For Quick Alerts
  ALLOW NOTIFICATIONS  
  For Daily Alerts

  ನಯನ ಜೊತೆ ಕಿಸ್ ಮಾಡುವ ಫೋಟೋ ತೋರಿಸಿ: ವಿಘ್ನೇಶ್ ಕೊಟ್ಟ ಉತ್ತರವೇನು?

  |

  'ಲೇಡಿ ಸೂಪರ್ ಸ್ಟಾರ್' ನಯನತಾರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಭಾನುವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳು ಜೊತೆ ಪ್ರಶ್ನೋತ್ತರ ಮಾಡಿದರು. ಈ ವೇಳೆ ಕೆಲವರು ವಿಘ್ನೇಶ್ ನಿರೀಕ್ಷೆ ಮಾಡದ ಪ್ರಶ್ನೆಗಳನ್ನು ಕೇಳಿ ಅಚ್ಚರಿ ಮೂಡಿಸಿದರು. ಕಳೆದ ಐದಾರು ವರ್ಷದಿಂದ ನಯನಾತಾರ ಮತ್ತು ವಿಘ್ನೇಶ್ ಶಿವನ್ ಡೇಟಿಂಗ್ ಮಾಡ್ತಿದ್ದಾರೆ. ಆರಂಭದಲ್ಲಿ ಇವರಿಬ್ಬರ ಪ್ರೀತಿ ಗೌಪ್ಯವಾಗಿತ್ತು. ಆದ್ರೀಗ, ನಯನಾ ಮತ್ತು ವಿಘ್ನೇಶ್ ಪ್ರೀತಿ ತೆರೆದ ಪುಸ್ತಕ.

  ತುಂಬಾ ವರ್ಷದಿಂದ ಒಟ್ಟಿಗೆ ಸುತ್ತಾಡುತ್ತಿರುವ ಈ ಜೋಡಿಯ ಮದುವೆ ಯಾವಾಗ ಎನ್ನುವುದು ಹಾಟ್ ಟಾಪಿಕ್ ಆಗಿದೆ. ವಿಘ್ನೇಶ್ ಹಮ್ಮಿಕೊಂಡಿದ್ದ ಪ್ರಶ್ನೋತ್ತರ ವೇಳೆ ಮದ್ವೆ ಕುರಿತು ಹೆಚ್ಚು ಜನರು ಪ್ರಶ್ನಿಸಿದ್ದರು. ಈ ನಡುವೆ ಅಭಿಮಾನಿಯೊಬ್ಬ ''ನೀವು-ನಯನತಾರಾ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಳ್ಳಿ'' ಎಂದು ಕೇಳಿದರು. ಈ ಪ್ರಶ್ನೆಯಿಂದ ಸರ್ಪ್ರೈಸ್ ಆದ ವಿಘ್ನೇಶ್ ಸ್ಮಾರ್ಟ್ ಆಗಿ ಪ್ರತಿಕ್ರಿಯಿಸಿದರು. ಮುಂದೆ ಓದಿ...

  ಕಿಸ್ ಫೋಟೋ ಹಂಚಿಕೊಳ್ಳಿ

  ಕಿಸ್ ಫೋಟೋ ಹಂಚಿಕೊಳ್ಳಿ

  ನಯನತಾರಾ ಮತ್ತು ನೀವು ಕಿಸ್ ಮಾಡುತ್ತಿರುವ ಫೋಟೋ ಎಂದು ಕೇಳಿದ ಅಭಿಮಾನಿಗೆ ವಿಘ್ನೇಶ್ ಕೊಟ್ಟ ಉತ್ತರ ಅವರ ಬುದ್ದಿವಂತಿಕೆ ಪ್ರದರ್ಶಿಸಿದೆ. ''ಕಿಸ್ ಮಾಡುವ ವೇಳೆ ನಾನು ಕಾರ್ಯನಿರತವಾಗಿದ್ದೆ, ಆ ಸಮಯದಲ್ಲಿ ಬೇರೊಬ್ಬರು ಫೋಟೋ ಕ್ಲಿಕ್ ಮಾಡಬೇಕು'' ಎಂದು ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ.

