For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ಸಂಗೀತ ನಿರ್ದೇಶಕ ಘಂಟಸಾಲರ ಮಗ ರತ್ನಕುಮಾರ್ ನಿಧನ

  |

  ಭಾರತೀಯ ಸಿನಿಮಾರಂಗ ಕಂಡ ದಿಗ್ಗಜ ಸಂಗೀತ ನಿರ್ದೇಶಕ, ಗಾಯಕ ಘಂಟಸಾಲರ ಎರಡನೇ ಪುತ್ರ ರತ್ನಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರತ್ನ ಕುಮಾರ್ ಜೂನ್ 9 ರಂದು ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

  ರತ್ನಕುಮಾರ್ ಘಂಟಸಾಲ ನಿಧನಕ್ಕೆ ದಕ್ಷಿಣ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದರು. ರತ್ನಕುಮಾರ್ ತಂದೆಯಂತೆ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಸುಮಾರು ನಲವತ್ತು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಲ್ಲಿದ್ದ ಘಂಟಸಾಲ ಪುತ್ರ ಗಾಯಕ ಹಾಗು ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ.

  ಹಿರಿಯ ನಟಿ, ನೃತ್ಯ ಕಲಾವಿದೆ ಸುರೇಖ ನಿಧನಹಿರಿಯ ನಟಿ, ನೃತ್ಯ ಕಲಾವಿದೆ ಸುರೇಖ ನಿಧನ

  ಡಬ್ಬಿಂಗ್ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದ ರತ್ನಕುಮಾರ್ ಇಂಡಿಯಾ ಬುಕ್ ಆಫ್ ರೆಕಾರ್ಡ್, ತಮಿಳುನಾಡು ಬುಕ್ ಆಫ್ ರೆಕಾರ್ಡ್ ಸೇರಿದಂತೆ ಹಲವು ದಾಖಲೆ ಬರೆದಿದ್ದಾರೆ. ಮುಂದೆ ಓದಿ...

  ಘಂಟಸಾಲ ಎರಡನೇ ಪುತ್ರ ರತ್ನಕುಮಾರ್

  ಘಂಟಸಾಲ ಎರಡನೇ ಪುತ್ರ ರತ್ನಕುಮಾರ್

  ಘಂಟಸಾಲ ವೆಂಕಟೇಶ್ವರರಾವ್‌ಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿ ನಿಧನದ ಬಳಿಕ ಎರಡನೇ ವಿವಾಹವಾಗಿದ್ದರು. ಒಟ್ಟು ಏಂಟು ಜನ ಮಕ್ಕಳು. ನಾಲ್ಕು ಜನ ಗಂಡು (ವಿಜಯಕುಮಾರ್, ರತ್ನಕುಮಾರ್, ರವಿಕುಮಾರ್, ಶಂಕರ್ ಕುಮಾರ್) ಮತ್ತು ನಾಲ್ಕು ಜನ ಹೆಣ್ಣು (ಶ್ಯಾಮಲ, ಸುಗುಣ, ಶಾಂತಿ, ಮೀರಾ). ಎರಡನೇ ಪುತ್ರರಾಗಿದ್ದ ರತ್ನಕುಮಾರ್ 4 ದಶಕದಿಂದ ಚಿತ್ರರಂಗದಲ್ಲಿದ್ದಾರೆ.

  ಕಮಲ್ ಹಾಸನ್ ಆಪ್ತ ನಿರ್ದೇಶಕ ಜಿಎನ್ ರಂಗರಾಜನ್ ನಿಧನಕಮಲ್ ಹಾಸನ್ ಆಪ್ತ ನಿರ್ದೇಶಕ ಜಿಎನ್ ರಂಗರಾಜನ್ ನಿಧನ

