Aishwarya Rai: ಜನರಿಗೆ ಐಶ್ವರ್ಯಾ ರೈ ಅವರ ಹಲವು ಗುಣಗಳು ಗೊತ್ತಿಲ್ಲ ಎಂದ ನಟಿ ಸುಹಾಸಿನಿ

ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ಪತ್ನಿ ಮತ್ತು ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಅವರು ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಐಶ್ವರ್ಯಾ ರೈಗೂ ಅವರನ್ನು ವೈಯಕ್ತಿಕವಾಗಿ ತಿಳಿದವರಿಗೆ ಗೊತ್ತಿರುವ ಐಶ್ವರ್ಯಾಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ನಟಿ ಐಶ್ವರ್ಯಾ ರೈ ಬಚ್ಚನ್ ನಿರ್ದೇಶಕ ಮಣಿರತ್ನಂ ಅವರ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇರುವರ್, ಗುರು, ರಾವಣನ್ ಮತ್ತು ಪೊನ್ನಿಯಿನ್ ಸೆಲ್ವನ್ I ಮತ್ತು ಪೊನ್ನಿಯಿನ್ ಸೆಲ್ವನ್ II ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ನಟಿ ಸುಹಾಸಿನಿಗೆ ಐಶ್ವರ್ಯಾ ತುಂಬಾ ಆತ್ಮೀಯರು.

suhasini-praises-aishwarya-rai-bachchan

ಐಶ್ವರ್ಯಾರನ್ನು ಫ್ಲಾರೆನ್ಸ್ ನೈಟಿಂಗೇಲ್‌ಗೆ ಹೋಲಿಸಿದ ಸುಹಾಸಿನಿ!

ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ನಟರಾದ ಅರವಿಂದ್ ಸ್ವಾಮಿ, ಆರ್ ಮಾಧವನ್ ಮತ್ತು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರಂತಹ ನಟರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ನಟರ ವೃತ್ತಿ ಜೀವನದ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಐಶ್ವರ್ಯಾ ರೈ ಅವರನ್ನು ಆಧುನಿಕ ನರ್ಸಿಂಗ್‌ನ ಪ್ರವರ್ತಕರಾದ ಫ್ಲಾರೆನ್ಸ್ ನೈಟಿಂಗೇಲ್‌ಗೆ ಹೋಲಿಸಿದ್ದಾರೆ. ಫ್ಲಾರೆನ್ಸ್ ನೈಟಿಂಗೇಲ್ ಅವರಂತೆಯೇ ಇವರು ಕೂಡ ಯಾವಾಗಲೂ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರ ಬಗ್ಗೆ ಕಾಳಜಿ ವಹಿಸುವವರಲ್ಲಿ ಮೊದಲಿಗರು ಎಂದು ಹೊಗಳಿದ್ದಾರೆ.

ಐಶ್ವರ್ಯಾ ಬಗ್ಗೆ ಮನಬಿಚ್ಚಿ ಮಾತನಾಡಿದ ಸುಹಾಸಿನಿ

ಸುಹಾಸಿನಿ ಮಣಿರತ್ನಂ ಐಶ್ವರ್ಯಾ ರೈ ಬಚ್ಚನ್ ಅವರ ಗುಣಗಳ ಬಗ್ಗೆ ಮಾತನಾಡುತ್ತಾ, "ನಾನು ಐಶ್ವರ್ಯಾರನ್ನು ನೋಡಿದಾಗ, ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಅವಳನ್ನು ವೈಯಕ್ತಿಕವಾಗಿ ಬಲ್ಲೆ. ಅನೇಕರು ಅವರ ಸೌಂದರ್ಯಕ್ಕಾಗಿ ಆಕೆಯನ್ನು ಇಷ್ಟಪಡುತ್ತಾರೆ. ಆದರೆ, ನಾನು ಅವರನ್ನು ಒಬ್ಬ ಅಪ್ಪಟ್ಟ ವ್ಯಕ್ತಿಯಾಗಿ ನೋಡುತ್ತೇನೆ" ಎಂದಿದ್ದಾರೆ.

