twitter
    For Quick Alerts
    ALLOW NOTIFICATIONS  
    For Daily Alerts

    ಜಾನಪದ ಗಾಯಕಿ ಮತ್ತು ಹಿರಿಯ ನಟಿ ಮುನಿಯಮ್ಮ ಇನ್ನಿಲ್ಲ

    |

    ಖ್ಯಾತ ಜಾನಪದ ಗಾಯಕಿ ಮತ್ತು ತಮಿಳಿನ ಹಿರಿಯ ನಟಿ ಪರವಾಯಿ ಮುನಿಯಮ್ಮ ಮಾರ್ಚ್ 29 ಭಾನುವಾರ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮುನಿಯಮ್ಮ 83ನೇ ವಯಸ್ಸಿನಲ್ಲಿ ಮುಧುರೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

    Recommended Video

    ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

    ಭಾನುವಾರ ಸಂಜೆಯೆ ಅಂತ್ಯಸಂಸ್ಕಾರ ನೆಡೆಸಲಾಗಿದ್ದು, ಮಗ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಮುನಿಯಮ್ಮ ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ಆಸ್ಪತ್ರೆಗೆ ದಾಖಲಾಗಿದ್ದ ಮುನಿಯಮ್ಮ ಸಾವನಪ್ಪಿದ್ದಾರೆ ಎನ್ನುವ ವದಂತಿ ವೈರಲ್ ಆಗಿತ್ತು. ಆ ನಂತರ ಹಿರಿಯ ನಟಿ ಆಸ್ಪತ್ರೆಯಿಂದ ವಿಡಿಯೋ ಸಂದೇಶ ಮಾಡಿ ಕಳುಹಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಮುಂದೆ ಓದಿ..

    ಜಾನಪದ ಗೀತೆಗಳ ಮೂಲಕ ಖ್ಯಾತಿಗಳಿಸಿದವರು

    ಜಾನಪದ ಗೀತೆಗಳ ಮೂಲಕ ಖ್ಯಾತಿಗಳಿಸಿದವರು

    ಪರವಾಯಿ ಮುನಿಯಮ್ಮ ಮಧುರೈನ ಪರವಾಯಿ ಹಳ್ಳಿಯವರು. ಜಾನಪದ ಗೀತೆಗಳ ಮೂಲಕ ಹೆಸರುವಾಸಿಯಾದವರು. ಮೊದಲು ದೇವಾಲಯಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಮೂಲಕ ಗಾಯಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ಆನಂತರ ಲಕ್ಷ್ಮಣ್ ಶ್ರುತಿ ಎಂಬ ಆರ್ಕೆಸ್ಟ್ರಾ ತಂಡದಲ್ಲಿ ಸೇರಿಕೊಂಡು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಗೀತ ಕಛೇರೆಗಳನ್ನು ನೀಡುತ್ತಿದ್ದರು.

    2003ರಲ್ಲಿ ಬಣ್ಣ ಹಚ್ಚಿದ ಮುನಿಯಮ್ಮ

    2003ರಲ್ಲಿ ಬಣ್ಣ ಹಚ್ಚಿದ ಮುನಿಯಮ್ಮ

    ವಿದ್ಯಸಾಗರ್ ನೆರವಿನ ಮೂಲಕ ಹಿನ್ನಲೆ ಗಾಯಕಿಯಾಗಿ ಸಿನಿಮಾಗರಂಗಕ್ಕೆ ಪಾದಾರ್ಪಣೆ ಮಾಡಿದರು. ಸಂಗೀತ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದ ಮುನಿಯಮ್ಮ 2003ರಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿಮಾದಲ್ಲೂ ಮಿಂಚುತ್ತಾರೆ. ವಿಕ್ರಮ್ ಅಭಿನಯದ ಧೂಲ್ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ.

    50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

    50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

    ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಮುನಿಯಮ್ಮ ಅಭಿನಯಿಸಿದ್ದಾರೆ. ಗಾಯನ ಮತ್ತು ಅಭಿನಯದ ಹೊರತಾಗಿಯು ಮುನಿಯಮ್ಮ ಕಿರುತೆರೆಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. 2015 ರಲ್ಲಿ ತೀವ್ರ ಆರಾರೋಗ್ಯಕ್ಕೆ ತುತ್ತಾಗಿದ್ದ ಮುನಿಯಮ್ಮ ಆಸ್ಪತ್ರೆಗೆ ದಾಖಲಾಗಿದ್ದರು.

    ಸ್ಟಾರ್ ನಟರ ಧನ ಸಹಾಯ

    ಸ್ಟಾರ್ ನಟರ ಧನ ಸಹಾಯ

    ಮುನಿಯಮ್ಮ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆಸ್ಪತ್ರೆಯ ಖರ್ಚು ನಿಭಾಯಿಸಲು ಪರದಾಡಿದ್ದರು. ಆ ಸಮಯದಲ್ಲಿ ತಮಿಳಿನ ಖ್ಯಾತ ನಟರಾದ ಧನುಷ್, ಶಿವಕಾರ್ತಿಕೇಯನ್ ಸೇರಿದಂತೆ ಅನೇಕರು ಮುನಿಯಮ್ಮ ಅವರ ವೈದ್ಯಕೀಯ ವೆಚ್ಚವನ್ನು ನೋಡಿಕೊಂಡದ್ದರು. ಜೊತೆಗೆ ಅಂದು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಮುನಿಯಮ್ಮ ಚಿಕಿತ್ಸೆಗಾಗಿ 6 ಲಕ್ಷ ನೀಡಿದ್ದರು. ಮುನಿಯಮ್ಮ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.

    English summary
    Tamil seniors Actress and folk singer Muniyamma dies at 83 in Madhurai.
    Monday, March 30, 2020, 8:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X