  ಡಬ್ಬಿಂಗ್ ಕಲಾವಿದನಾಗಿ ಯಶಸ್ಸು

  ಡಬ್ಬಿಂಗ್ ಕಲಾವಿದನಾಗಿ ಯಶಸ್ಸು

  40 ವರ್ಷದ ಸಿನಿಮಾ ಜರ್ನಿಯಲ್ಲಿ ಸುಮಾರು 1500ಕ್ಕೂ ಅಧಿಕ ಚಿತ್ರಗಳಲ್ಲಿ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳ, ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ತಮಿಳು ಮತ್ತು ತೆಲುಗಿನ ಕಿರುತೆರೆ ಲೋಕದಲ್ಲಿ ರತ್ನಕುಮಾರ್ ದೊಡ್ಡ ಹೆಸರು. 15 ಸಾವಿರ ಎಪಿಸೋಡ್‌ಗಳಲ್ಲಿ ಘಂಟಸಾಲ ಪುತ್ರ ಡಬ್ಬಿಂಗ್ ಮಾಡಿದ್ದಾರೆ.

  ಇಂಡಿಯಾ ಬುಕ್ ಆಫ್ ರೆಕಾರ್ಡ್

  ಇಂಡಿಯಾ ಬುಕ್ ಆಫ್ ರೆಕಾರ್ಡ್

  ಘಂಟಸಾಲ ರತ್ನಕುಮಾರ್ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಸತತವಾಗಿ ಏಂಟು ಗಂಟೆಗಳ ಕಾಲ ಡಬ್ಬಿಂಗ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಅಮೇಜಿಂಗ್ ಬುಕ್ ಆಫ್ ರೆಕಾರ್ಡ್, ತಮಿಳುನಾಡು ಬುಕ್‌ ಆಫ್ ರೆಕಾರ್ಡ್‌ನಲ್ಲೂ ರತ್ನಕುಮಾರ್ ಹೆಸರಿದೆ. 12 ಗಂಟೆ ಡಬ್ಬಿಂಗ್ ಮಾಡಿ ದಾಖಲೆ ಮಾಡಬೇಕೆಂಬ ಆಸೆ ಹೊಂದಿದ್ದರು. ಆದರೆ, ಆ ಆಸೆ ಈಡೇರಲಿಲ್ಲ. ಸುಮಾರು 50ಕ್ಕೂ ಸಾಕ್ಷ್ಯಚಿತ್ರಗಳಲ್ಲಿ ರತ್ನಕುಮಾರ್ ಡಬ್ಬಿಂಗ್ ಮಾಡಿದ್ದಾರೆ.

  ಗಾಯಕ, ಡಬ್ಬಿಂಗ್ ಕಲಾವಿದ

  ಗಾಯಕ, ಡಬ್ಬಿಂಗ್ ಕಲಾವಿದ

  ರತ್ನಕುಮಾರ್ ಗಾಯಕನಾಗಿಯೂ ಕೆಲವು ಹಾಡುಗಳನ್ನು ಹಾಡಿದ್ದರು. ತಂದೆಯ ನಂತರ ಗಾಯಕನಾಗಬೇಕೆಂದು ನಿರ್ಧರಿಸಿ ಹಾಡಲು ಪ್ರಾರಂಭಿಸಿದರು. ಆದರೆ, ಗಾಯಕನಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡಿದ್ದರು. ಆ ಚಿತ್ರ ಶತದಿನ ಆಚರಿಸಿತ್ತು. ಆದಾದ ಮೇಲೆ ರತ್ನಕುಮಾರ್ ಡಬ್ಬಿಂಗ್‌ಗೆ ಹೆಚ್ಚು ಬೇಡಿಕೆ ಬಂತು.

  ದರ್ಶನ್ ಮನವಿಗೆ ಸ್ಪಂದಿಸಿದ ಉಪೇಂದ್ರ | Darshan | Filmibeat Kannada
  ಕೊರೊನಾ ನೆಗೆಟಿವ್

  ಕೊರೊನಾ ನೆಗೆಟಿವ್

  ಘಂಟಸಾಲ ರತ್ನಕುಮಾರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸೋಂಕಿನಿಂದ ಚೇತರಿಸಿಕೊಂಡಿದ್ದರು. ಇತ್ತೀಚಿಗಷ್ಟೆ ನೆಗೆಟಿವ್ ವರದಿ ಬಂದಿತ್ತು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ವರದಿಯಾಗಿದೆ.

  English summary
  Ghantasala Ratnakumar, son of legendary singer Ghantasala passed away on June 10th from Cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X