ಬಿಗ್ ಬಾಸ್ ಸ್ಫರ್ಧಿಯ ಹೃದಯ ಗೆದ್ದ ಪೈಲಟ್ ; 39ನೇ ವರ್ಷದಲ್ಲಿ ಮದುವೆಯ ಬಂಧನಕ್ಕೊಳಗಾದ ನಟಿ

ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ.

ಆದರೆ ಅದನ್ನು ಗುರುತಿಸುವುದು ಸುಲಭ ಅಲ್ಲ. ಪ್ರೀತಿ ಒಂದು ಸುಂದರ ಅನುಭವ, ಅದನ್ನು ಖುಷಿಯಿಂದ ಅನುಭವಿಸಬೇಕು. ಕಷ್ಟದಲ್ಲಾದರೂ, ಸುಖದಲ್ಲಾದರೂ ಒಬ್ಬರಿಗೊಬ್ಬರು ಜೊತೆಯಾಗಿ ನಂಬಿಕೆಯಿಂದ ಇದ್ದರೆ ಮಾತ್ರ ಪ್ರೇಮದಾನಂದವನ್ನು ಸವಿಯಲು ಸಾಧ್ಯ. ಸದ್ಯ ಇಂತಹದ್ದೇ ಆನಂದದ ಅಲೆಯಲ್ಲಿ ಮೊನ್ನೆವರೆಗೆ ತೇಲುತ್ತಿದ್ದ ಜನನಿ ಅಯ್ಯರ್ ಮತ್ತು ಸಾಯಿ ರೋಶನ್ ಶ್ಯಾಮ್ ಮದುವೆಯ ಬಂಧನಕ್ಕೊಳಗಾಗಿದ್ದಾರೆ.

From Bigg Boss to Bride Janani Iyer Weds Pilot Sai Roshan Shyam in a Stunning Iyengar Ceremony

ಹೌದು, ಜನನಿ ಅಯ್ಯರ್.. ಮಾಡೆಲಿಂಗ್‌ನಲ್ಲಿ ಮಿಂಚಿದ ಚೆಲುವೆ. ಸರಿ ಸುಮಾರು 150ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಜನನಿ ತಮ್ಮ ಕಣ್ಣುಗಳಿಂದಲೇ ಹಲವರ ಕಣ್ಮನ ಸೆಳೆದವರು.

ಪ್ರಖ್ಯಾತ ನಿರ್ದೇಶಕ ಬಾಲಾ ನಿರ್ದೇಶನದ ''ಅವನ್ ಇವನ್'' ಮೂಲಕ ಚಿತ್ರರಂಗಕ್ಕೆ ಬಂದ ಜನನಿ ಅಯ್ಯರ್ ಆ ನಂತರ ''ತೆಗಡಿ'' ಚಿತ್ರವನ್ನು ಮಾಡಿದರು. ಕೇವಲ ತಮಿಳು ಮಾತ್ರವಲ್ಲದೇ ಮಲಯಾಳಂನಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡ ಜನನಿ ಅಯ್ಯರ್ ''ತ್ರೀ ಡಾಟ್ಸ್''.. ''ಸೆವೆಂತ್ ಡೇ''.. ''ಮೋಸಯಿಲೆ ಕುದುರೆ ಮೀನುಕಳ್''.. ಚಿತ್ರಗಳಲ್ಲಿ ಕೂಡ ಅಭಿನಯಿಸಿದರು.

ಇನ್ನು ತಮಿಳಿನ ''ಬಿಗ್ ಬಾಸ್'' ಎರಡನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ಜನನಿ ಅಯ್ಯರ್, 105 ದಿನ ಮನೆಯಲ್ಲಿದ್ದರು. 3ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಇಂಥಾ ಜನನಿ ಅಯ್ಯರ್ ಸದ್ಯ ಸಾಯಿ ರೋಷನ್ ಶ್ಯಾಮ್ ಅವರ ಜೊತೆ ಸಪ್ತಪದಿಯನ್ನು ತುಳಿದಿದ್ದಾರೆ. ಚೆನ್ನೈನ ಮಹಾಬಲಿಪುರಂ ಸಮೀಪದ ಐಷಾರಾಮಿ ರೆಸಾರ್ಟ್‌ನಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಕೆಂಪು ಬಣ್ಣದ ರೇಷ್ಮೆ ಮಡಿಸಾರ್ ಸೀರೆಯಲ್ಲಿ ಜನನಿ ಮಿಂಚಿದರೆ, ರೇಷ್ಮೆ ಧೋತಿ ಮತ್ತು ಕುರ್ತಾದಲ್ಲಿ ಸಾಯಿ ರೋಷನ್ ಶ್ಯಾಮ್ ಮಿಂಚಿದರು.

