ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.

ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ. ಉದಾಹರಣೆಗೆ ಗ್ಲಾಮರ್ ಗೊಂಬೆ ತ್ರಿಶಾ ಮತ್ತು ಇಳಯ ದಳಪತಿ ವಿಜಯ್.

from-reel-to-real-uma-krishnan-s-viral-hint-sparks-thalapathy-vijay-and-trisha-marriage-rumors

ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರಿಬ್ಬರ 27ವರ್ಷಗಳ ಸುಖ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ ತ್ರಿಶಾ ಮೇಲೀದೆ. ದಿನಕ್ಕೊಬ್ಬರು ವಿಜಯ್ ವೈಯಕ್ತಿಕ ಬದುಕಿನ ಕುರಿತು ಮಾತನಾಡುತ್ತಿದ್ದಾರೆ. ತ್ರಿಶಾ ಅವರ ತೇಜೋವಧೆ ಮಾಡುತ್ತಿದ್ದಾರೆ.

ಆದರೂ ಕೂಡ ತ್ರಿಶಾ ಮತ್ತು ವಿಜಯ್ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಯಾರೇನೇ ಅಂದರೂ ಇಬ್ಬರು ತಲೆ ಕೆಡಿಸಿಕೊಳ್ತಿಲ್ಲ. ಬದಲಿಗೆ ಎಲ್ಲರೆದುರೇ ವಿಜಯ್ ನನ್ನ ಭಾರ ನೀವು ಹೊರಬೇಡಿ, ನಾನು ನೋಡ್ಕೊಳ್ತೀನಿ ಎಂದು ವಿಜಯ್ ಹೇಳಿದ್ದಾರೆ. ಇನ್ನೂ ತ್ರಿಶಾ ಅವರದ್ದು ಮೌನಂ ಸಮ್ಮತಿ ಲಕ್ಷಣಂ.

ಪತ್ರಕರ್ತರು ಎಷ್ಟೇ ಕೇಳಿದರೂ.. ಬೇಡಿಕೊಂಡರೂ.. ತ್ರಿಶಾ ಮಾತ್ರ ತುಟಿ ಎರಡು ಮಾಡ್ತಿಲ್ಲ. ಸಂದರ್ಭ.. ಸನ್ನಿವೇಶ.. ಹೀಗಿರುವಾಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ತ್ರಿಶಾ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ‌. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ. ವಿಶೇಷ ಅಂದರೆ ಈ ಚರ್ಚೆಗೆ ತ್ರಿಶಾ ಅವರ ತಾಯಿ ಕೂಡ ಸಮ್ಮತಿಯನ್ನು ಸೂಚಿಸಿದ್ದಾರೆ.

ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ತ್ರಿಶಾ ಅವರ ಮದುವೆಯ ಬಗ್ಗೆ ಹಾಕಲಾಗಿದ್ದ ಒಂದು ಪೋಸ್ಟ್‌ಗೆ ತ್ರಿಶಾ ಅವರ ತಾಯಿ ಉಮಾ ಕೃಷ್ಣನ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

from-reel-to-real-uma-krishnan-s-viral-hint-sparks-thalapathy-vijay-and-trisha-marriage-rumors

ನಿಮಗೆ ಗೊತ್ತಿರಲಿ, ಸಾಮಾನ್ಯವಾಗಿ ಇಂತಹ ಗಂಭೀರ ವಿಷಯಗಳಲ್ಲಿ ಸ್ಟಾರ್ ಯಾರೇ ಇರಲಿ, ಕುಟುಂಬದವರು ಮೌನವಾಗಿರುತ್ತಾರೆ. ಆದರೆ ತ್ರಿಶಾ ಅವರ ತಾಯಿ‌ ಮಾತ್ರ ಇದಕ್ಕೆ ತದ್ವಿರುದ್ದ. ತ್ರಿಶಾ ಮತ್ತು ವಿಜಯ್ ಶೀಘ್ರದಲ್ಲಿಯೇ ಅಂದರೆ ಮುಂಬರುವ ತಮಿಳುನಾಡು ಚುನಾವಣೆಯ ನಂತರ ಮದುವೆಯಾಗಲಿದ್ದಾರೆ ಎಂಬ ಅಭಿಮಾನಿ ರಚಿತ್ ಅವರ ರೀಲ್ ನ್ನೂ ಮೆಚ್ಚಿಕೊಂಡಿದ್ದಾರೆ. ಉಮಾ ಕೃಷ್ಣನ್ ಅವರ ಈ ನಡೆ ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಈ ವಿವಾದಕ್ಕೆ ಇದರಿಂದ ತುಪ್ಪ ಸುರಿದಂತಾಗಿದೆ.

ಇದರ ನಡುವೆ ತ್ರಿಶಾ ಅವರ ಅಸಂಖ್ಯಾತ ಅಪ್ಪಟ ಅಭಿಮಾನಿಗಳು, ಯಾರಿಗೆ ಗೊತ್ತು ಉಮಾ ಕೃಷ್ಣನ್ ಆಕಸ್ಮಿಕವಾಗಿ ರೀಲ್‌ಗೆ 'ಲೈಕ್' ಮಾಡಿರಬಹುದು ಎಂದು ವಾದ ಮಂಡಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಈ ಹಿಂದೆ ವಿಜಯ್ ಮತ್ತು ತ್ರಿಷಾ ರಹಸ್ಯ ಸಂಬಂಧದ ಸುಳಿವು ನೀಡುವ ಹಲವು ಪೋಸ್ಟ್‌ಗಳಿಗೆ ಇದೇ ರೀತಿ 'ಲೈಕ್' ಮಾಡಿದ್ದರು ಎಂಬುದನ್ನು ಬೇರೆಯವರು ತ್ರಿಶಾ ಅಭಿಮಾನಿಗಳಿಗೆ ನೆನಪಿಸುತ್ತಿದ್ದಾರೆ.

