For Quick Alerts
  ALLOW NOTIFICATIONS  
  For Daily Alerts

  ಹರ್ಭಜನ್ ಸಿಂಗ್-ಅರ್ಜುನ್ ನಟನೆಯ 'ಫ್ರೆಂಡ್‌ಷಿಪ್' ಟೀಸರ್ ಬಿಡುಗಡೆ

  |

  ಕ್ರಿಕೆಟ್ ಮೈದಾನದಲ್ಲಿ ತಮ್ಮ ಅಮೋಘ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದ ಹರ್ಭಜನ್ ಸಿಂಗ್ ಈಗ ಸಿನಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಹರ್ಭಜನ್ ಸಿಂಗ್ ನಾಯಕನಾಗಿ ನಟನೆಯ ಚೊಚ್ಚಲ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

  ಹರ್ಭಜನ್ ಸಿಂಗ್ ನಟಿಸಿರುವ 'ಫ್ರೆಂಡ್‌ಷಿಪ್' ಸಿನಿಮಾದ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು, ಸ್ವತಃ ಹರ್ಭಜನ್ ಟೀಸರ್ ಹಂಚಿಕೊಂಡಿದ್ದಾರೆ.

  ವಿಜಯ್ 65ನೇ ಚಿತ್ರದ ಹಾಡಿಗೆ ಸಾಹಿತ್ಯ ರಚಿಸಲಿದ್ದಾರೆ ಸ್ಟಾರ್ ನಟ?ವಿಜಯ್ 65ನೇ ಚಿತ್ರದ ಹಾಡಿಗೆ ಸಾಹಿತ್ಯ ರಚಿಸಲಿದ್ದಾರೆ ಸ್ಟಾರ್ ನಟ?

  ಆಕ್ಷನ್, ಕಾಮಿಡಿ, ಸ್ಟೈಲ್ ಹೀಗೆ ಸಿನಿಮಾದಲ್ಲಿ ಆಲ್‌ರೌಂಡರ್ ಆಗಿ ಮಿಂಚಿರುವ ಹರ್ಭಜನ್‌ಗೆ ಕ್ರೀಡಾ ಲೋಕದ ಹಾಗೂ ಸಿನಿಮಾ ಪ್ರಪಂಚ ಅನೇಕರು ಪ್ರಶಂಸಿದ್ದಾರೆ. ಸುರೇಶ್ ರೈನಾ, ವಿವಿಎಸ್ ಲಕ್ಷ್ಮಣ್ ಟ್ವಿಟ್ಟರ್‌ ಮೂಲಕ ಹರ್ಭಜನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

  ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ 'ಫ್ರೆಂಡ್‌ಷಿಪ್' ಸಿನಿಮಾ ರಿಲೀಸ್ ಆಗುತ್ತಿದೆ. ಜಾನ್ ಪಾಲ್ ರಾಜ್ ಮತ್ತು ಶಾಮ್ ಸೂರ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದಕ್ಕೂ ಮುಂಚೆ ''ಚೆನ್ನೈಯಿಲ್ ಒರು ನಾಲ್ 2'' ಸಿನಿಮಾ ನಿರ್ದೇಶಿಸಿದ್ದರು.

  ಫ್ರೆಂಡ್‌ಷಿಪ್ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲೋಸ್ಲಿಯಾ ಮರಿಯಸೇಸನ್ ಹಾಗೂ ಬಿಗ್ ಬಾಸ್ 3 ಖ್ಯಾತಿಯ ಸತೀಶ್ ಸಹ ತಾರಬಳಗದಲ್ಲಿದ್ದಾರೆ.

  ಕಾರ್ತಿಕ್ ಯೋಗಿಯ 'ಡಿಕ್ಕಿಲೂನಾ' ಸಿನಿಮಾದಲ್ಲಿ ಹರ್ಭಜನ್ ಸಿಂಗ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ 'ಮುಜ್ಸೆ ಶಾದಿ ಕರೋಗಿ' ಮತ್ತು 'ಸೆಕೆಂಡ್ ಹ್ಯಾಂಡ್ ಹಸ್ಬೆಂಡ್' ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

  ಹೀರೋ ಸಂಪ್ರದಾಯವನ್ನು ಹೊಡೆದುಹಾಕಿದ ದರ್ಶನ್ | Roberrt Audio Launch in Hubli | Darshan
  English summary
  Cricketer Harbhajan singh, arjun sarja starrer 'Friendship' Movie Teaser Released in Tamil Telugu and Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X