ಮೊದಲ ಚಿತ್ರಕ್ಕೆ ₹50 ಲಕ್ಷ ಸಂಭಾವನೆ.. 6ನೇ ಚಿತ್ರಕ್ಕೆ ₹25 ಕೋಟಿ ಡಿಮ್ಯಾಂಡ್; ಯುವನಟ ಜಾಕ್‌ಪಾಟ್

ಸಿನಿಮಾ ಅನ್ನೋದು ಜೂಜಾಟ ಎಂದು ಕೆಲವರು ಹೇಳುತ್ತಾರೆ. ಪ್ರತಿಭೆ ಜೊತೆಗೆ ಅದೃಷ್ಟ ಕೈ ಹಿಡಿದರೆ ಈ ಇಂಡಸ್ಟ್ರಿಯಲ್ಲಿ ರಾತ್ರೋರಾತ್ರಿ ಕುಬೇರರಾಗಬಹುದು. ಒಂದೇ ಒಂದು ಹಿಟ್ ಸಿನಿಮಾ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರ ನಸೀಬು ಬದಲಿಸಿಬಿಡುತ್ತದೆ. ಅದೇ ರೀತಿ ಒಂದು ಫ್ಲಾಪ್ ಸಿನಿಮಾ ಎಲ್ಲರನ್ನೂ ಪಾತಾಳಕ್ಕೆ ಕುಸಿಯುವಂತೆ ಮಾಡಿಬಿಡುತ್ತದೆ.

ಇಲ್ಲೊಬ್ಬ ಯುವನಟ ಕೆಲವೇ ವರ್ಷಗಳಲ್ಲಿ ಜಾದೂ ಮಾಡಿಬಿಟ್ಟಿದ್ದಾರೆ. ಮೊದಲ ಚಿತ್ರಕ್ಕೆ ಕೇವಲ 50 ಲಕ್ಷ ರೂ. ಸಂಭಾವನೆ ಪಡೆದಿದ್ದ ಆತ ತನ್ನ 6ನೇ ಚಿತ್ರಕ್ಕೆ 25 ಕೋಟಿ ರೂ. ಡಿಮ್ಯಾಂಡ್ ಮಾಡುತ್ತಿದ್ದಾನೆ ಎನ್ನಲಾಗ್ತಿದೆ. ಆತನ ಕ್ರೇಜ್ ನೋಡಿ ನಿರ್ಮಾಪಕರು ಕೂಡ ಕೇಳಿದಷ್ಟು ಹಣ ಕೊಡಲು ಮುಂದಾಗಿದ್ದಾರೆ. ಅಂದಹಾಗೆ ಆತ ಬಹುಮುಖ ಪ್ರತಿಭೆ. 32 ವರ್ಷ ವಯಸ್ಸಿನ ಈತ ಮೊದಲು ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಿತನಾಗಿದ್ದ. ಬಳಿಕ ಹೀರೊ ಕೂಡ ಸಕ್ಸಸ್ ಕಂಡಿದ್ದಾನೆ.

From Rs 50 Lakh to Rs 25 Crore young actor Meteoric Rise in Tamil Cinema

ತಮಿಳು ನಟ, ನಿರ್ದೇಶಕ ಪ್ರದೀಪ್ ರಂಗನಾಥನ್‌ಗೆ ಹೀಗೆ ದಿಢೀರನೆ ನಸೀಬು ಬದಲಾಗಿಬಿಟ್ಟಿದೆ. 7 ವರ್ಷಗಳ ಹಿಂದೆ 'ಕೊಮಲಿ' ಎಂಬ ಚಿತ್ರವನ್ನು ಪ್ರದೀಪ್ ನಿರ್ದೇಶನ ಮಾಡಿದ್ದರು. ಚಿತ್ರದ ಅತಿಥಿ ಪಾತ್ರದಲ್ಲಿ ಕೂಡ ಮಿಂಚಿದ್ದರು. ಬಳಿಕ 'ಲವ್ ಟುಡೇ' ಎಂಬ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. 'ಡ್ರ್ಯಾಗನ್', 'ಡ್ಯೂಡ್' ಮತ್ತೆರಡು ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿಬಿಡ್ತು. ಹಾಗಾಗಿ ನೋಡ ನೋಡುತ್ತಲೇ ಪ್ರದೀಪ್ ಕ್ರೇಜ್ ಹೆಚ್ಚಾಯಿತು. ನಟಿಸಿದ 3 ಸಿನಿಮಾಗಳು 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಹಾಗಾಗಿ ಪ್ರದೀಪ್ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ.