  ನಯನತಾರ-ವಿಘ್ನೇಶ್ ಮದುವೆ ವಿಳಂಬವಾಗಲು ಕಾರಣ 'ಹಣ'ನಯನತಾರ-ವಿಘ್ನೇಶ್ ಮದುವೆ ವಿಳಂಬವಾಗಲು ಕಾರಣ 'ಹಣ'

  ಕಿಸ್ ಫೋಟೋ ಹಂಚಿಕೊಂಡಿದ್ದ ವಿಘ್ನೇಶ್

  ಕಿಸ್ ಫೋಟೋ ಹಂಚಿಕೊಂಡಿದ್ದ ವಿಘ್ನೇಶ್

  ನಯನತಾರ ಮತ್ತು ವಿಘ್ನೇಶ್ ಶಿವನ್ ಒಟ್ಟಿಗೆ ಕಾಣಿಸಿಕೊಂಡಿರುವ ಬಹಳಷ್ಟು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ರೊಮ್ಯಾಂಟಿಕ್ ಆಗಿರುವ ಫೋಟೋ ಶೇರ್ ಮಾಡಿದ್ದು ಅಪರೂಪ. ಆದರೂ, ಬಹಳ ದಿನಗಳ ಹಿಂದೆ ವಿಘ್ನೇಶ್ ಒಂದು ಫೋಟೋ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ನಯನತಾರ ಹಣೆಗೆ ವಿಘ್ನೇಶ್ ಮುತ್ತಿಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ಫೋಟೋ ಈಗ ವೈರಲ್ ಆಗಿದೆ.

  ನಯನತಾರನ ಏಕೆ ಮದ್ವೆ ಆಗುತ್ತಿಲ್ಲ?

  ನಯನತಾರನ ಏಕೆ ಮದ್ವೆ ಆಗುತ್ತಿಲ್ಲ?

  ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ''ನೀವು ಏಕೆ ನಯನತಾರಾ ಮೇಡಂನ ಮದ್ವೆ ಆಗುತ್ತಿಲ್ಲ,? ಬಹಳ ಕುತೂಹಲದಿಂದ ಕಾಯ್ತಿದ್ದೇನೆ'' ಎಂದು ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ವಿಘ್ನೇಶ್ ''ಮದುವೆ ಮತ್ತು ಎಲ್ಲದಕ್ಕೂ ಬಹಳ ಖರ್ಚಾಗುತ್ತದೆ. ಅದಕ್ಕಾಗಿ ಹಣ ಸಂಗ್ರಹಿಸಿ ಇಡುತ್ತಿದ್ದೇವೆ. ಈ ಕೊರೊನಾ ಎಲ್ಲಾ ಮುಗಿಲಿ'' ಎಂದಿದ್ದಾರೆ.

  ರೇವತಿ ಗರ್ಭಿಣಿಯಾಗಿರೋ ವಿಚಾರ ತಿಳಿದ ರಾಧಿಕಾ ಕುಮಾರಸ್ವಾಮಿ ಏನ್ ಮಾಡಿದ್ರು ನೋಡಿ | Filmibeat Kannada
  ನಿಶ್ಚಿತಾರ್ಥ ಆಗಿದ್ಯಾ?

  ನಿಶ್ಚಿತಾರ್ಥ ಆಗಿದ್ಯಾ?

  'ನಾನುಮ್ ರೌಡಿ ಧಾನ್' ಎಂಬ ಚಿತ್ರದ ವೇಳೆ ನಯನತಾರಾ ಮತ್ತು ವಿಘ್ನೇಶ್ ಪ್ರೀತಿಯಲ್ಲಿ ಬಿದ್ದರು. ಈ ಸಿನಿಮಾ ಬಂದು ಆರು ವರ್ಷ ಆಗಿದೆ. ಒಂದಿಷ್ಟು ವರದಿಗಳ ಪ್ರಕಾರ, ನಯನತಾರ ಮತ್ತು ವಿಘ್ನೇಶ್ ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಮದುವೆ ಕುರಿತು ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

  English summary
  One of the Fan asked Vignesh shivan to share Kissing photo of Nayanathara and You. what he was react?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X