ಮಿಲ್ಕಿ ಬ್ಯೂಟಿ ತಮನ್ನಾರನ್ನು ಬಿಗಿದಪ್ಪಿ ಮುತ್ತು ಕೊಟ್ಟುಬಿಟ್ಟ ಅಭಿಮಾನಿ
ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ನೋಡುವುದೇ ಕಷ್ಟದ ಕೆಲಸ. ಆಗೊಮ್ಮೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾರೆಯರನ್ನು ನೋಡಿದ್ರು, ಅಷ್ಟು ಸುಲಭವಾಗಿ ಹತ್ತಿರ ಹೋಗಲು ಸಾಧ್ಯವಿಲ್ಲ. ಬೌನ್ಸರ್ಸ್, ಬಾಡಿಗಾರ್ಡ್ಸ್, ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಸ್ಟಾರ್ ನಟ, ನಟಿಯರು ಓಡಾಡುತ್ತಾರೆ. ಅಭಿಮಾನಿಗಳು ಸದಾ ಮುತ್ತಿಕೊಳ್ಳುತ್ತಾರೆ.
ಅವಕಾಶ ಸಿಕ್ಕರೆ ನೆಚ್ಚಿನ ನಟ, ನಟಿಗೆ ಅಭಿಮಾನಿಗಳು ಕೈ ಕುಲುಕಬಹುದು. ಅದೃಷ್ಟ ಚೆನ್ನಾಗಿದ್ದರೆ ಪಕ್ಕ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಬಹುದು. ಮಹಾ ಅಂದ್ರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶ ಸಿಗುತ್ತದೆ. ಇತ್ತೀಚೆಗೆ ಕೆಲ ನಟ, ನಟಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳಿಂದ ಕಹಿ ಅನುಭವ ಎದುರಾಗುತ್ತಿದೆ. ಹಾಗಾಗಿ ಇದಕ್ಕೆಲ್ಲಾ ಅಷ್ಟು ಸುಲಭವಾಗಿ ಆಸ್ಪದ ಸಿಗುವುದಿಲ್ಲ. ಆದರೆ ಮಿಲ್ಕಿ ಬ್ಯೂಟಿ ತಮನ್ನಾಗೆ ಅಭಿಮಾನಿಯೊಬ್ಬರು ಏಕಾಏಕಿ ಮುತ್ತು ಕೊಟ್ಟಿದ್ದಾರೆ. ಕೂಡಲೇ ಆಕೆ ಕೂಡ ಆ ಅಭಿಮಾನಿಗೆ ಮುತ್ತು ಕೊಟ್ಟಿರುವುದು ವಿಶೇಷ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್ ನಟಿಯರು ಅಭಿಮಾನಿಗಳನ್ನು ಅಷ್ಟು ಹತ್ತಿರಕ್ಕೆ ಬಿಟ್ಟುಕೊಳ್ಳುವುದೇ ಊಹೆಗೆ ನಿಲುಕ್ಕದ್ದು. ಇನ್ನು ಅಭಿಮಾನಿಗಳು ಮುತ್ತು ಕೊಡಬಹುದಾ? ಎಂದು ಕೇಳುವುದು. ಅದಕ್ಕೆ ಆಕೆ ಸರಿ ಎಂದು ಹೇಳುವುದು. ಅಭಿಮಾನಿ ಪ್ರೀತಿಯಿಂದ ನಟಿಯ ಕೆನ್ನೆಗೆ ಮುತ್ತು ಕೊಡುವುದು, ಮರಳಿ ತಮ್ಮನ್ನಾ ಕೂಡ ಆ ಅಭಿಮಾನಿ ಕೆನ್ನೆಗೆ ಮುತ್ತಿಟ್ಟಿರುವುದು ಕೆಲವರು ಅಚ್ಚರಿಗೆ ಕಾರಣವಾಗಿದೆ. ತಾರೆಯರು ಅಂದ್ರೆ ಹೀಗಿರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಚೆನ್ನೈನ ವೆಲ್ ಟೆಕ್ ಯೂನಿವರ್ಸಿಟಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಮನ್ನಾ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜೊತೆ ಮಿಲ್ಕಿ ಬ್ಯೂಟಿ ಕೆಲ ಸಮಯ ಕಳೆದರು. ಸೂಪರ್ ಹಿಟ್ ಸಾಂಗ್ಸ್‌ಗೆ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ್ದರು. ಇದೇ ವೇಳೆ ವಿದ್ಯಾರ್ಥಿನಿಯೊಬ್ಬರು ನೆಚ್ಚಿನ ನಟಿಯನ್ನು ನೋಡಿ ಸಂಭ್ರಮಿಸಿದ್ದಾರೆ. ಆಕೆಯ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಮೇಡಂ ಹುಮ್ಮಸ್ಸಿನಲ್ಲಿ ಮೇಡಂ ನಿಮಗೆ ಮುತ್ತು ಕೊಡಬಹುದಾ ಎಂದು ಕಿವಿಯಲ್ಲಿ ಹೇಳಿದ್ದಾರೆ. ಹ್ಞೂಂ ಎಂದು ತಮನ್ನಾ ಹೇಳುತ್ತಿದ್ದರು. ಬಿಗಿದಪ್ಪಿ ಆ ವಿದ್ಯಾರ್ಥಿನಿ ಮುತ್ತುಕೊಟ್ಟಿದ್ದಾರೆ. ತಮನ್ನಾ ಅದಕ್ಕೆ ದೊಡ್ಡದಾಗಿ ಪ್ರತಿಕ್ರಿಯಿಸದೇ ತಾವು ಆ ವಿದ್ಯಾರ್ಥಿನಿ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ.
ಇತ್ತ ಸೌತ್ ಅತ್ತ ಬಾಲಿವುಡ್ ಅಂಗಳದಲ್ಲಿ ಮಿಲ್ಕಿ ಬ್ಯೂಟಿ ಕ್ರೇಜ್ ಕಮ್ಮಿ ಆಗಿದೆ. ಹೊಸ ನಟಿಯರ ಆರ್ಭಟದ ನಡುವೆ ತಮನ್ನಾ ಮ್ಯಾಜಿಕ್ ನಡೀತಿಲ್ಲ. ನಾಯಕಿಯಾಗಿ ಯಾವುದೇ ದೊಡ್ಡ ಅವಕಾಶ ಆಕೆ ಸಿಗುತ್ತಿಲ್ಲ. ಆದರೆ ಸ್ಪೆಷಲ್ ಸಾಂಗ್ಸ್‌ಗಳಲ್ಲಿ ಹೆಜ್ಜೆ ಹಾಕಿ ರಂಜಿಸುತ್ತಿದ್ದಾರೆ. ತಮನ್ನಾ ನಟಿಸಿದ್ದ 'ಓ'ರೋಮಿಯೋ' ಎಂಬ ಸಿನಿಮಾ ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ರವಿತೇಜಾ ನಟನೆಯ 'ಇರುಮುಡಿ' ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ನಟಿಸುತ್ತಾರೆ ಎನ್ನಲಾಗ್ತಿದೆ.
ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಕನ್ನಡದ ಎರಡು ಸಿನಿಮಾಗಳ ಹಾಡುಗಳಿಗೆ ಮಿಲ್ಕಿ ಬ್ಯೂಟಿ ತಮನ್ನಾ ಹೆಜ್ಜೆ ಹಾಕಿದ್ದರು. 'ಕೆಜಿಎಫ್' ಚಿತ್ರದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಕುಣಿದಿದ್ದ ತಮನ್ನಾ 'ಜಾಗ್ವಾರ್' ಚಿತ್ರದಲ್ಲಿ 'ಸಂಪಿಗೆ ಎಣ್ಣೆ ಹಚ್ಚಿ ಮಾಲೀಸು ಮಾಡ್ತೀನಿ' ಎಂದು ಮಿಂಚಿದ್ದರು.
'ಜೈಲರ್' ಚಿತ್ರದಲ್ಲಿ 'ಕಾವಾಲಯ್ಯ' ಎಂದು ಕುಣಿದು ತಮನ್ನಾ ರಂಗೇರಿಸಿದ್ದರು. 'ರೈಡ್- 2' ಹಾಗೂ 'ಸ್ತ್ರೀ- 2' ಚಿತ್ರದಲ್ಲಿ ಕೂಡ ಸ್ಪೆಷಲ್ ಸಾಂಗ್‌ಗಳಿಗೆ ಬಿಂದಾಸ್ ಆಗಿ ಕುಣಿದು ಕಮಾಲ್ ಮಾಡಿದ್ದರು.


Click it and Unblock the Notifications











