ಹಿಂದೂ ವಿರೋಧಿ, ಲವ್ ಜಿಹಾದ್, ಬ್ರಾಹ್ಮಣ ಹುಡುಗಿಯ ಬಿರಿಯಾನಿ: ಅಬ್ಬಾ ಒಂದೆರಡಲ್ಲ...'ಅನ್ನಪೂರ್ಣಿ' ವಿರುದ್ಧ ಎಫ್‌ಐಆರ್!

ಕಳೆದ ವರ್ಷ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದಮೂರು ಸಿನಿಮಾಗಳನ್ನು ತೆರೆಕಂಡಿವೆ. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ 'ಜವಾನ್' ಎಂಬ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ಇದಾದ ನಂತರ ಇನ್ನೆರಡು ಚಿತ್ರಗಳು ಇರೈವನ್ ಮತ್ತು ಅನ್ನಪೂರ್ಣಿ ಬಿಡುಗಡೆಯಾಗಿವೆ. ಇರೈವನ್ ಸದ್ದೇ ಮಾಡಲಿಲ್ಲ. ಆದರೆ, ಅನ್ನಪೂರ್ಣಿಗೆ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಈಗ ಅದೇ ಸಿನಿಮಾ ಇಡೀ ಚಿತ್ರತಮಡವನ್ನು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

'ಅನ್ನಪೂರ್ಣಿ' ಸಿನಿಮಾದಲ್ಲಿ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ನಿರ್ಮಾಪಕರ ವಿರುದ್ಧ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಿರ್ಮಾಪಕರು ಶ್ರೀ ರಾಮನನ್ನು ಅವಮಾನಿಸುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

 FIR filed Against Makers Of Nayantharas Annapoorani for hurting Hindu sentiments

ಅನ್ನಪೂರ್ಣಿ ಲವ್ ಜಿಹಾದ್‌ಗೆ ಬೆಂಬಲ ನೀಡುತ್ತೆ!

ಜನವರಿ 6 ರ (ಶನಿವಾರ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಮೇಶ್ ಸೋಲಂಕಿ ಅನ್ನಪೂರ್ಣಿ ಚಲನಚಿತ್ರವನ್ನು 'ಹಿಂದೂ ವಿರೋಧಿ' ಎಂದು ಕರೆದಿದ್ದಾರೆ. ಜೊತೆಗೆ ಈ ಸಿನಿಮಾ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಶಿವಸೇನಾ ಮಾಜಿ ನಾಯಕ ಆರೋಪಿಸಿದ್ದಾರೆ. ಚಿತ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರನ್ನು ಆಗ್ರಹಿಸಿದ್ದಾರೆ.

ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಎಫ್‌ಐಆರ್ ದಾಖಲಿಬೇಕು ಎಂದು ವಿನಂತಿಸಿದ್ದಾರೆ. ಜೊತೆಗೆ ಪೊಲೀಸ್ ದೂರು ದಾಖಲಿಸಿದ್ದಾರೆ.

 FIR filed Against Makers Of Nayantharas Annapoorani for hurting Hindu sentiments

ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ರಾಮನಿಗೆ ಅವಮಾನ!?

"ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ಜಗತ್ತು ಸಂತೋಷಪಡುತ್ತಿದೆ. ಇಂತಹ ಸಮಯದಲ್ಲಿ, ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಚಲನಚಿತ್ರ ಅನ್ನಪೂರ್ಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ" ಎಂದು ಕಿಡಿಕಾಡಿದ್ದಾರೆ. ಇದಕ್ಕೆ ಕಾರಣಗಳನ್ನು ಅವರು ಪಟ್ಟಿ ಮಾಡಿದ್ದಾರೆ.

1. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ.

2. ಈ ಚಿತ್ರದಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡಲಾಗಿದೆ.

3. "ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸ ತಿನ್ನುವವರಾಗಿದ್ದರು ಎಂದು ಹೇಳಿ ಮಾಂಸ ತಿನ್ನಲು ನಟಿಯನ್ನು ಮನವೊಲಿಸುತ್ತಾರೆ" ಎಂದು ರಮೇಶ್ ಸೋಲಂಕಿ ಬರೆದಿದ್ದಾರೆ.

ತಮ್ಮ ದೂರಿನ ಫೋಟೋಗಳನ್ನು ಹಂಚಿಕೊಂಡ ಅವರು, ನೆಟ್‌ಫ್ಲಿಕ್ಸ್ ಇಂಡಿಯಾ ಮತ್ತು ಜೀ ಸ್ಟೋಡಿಯೋಸ್ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ. ನಾನು ಈ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಗೃಹಮಂತ್ರಿ ಅವರಲ್ಲಿ ವಿನಂತಿಸುತ್ತೇನೆ" ಎಂದಿದ್ದಾರೆ.

ಹಿಂದಿ ಐಟಿ ಸೆಲ್‌ನ ಸಂಸ್ಥಾಪಕರೂ ಆಗಿರುವ ಸೋಲಂಕಿ, ಅನ್ನಪೂರ್ಣಿ ಚಿತ್ರದ ನಿರ್ದೇಶಕ ನೀಲೇಶ್ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಹೆಡ್ ಮೋನಿಕಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ. ಆದರೆ, ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ದೂರಿನ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಅನ್ನಪೂರ್ಣಿ

ಅನ್ನಪೂರ್ಣಿ ತಮಿಳು ಚಿತ್ರವಾಗಿದ್ದು, ಇದರಲ್ಲಿ ನಯನತಾರ ಜೊತೆಗೆ ಜೈ ಮತ್ತು ಸತ್ಯರಾಜ್ ಕೂಡ ನಟಿಸಿದ್ದಾರೆ. ಇದು ಶೇಫ್ ಆಗುವ ಕನಸು ಕಾಣುವ ಅನ್ನಪೂರ್ಣಿಯ ಸುತ್ತ ಸುತ್ತುತ್ತದೆ. ಈ ಸಿನಿಮಾ ಡಿಸೆಂಬರ್ 1, 2023 ರಂದು ಬಿಡುಗಡೆಯಾಗಿತ್ತು.

More from Filmibeat

English summary
FIR filed against Nayanthara's Annapoorani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X