twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣೆ ಸ್ಪರ್ಧಿಸಿದ್ದ ಸಿನಿಮಾ ನಟ-ನಟಿಯರಲ್ಲಿ ಯಾರು ಗೆದ್ದರು, ಯಾರು ಸೋತರು

    |

    ಸಿನಿಮಾಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ. ಸಿನಿಮಾ ತಾರೆಯರಿಲ್ಲದ ಚುನಾವಣೆ, ಚುನಾವಣೆ ಪ್ರಚಾರಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಲವಾರು ಸಿನಿ ತಾರೆಯರು ರಾಜಕೀಯಕ್ಕೆ ಅಡಿಯಿಟ್ಟು ಬಹುದೊಡ್ಡ ಯಶಸ್ಸು ಸಾಧಿಸಿದ್ದಾರೆ.

    ನಿನ್ನೆಯಷ್ಟೆ ಪಂಚಾ ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಸ್ಪಷ್ಟ ಜನಾದೇಶ ದೊರೆತಿದೆ. ಈ ಚುನಾವಣೆಯಲ್ಲೂ ಸಹ ಹಲವಾರು ಮಂದಿ ಸಿನಿಮಾ ನಟ-ನಟಿಯರು ಚುನಾವಣೆಗೆ ಸ್ಪರ್ಧಿಸಿದ್ದರು. ಕೆಲವರು ಗೆದ್ದಿದ್ದಾರೆ ಕೆಲವುರು ಸೋತಿದ್ದಾರೆ.

    ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಯಾವ-ಯಾವ ನಟ-ನಟಿಯರು ಚುನಾವಣೆ ಎದುರಿಸಿದರು? ಅದರಲ್ಲಿ ಗೆದ್ದವರಾರು, ಸೋತವರಾರು ಇಲ್ಲಿದೆ ಪಟ್ಟಿ.

    ತೀವ್ರ ನಿರಾಸೆ ಅನುಭವಿಸಿದ ಕಮಲ್ ಹಾಸನ್

    ತೀವ್ರ ನಿರಾಸೆ ಅನುಭವಿಸಿದ ಕಮಲ್ ಹಾಸನ್

    ನಟ ಕಮಲ್ ಹಾಸನ್ ಅವರು ಸ್ವಂತ ಪಕ್ಷ ಸ್ಥಾಪಿಸಿ ಪಕ್ಷದ ವತಯಿಂದ 193 ಜನರನ್ನು ಕಣಕ್ಕೆ ಇಳಿಸಿದ್ದರು. ಜೊತೆಗೆ ಸ್ವತಃ ತಾವು ಕೊಯಂಬತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಕೊನೆಯ ಸುತ್ತಿನ ಮತ ಎಣಿಕೆವರೆಗೂ ಮುನ್ನಡೆಯಲ್ಲಿದ್ದ ಕಮಲ್ ಕೊನೆಯ ಹಂತದಲ್ಲಿ ಹಿನ್ನಡೆ ಅನುಭವಿಸಿ 1540 ಮತಗಳ ಕನಿಷ್ಟ ಅಂತರದಿಂದ ಸೋಲು ಕಂಡರು.

    ಗೆದ್ದ ನಟ ಉದಯನಿಧಿ ಸ್ಟ್ಯಾಲಿನ್

    ಗೆದ್ದ ನಟ ಉದಯನಿಧಿ ಸ್ಟ್ಯಾಲಿನ್

    ತಮಿಳುನಾಡಿನ ಭಾವಿ ಸಿಎಂ ಎಂದೇ ಹೇಳಲಾಗುವ ಉದಯ ನಿಧಿ ಸ್ಟಾಲಿನ್ ತಮ್ಮ ಮುತ್ತಾತ ಕರುಣಾನಿಧಿ ಅವರ ಸ್ವಕ್ಷೇತ್ರ ಚೆಪಾಕ್‌ನಿಂದ ಸ್ಪರ್ಧಿಸಿ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಡಿಎಂಕೆ ನಾಯಕ ಸ್ಟ್ಯಾಲಿನ್ ಮಗನೂ ಆಗಿರುವ ಉದಯನಿಧಿ ಸ್ಟ್ಯಾಲಿನ್‌ಗೆ ಈ ಬಾರಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರಕುವ ನಿರೀಕ್ಷೆಯೂ ಇದೆ.

    ಬಿಜೆಪಿಯಿಂದ ಸ್ಪರ್ಧಿಸಿದ್ದ ಖುಷ್ಬು ಸುಂದರ್

    ಬಿಜೆಪಿಯಿಂದ ಸ್ಪರ್ಧಿಸಿದ್ದ ಖುಷ್ಬು ಸುಂದರ್

    ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಖುಷ್ಬು ಸುಂದರ್ ಬಿಜೆಪಿ ಅಭ್ಯರ್ಥಿಯಾಗಿ ಥೌಂಸಡ್ಸ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಖುಷ್ಬು ಇಲ್ಲಿ ಸೋಲನುಭವಿಸಿದ್ದಾರೆ. ಖುಷ್ಬು ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಅಲ್ಲಿಂದ ಬಿಜೆಪಿಗೆ ಸೇರ್ಪಡೆಯಾಗಿ ಈಗ ಸೋಲನುಭವಿಸಿದ್ದಾರೆ.

    ತ್ರಿಶೂರ್‌ನಿಂದ ಸ್ಪರ್ಧಿಸಿದ್ದ ನಟ ಸುರೇಶ್ ಗೋಪಿ

    ತ್ರಿಶೂರ್‌ನಿಂದ ಸ್ಪರ್ಧಿಸಿದ್ದ ನಟ ಸುರೇಶ್ ಗೋಪಿ

    ಕೇರಳದ ತ್ರಿಶೂರ್‌ನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಸುರೇಶ್ ಗೋಪಿ ಸ್ಪರ್ಧೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಸುರೇಶ್ ಗೋಪಿ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಅದು ಸಾಧ್ಯವಾಗಿಲ್ಲ. ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದಾರೆ ಸುರೇಶ್ ಗೋಪಿ.

    Recommended Video

    ಭಯ ಹುಟ್ಟಿಸೋ ಸುದ್ದಿಯನ್ನು ಮೊದಲು ನಿಲ್ಲಿಸಿ ಅಂತ ಶೃತಿ ಹರಿಹರನ್ ಹೇಳಿದ್ಯಾಕೆ? | Filmibeat Kannada
    ಹಾಸ್ಯ ನಟ ಧರ್ಮಜನ್ ಬೋಲ್ಗಟ್ಟಿ

    ಹಾಸ್ಯ ನಟ ಧರ್ಮಜನ್ ಬೋಲ್ಗಟ್ಟಿ

    ಕಾಮಿಡಿ ನಟ ಧರ್ಮಜನ್ ಬೋಲ್ಗಟ್ಟಿ ಕೇರಳದ ಬಾಲುಸೇರಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು ಆದರೆ ಯುವಕ ಸಚಿನ್ ದೇವ್ ಭಾರಿ ಅಂತರದಿಂದ ಧರ್ಮಜನ್ ಬೋಲ್ಗಟ್ಟಿ ಅನ್ನು ಸೋಲಿಸಿದ್ದಾರೆ.

    English summary
    Many movie actor contested assembly election in Tamil Nadu and Kerala. Here is the list of actors who won and loose in election.
    Monday, May 3, 2021, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X