From Bigg Boss to Bride Janani Iyer Weds Pilot Sai Roshan Shyam in a Stunning Iyengar Ceremony

ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ''ಬಿಗ್ ಬಾಸ್'' ಸ್ಪರ್ಧಿಗಳಾದ ರಿತ್ವಿಕಾ.. ಐಶ್ವರ್ಯಾ ರಾಜೇಶ್.. ಗಾಯತ್ರಿ ಶಂಕರ್.. ಮತ್ತು ಸನ್ನಿ ವೇನ್.. ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ನವ ಜೋಡಿಗೆ ಶುಭ ಕೋರಿದರು.

ಅಂದ್ಹಾಗೇ ಜನನಿ ಅಯ್ಯರ್ ಮತ್ತು ಸಾಯಿ ರೋಷನ್ ಶ್ಯಾಮ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ. ಬದಲಿಗೆ ಲವ್ ಮ್ಯಾರೇಜ್. ವಿಶೇಷ ಅಂದರೆ ಸಾಯಿ ರೋಷನ್ ಶ್ಯಾಮ್ ಅವರಿಗೂ ಚಿತ್ರರಂಗಕ್ಕೂ ಯಾವ ಸಂಬಂಧವೂ ಇಲ್ಲ. ಬದಲಿಗೆ ವೃತ್ತಿಯಲ್ಲಿ ಸಾಯಿ ರೋಷನ್ ಶ್ಯಾಮ್ ಪೈಲಟ್. ದುಬೈ ಮೂಲದ ವಿಮಾನಯಾನ ಸಂಸ್ಥೆಯೊಂದರಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗೆ ವಿರುದ್ಧ ಕ್ಷೇತ್ರದವಾರಾದ ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಸದ್ದಿಲ್ಲದೇ ಕಳೆದ ವರ್ಷ ದುಬೈನಲ್ಲಿ ಸಾಯಿ ರೋಷನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಜನನಿ ಅಯ್ಯರ್ ಹಲವರನ್ನು ಅಚ್ಚರಿಗೆ ದೂಡಿದ್ದರು. ಈಗ ತಮ್ಮ ಬದುಕಿನ ಹೊಸ ಆರಂಭವನ್ನು ತಮ್ಮ 39ನೇ ವರ್ಷದಲ್ಲಿ ಜನನಿ ಮಾಡಿದ್ಧಾರೆ. ಸಾಯಿ ರೋಷನ್ ಜೊತೆ ಸಪ್ತಪದಿ ತುಳಿದಿದ್ದಾರೆ.

ಇನ್ನು ಮದುವೆ ಇವರ ಬರ್ತ್‌ಡೇ ಮುನ್ನಾದಿನದಂದೇ ನಡೆದಿದ್ದು ಮತ್ತೊಂದು ವಿಶೇಷ. ಮದುವೆಯ ಧಾರ್ಮಿಕ ವಿಧಿವಿಧಾನಗಳು ಮತ್ತು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಮುಕ್ತಾಯವಾದ ನಂತರ ಮಧ್ಯರಾತ್ರಿ ಕುಟುಂಬದವರು ಮತ್ತು ಸ್ನೇಹಿತರು ಮದುವೆಯ ಮಂಟಪದಲ್ಲೇ ಕೇಕ್ ಕತ್ತರಿಸುವ ಮೂಲಕ ಜನನಿ ಅವರಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡಿದ್ದಾರೆ.

More from Filmibeat

English summary
"Janani Iyer and Sai Roshan Shyam’s wedding photos are breaking the internet! Discover everything about the Bigg Boss star’s beautiful Iyengar ceremony and her longtime relationship with pilot Sai Roshan."
Read more about: marriage biggboss kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X