suhasini-praises-aishwarya-rai-bachchan

"ಸಾರ್ವಜನಿಕರು, ಅಭಿಮಾನಿಗಳ ಯಾವತ್ತೂ ನೋಡದಂತಹ ಗುಣಗಳನ್ನು ಐಶ್ವರ್ಯಾ ರೈ ಹೊಂದಿದ್ದಾರೆ. ಉದಾಹರಣೆಗೆ, ನೀವು ಅನಾರೋಗ್ಯಕ್ಕೆ ಒಳಗಾದರೆ, ಅವರು ಮೊದಲು ಬಂದು ನಿಮ್ಮನ್ನು ನೋಡಿಕೊಳ್ಳುತ್ತಾಳೆ. ಏನು ತಿನ್ನಬೇಕು ಎಂಬುದರ ಕುರಿತು ಅವರು ಸಲಹೆ ನೀಡುತ್ತಾರೆ. ಆಕೆ ಅಂತಹ ಕಾಳಜಿಯ ಸ್ವಭಾವವನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಫ್ಲಾರೆನ್ಸ್ ನೈಟಿಂಗೇಲ್ ಇದ್ದಂತೆ" ಎಂದು ಶ್ಲಾಘಿಸಿದ್ದಾರೆ.

ಐಶ್ವರ್ಯಾ ರೈ ಅವರನ್ನು ಹೊಗಳಿದ್ದ ನಿರ್ದೇಶಕ ಮಣಿರತ್ನಂ

ಈ ವರ್ಷದ ಆರಂಭದಲ್ಲಿ ಪೊನ್ನಿಯಿನ್ ಸೆಲ್ವನ್ II ರ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಿರ್ದೇಶಕ ಮಣಿರತ್ನಂ ಸಹ ಐಶ್ವರ್ಯಾ ಅವರನ್ನು ಹೊಗಳಿದ್ದರು. "ಚಲನಚಿತ್ರ ನಿರ್ದೇಶಕರು ತುಂಬಾ ತುಂಬಾ ಸ್ವಾರ್ಥಿಗಳು ಮತ್ತು ಹೃದಯಹೀನರು. ಅವರು ಕಾಳಜಿ ವಹಿಸುವ ಏಕೈಕ ವಿಷಯವೆಂದರೆ ಅವರ ಸಿನಿಮಾ ಮಾತ್ರ. ನಾನು ಐಶ್ವರ್ಯಾ ಅವರನ್ನು ಎಷ್ಟು ಇಷ್ಟಪಟ್ಟರೂ ಕೂಡ, ಪಾತ್ರಕ್ಕೆ ಅವಳು ಸರಿ ಎಂದು ಅನಿಸಿದರೇ ಮಾತ್ರ ನಾನು ಅವಳನ್ನು ಕೇಳುತ್ತೇನೆ. ಆದರೆ, ನಾನು ಅವರನ್ನು ಕೇಳಿದಾಗಲೆಲ್ಲಾ, ಅವರು ಈ ಪಾತ್ರಕ್ಕೆ ಸರಿ ಎಂದು ನಂಬಿದ್ದೇನೆ. ಅವರು ಅಷ್ಟೇ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರು ನನಗೆ ಲಕ್ಕಿ ಚಾರ್ಮ್ ಅಷ್ಟೇ ಅಲ್ಲ, ಈ ಪಾತ್ರವನ್ನು (ನಂದಿನಿ) ಚಿತ್ರಿಸಲು ಆಕೆಯ ಪ್ರತಿಭೆ ಮತ್ತು ವ್ಯಕ್ತಿತ್ವವೇ ಸರಿ" ಎಂದು ಹೇಳಿದ್ದರು.

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಮೊದಲ ಭಾಗ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮತ್ತು ಎರಡನೇ ಭಾಗ ಈ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ಹಲವು ದಾಖಲೆಗಳನ್ನು ಪುಡಿಗಟ್ಟಿದ ಈ ಐತಿಹಾಸಿಕ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.

More from Filmibeat

English summary
Filmmaker Mani Ratnam's wife Suhasini praises Aishwarya Rai Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X