ಅಂದ್ಹಾಗೇ ಈ ಎಲ್ಲ ರಂಪ ರಾಮಾಯಾಣ ಸಾರ್ವಜನಿಕವಾಗುವ ಮುನ್ನ ಕಳೆದ ವರ್ಷ ವಿಜಯ್ ಬರ್ತ್‌ಡೇ ಪ್ರಯುಕ್ತ ತ್ರಿಶಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಫೋಟೊ ಹಂಚಿಕೊಂಡಿದ್ದರು. ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ ಎಂದಿದ್ದರು.

ತ್ರಿಶಾ ಹಂಚಿಕೊಂಡ ಈ ಫೋಟೊದಿಂದ ಇಬ್ಬರ ಸಂಬಂಧದ ಕುರಿತು ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು. ಫೋಟೊದಲ್ಲಿ ತ್ರಿಶಾ ಸಾಕಿದ ನಾಯಿಯನ್ನು ವಿಜಯ್ ಎತ್ತಿಕೊಂಡು ಮುದ್ದು ಮಾಡುತ್ತಿದ್ದರು. ಈ ಸಮಯದಲ್ಲಿ ಕಣ್ಣು ಮಿಟುಕಿಸದೇ ವಿಜಯ್ ಅವರನ್ನು ತ್ರಿಶಾ ಕಣ್ತುಂಬಿಕೊಳ್ಳುತ್ತಿದ್ದರು. ''ಸನ್ ನ್ಯೂಸ್'' ಈ ಫೋಟೊ ಹಂಚಿಕೊಂಡಿತ್ತು. ಅಚ್ಚರಿ ಎಂಬಂತೆ ಇದೇ ಫೋಟೊವನ್ನು ಕಳೆದ ವರ್ಷ ತ್ರಿಶಾ ಅವರ ತಾಯಿ ಉಮಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರೀ ಶೇರ್ ಮಾಡಿದ್ದರು.

from-reel-to-real-uma-krishnan-s-viral-hint-sparks-thalapathy-vijay-and-trisha-marriage-rumors

ಉಮಾ ಅವರ ಈ ನಡೆಯಿಂದ ಆಗಲೇ ಹಲವರಲ್ಲಿದ್ದ ಅನುಮಾನ ಇನ್ನೂ ಹೆಚ್ಚಾಗಿತ್ತು. ಈಗ ತ್ರಿಶಾ ತಾಯಿ ಉಮಾ ಅಭಿಮಾನಿಯೊಬ್ಬನ ರೀಲ್‌ನ ಮೆಚ್ಚಿಕೊಂಡಿದ್ಧಾರೆ. ಇನ್ನೂ ಮೊನ್ನೆ ಮೊನ್ನೆ ಮಾರ್ಚ್ 5ರಂದು ಇಬ್ಬರು ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ಮದುವೆಗೆ ಬಂದ ವಿಷಯ ಈಗಾಗಲೇ ಎಲ್ಲರಿಗೆ ಗೊತ್ತಿರುವಂತಹದ್ದೇ.

ಇದೆಲ್ಲದರಿಂದ ಈಗ ವಿಜಯ್ ಮತ್ತು ತ್ರಿಶಾ ಮದುವೆಯಾಗುವುದು ಖಚಿತ ಎನ್ನುವ ಅಭಿಪ್ರಾಯ ಸದ್ಯ ಕೇಳಿ ಬರುತ್ತಿದೆ. ತ್ರಿಶಾ ತಾಯಿ ಉಮಾ ಈ ಮೂಲಕ ಇಬ್ಬರ ಸಂಬಂಧದ ಮೇಲೆ ಅಧಿಕೃತವಾದ ಮುದ್ರೆ ಒತ್ತಿದ್ದಾರೆ ಎಂದು ಒಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ವಾದ ಮಾಡುತ್ತಿದೆ.

ಒಟ್ನಲ್ಲಿ ಮುಂಬರುವ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆಯ ನಂತರ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ. ಒಂದು ಕಾಲದಲ್ಲಿ ಸಿನಿಮಾದಲ್ಲಿ ಪ್ರೇಮಿಗಳಾಗಿ ನಟಿಸಿ ಗೆದ್ದಿದ್ದ ಈ ಜೋಡಿ, ನಿಜ ಜೀವನದಲ್ಲಿ ಸತಿ-ಪತಿಯಾಗುತ್ತಾರಾ..? ಅಥವಾ ಕಾನೂನು ಸಮರದ ನಡುವೆ ಈ ವದಂತಿಗಳು ಕೇವಲ ಗಾಳಿಸುದ್ದಿಯಾಗಿ ಉಳಿಯುತ್ತಾವಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
From Ghilli to real-life wedding bells? Rumors of Thalapathy Vijay and Trisha Krishnan’s marriage are breaking the internet after a cryptic hint from Trisha's mother. We decode the viral social media activity and the truth behind the 20-year-old "Reel to Real" chemistry.
Read more about: vijay trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X