರಿಚಯಿಸಿದ್ದರು.

ರವಿಚಂದ್ರನ್ ಹಾಗೂ ಖುಷ್ಬೂ ಆತ್ಮೀಯ ಸ್ನೇಹಿತರು. ಎರಡೂ ಕುಟುಂಬಗಳ ನಡುವೆ ಉತ್ತಮ ಒಡನಾಟವಿದೆ. 30 ವರ್ಷಗಳ ಹಿಂದೆ ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಮಾಡಿದ್ದ ಸಹಾಯವನ್ನು ಖುಷ್ಬೂ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ಖುಷ್ಬೂ ಪುತ್ರಿ ಅವಂತಿಕಾ ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
A well-known South Indian actress’s daughter is gearing up for her first movie;
Read more about: kushboo kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X