ವಿಘ್ನೇಶ್ ಶಿವನ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಲವ್ ಇನ್ಸುರೆನ್ಸ್ ಕಂಪನಿ' ಎಂಬ ಸಿನಿಮಾದಲ್ಲಿ ಪ್ರದೀಪ್ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿದೆ. ಇದೀಗ ಮತ್ತೊಂದು ಹೊಸ ಚಿತ್ರದ ಬಗ್ಗೆ ಚರ್ಚೆ ನಡೀತಿದೆ. ಇದೇ ಚಿತ್ರಕ್ಕೆ ಪ್ರದೀಪ್ 25 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸದ್ಯ ಆರೇಳು ಸಿನಿಮಾಗಳಲ್ಲಿ ಪ್ರದೀಪ್ ನಟಿಸುತ್ತಿದ್ದಾರೆ. ಆ ಸಿನಿಮಾಗಳ ಕೆಲಸಗಳು ವಿವಿಧ ಹಂತದಲ್ಲಿದೆ. ಇಷ್ಟು ಬ್ಯುಸಿ ಇರುವ ನಟ, ನಿರ್ದೇಶಕ ಕೇಳಿದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಸೈ ಎನ್ನುತ್ತಿದ್ದಾರೆ.

ನೋಡಲು ತೆಳ್ಳಗೆ, ಕೃಷ್ಣವರ್ಣದ ನಟ ತನ್ನ ಲುಕ್ಸ್ ಕಾರಣಕ್ಕೆ ಟ್ರೋಲ್ ಆಗಿದ್ದು ಇದೆ. ಆದರೆ ಪ್ರತಿಭೆ ಇದ್ದರೆ ಸಾಕು ರೂಪ, ಬಣ್ಣ ಲೆಕ್ಕಕ್ಕೆ ಬರಲ್ಲ ಎಂದು ಪ್ರದೀಪ್ ಸಾಧಿಸಿ ತೋರಿಸಿದ್ದಾರೆ. 'ಲವ್ ಟುಡೇ' ಚಿತ್ರಕ್ಕೆ 1.50 ಕೋಟಿ ರೂ. ಸಂಭಾವನೆ ಸಿಕ್ಕಿತ್ತು ಎನ್ನಲಾಗ್ತಿದೆ. ಬಳಿಕ ಬಂದ 'ಡ್ರ್ಯಾಗನ್' ಸಿನಿಮಾ ಸೂಪರ್ ಹಿಟ್ ದಾಖಲೆ ಬರೆಯಿತು.

ಸಹಜವಾಗಿಯೇ 'ಡ್ಯೂಡ್' ಚಿತ್ರಕ್ಕೆ ಪ್ರದೀಪ್ ಸಂಭಾವನೆ ಗಣನೀಯವಾಗಿ ಹೆಚ್ಚಾಗಿತ್ತು. ಈ ಚಿತ್ರಕ್ಕಾಗಿ ಅಂದಾಜು 8ರಿಂದ 10 ಕೋಟಿ ರೂ. ಸಂಭಾವನೆ ಪಡೆದಿದ್ದು ಎಂದು ಗುಲ್ಲಾಗಿತ್ತು. ನಿಜಕ್ಕೂ ಪ್ರದೀಪ್ ಕ್ರೇಜ್ ಶುರುವಾಗಿದೆ. ಎಲ್ಲಾ ನಟರ ಅಭಿಮಾನಿಗಳು ಈತನ ಸಿನಿಮಾಗಳನ್ನು ನೋಡುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಕೂಡ ಪ್ರದೀಪ್ ಚಿತ್ರದ ಕೈಹಿಡಿಯುತ್ತಿದ್ದಾರೆ. ಹಾಗಾಗಿ ನಟಿಸಿದ 3 ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಕ್ರೇಜ್‌ಗೆ ತಕ್ಕಂತೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ಚಿತ್ರರಂಗದಲ್ಲಿ ಹೊಸ ವಿಷಯ ಏನಲ್ಲ. ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯುವ ಲೆಕ್ಕಾಚಾರವೂ ಶುರುವಾಗಿದೆ. ಆ ಲೆಕ್ಕದಲ್ಲಿ ಪ್ರದೀಪ್ ಸಂಭಾವನೆ ಅನಾಯಾಸವಾಗಿ 20 ಕೋಟಿ ರೂ. ದಾಟುತ್ತದೆ ಎನ್ನುವ ಚರ್ಚೆ ಕೂಡ ನಡೀತಿದೆ.

More from Filmibeat

Read more about: kollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X