For Quick Alerts
  ALLOW NOTIFICATIONS  
  For Daily Alerts

  ತಮಿಳು 'ಸುಲ್ತಾನ'ದಲ್ಲಿ ಮಿಂಚಿದ ಕೆಜಿಎಫ್ ಖ್ಯಾತಿಯ ಗರುಡ ರಾಮ್

  |

  ಕೆಜಿಎಫ್ ಚಿತ್ರದ ಗರುಡ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರ ಮನಗೆದ್ದ ರಾಮ್ ಈಗ ತಮಿಳಿನಲ್ಲಿ ಅಬ್ಬರಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಹೀರೋ ಸಿನಿಮಾದಲ್ಲಿ ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಿದ್ದು, ಟ್ರೈಲರ್‌ನಲ್ಲಿ ಮಿಂಚಿದ್ದಾರೆ.

  ಕಾರ್ತಿ ನಾಯಕನಾಗಿ ನಟಿಸಿರುವ 'ಸುಲ್ತಾನ' ಸಿನಿಮಾದಲ್ಲಿ ಗರುಡ ಖ್ಯಾತಿಯ ರಾಮ್ ವಿಲನ್ ಆಗಿ ಅಭಿನಯಿಸಿದ್ದಾರೆ. ಕೆಜಿಎಫ್ ಬಳಿಕ ರಾಮ್ ಅಭಿನಯಿಸಿರುವ ಸಿನಿಮಾ ಇದಾಗಿರುವುದರಿಂದ ಅದೇ ರೀತಿ ಪಾತ್ರ ಇದ್ದಂತೆ ಕಾಣುತ್ತಿದೆ.

  ಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

  ಇತ್ತೀಚಿಗಷ್ಟೆ ಸುಲ್ತಾನ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆಯೂ ಮೆಚ್ಚುಗೆ ಪಡೆದುಕೊಂಡಿದೆ. ಟ್ರೈಲರ್‌ನಲ್ಲಿ ಒಂದೆರಡು ದೃಶ್ಯದಲ್ಲಿ ಬಂದರೂ ಗರುಡ ರಾಮ್ ಸಿನಿಮಾದ ಪ್ರಮುಖ ಪಾತ್ರ ಎನ್ನುವಷ್ಟು ಮಟ್ಟಿಗೆ ಖದರ್ ತೋರಿಸಿದ್ದಾರೆ.

  ವಿಶೇಷ ಅಂದ್ರೆ ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ನಾಯಕಿ. ರಶ್ಮಿಕಾ ಅಭಿನಯದ ಮೊದಲ ತಮಿಳು ಚಿತ್ರ. ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚು ತೊಡಗಿಕೊಂಡಿದ್ದ ಕೊಡಗಿನ ಸುಂದರಿಗೆ ಮೊದಲ ಕಾಲಿವುಡ್ ಪ್ರಾಜೆಕ್ಟ್ ಇದಾಗಿದೆ.

  ಇನ್ನುಳಿದಂತೆ ಕಾರ್ತಿ ಜೊತೆಯಲ್ಲಿ ಹಿರಿಯ ನಟ ನೆಪೋಲಿಯನ್, ಲಾಲ್, ಯೋಗಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ಭಾಗ್ಯರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಏಪ್ರಿಲ್ 2 ರಂದು ತೆರೆಗೆ ಬರಲಿದೆ.

  Yuvarathna film team lands in trouble!

  ಏಪ್ರಿಲ್ 1 ರಂದು ಕರ್ನಾಟಕದಲ್ಲಿ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

  English summary
  Garuda Fame ramachandra raju Played Important Role In Karthi Sulthan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X