ತಮಿಳು ನಟ ವಿಶಾಲ್ ಆರೋಗ್ಯದ ಬಗ್ಗೆ ತಂದೆ ಜಿಕೆ ರೆಡ್ಡಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ

ತಮಿಳು ನಟ ವಿಶಾಲ್ ಆರೋಗ್ಯ ಬಗ್ಗೆ ಕಳೆದರಡು ದಿನಗಳಿಂದ ಭಾರೀ ಚರ್ಚೆ ನಡೀತಿದೆ. ಇದ್ದಕ್ಕಿದಂತೆ ನಟನಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ. 'ಮದಗಜ ರಾಜ' ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ವಿಶಾಲ್ ಅವರನ್ನು ಕಂಡವರಿಗೆ ನಿಜಕ್ಕೂ ಆಗಿತ್ತು.

ಆಕ್ಷನ್ ಸಿನಿಮಾಗಳಲ್ಲಿ ಭರ್ಜರಿ ಸ್ಟಂಟ್ಸ್ ಮಾಡುತ್ತ ಖಡಕ್ ಆಗಿ ಅಬ್ಬರಿಸುತ್ತಿದ್ದ ವಿಶಾಲ್ ಬಹಳ ಸೊರಗಿ ಹೋಗಿದ್ದಾರೆ. ನಿಲ್ಲಲು ಕೂರಲೂ ಸಾಧ್ಯವಾಗದಷ್ಟು ಜರ್ಜರಿತರಾಗಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಸುಸ್ತಾಗಿ ಬಳಲಿ ಬೆಂಡಾದಂತೆ ಕಂಡರು. ಚಳಿಯಿಂದ ನಡುಗುತ್ತಿದ್ದ ವಿಶಾಲ್ ಗಟ್ಟಿಯಾಗಿ ಮೈಕ್ ಹಿಡಿದು ಮಾತನಾಡಲು ಕಷ್ಟಪಟ್ಟರು. ನಾಲಿಗೆ ತೊದಲುತ್ತಿತ್ತು.

GK Reddy provided an update regarding the health of his son Tamil actor Vishal

ವಿಶಾಲ್ ಅವರಿಗೆ ಏನಾಯ್ತು? ಇದ್ದಕ್ಕಿದಂತೆ ಯಾಕಿಷ್ಟು ಆರೋಗ್ಯ ಹದಗೆಟ್ಟಿಗೆ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ನನಗೆ ವೈರಲ್ ಫೀವರ್ ಇದ್ದು ತೀವ್ರ ಜ್ವರದಿಂದ ಬಳಲುತ್ತಿದ್ದೇನೆ. ಅದನ್ನು ಲೆಕ್ಕಿಸದೇ ಕಾರ್ಯಕ್ರಮಕ್ಕೆ ಬಂದಿದ್ದಾಗಿ ಸ್ವತಃ ವಿಶಾಲ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಇದೀಗ ಅವರ ಆರೋಗ್ಯದ ಬಗ್ಗೆ ತಂದೆ ಜಿಕೆ ರೆಡ್ಡಿ ಫಿಲ್ಮಿಬೀಟ್‌ ಕನ್ನಡಗೆ ಪ್ರತಿಕ್ರಿಯಿಸಿದ್ದಾರೆ.

ಯಾರೂ ಆತಂಕ ಪಡುವ ಅಗತ್ಯ ಇಲ್ಲ. ವಿಶಾಲ್ ಈಗ ಆರಾಮಾಗಿ ಇದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರ ಜ್ವರದಿಂದ ಮೊನ್ನೆ 'ಮದಗಜ ರಾಜ' ಚಿತ್ರದ ಈವೆಂಟ್‌ನಲ್ಲಿ ಆ ರೀತಿ ಆಯಿತು. ಚಳಿಯಿಂದ ಕೊಂಚ ನಡುಗಿದ್ದರು. ಈಗ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಮನೆಯಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ವಿಶಾಲ್ ತಂದೆ ಜಿಕೆ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮೂಲದ ಜಿಕೆ ರೆಡ್ಡಿ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ದೊಡ್ಡ ಆಕ್ಟರ್ ಆಗಬೇಕು ಎಂದು ಜಿಕೆ ರೆಡ್ಡಿ ಆಸೆ ಪಟ್ಟಿದ್ದರು. ಆದರೆ ಆ ಕನಸ್ಸನ್ನು ಮಗ ವಿಶಾಲ್ ನನಸು ಮಾಡಿದ್ದಾರೆ ಎಂದು ಹಿಂದೆ ವೇದಿಕೆಯೊಂದರಲ್ಲಿ ಖುಷಿಪಟ್ಟಿದ್ದರು. 'KGF' ತಮಿಳು ವಿತರನೆ ಹಕ್ಕನ್ನು ಸ್ವತಃ ವಿಶಾಲ್ ಖರೀದಿಸಿದ್ದರು. ಆಗ ಕನ್ನಡದಲ್ಲೇ ಜಿಕೆ ರೆಡ್ಡಿ ಮಾತನಾಡಿದ್ದು ವೈರಲ್ ಆಗಿತ್ತು. ತಮಿಳಿನಲ್ಲಿ ಕೆಲ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

ವಿಶಾಲ್ ಆರೋಗ್ಯದ ಬಗ್ಗೆ ಭಾರೀ ಚರ್ಚೆ ನಡೀತಿದೆ. ಆದರೆ ಇದೀಗ ತಂದೆ ಜಿಕೆ ರೆಡ್ಡಿ ಅವರೇ ಸ್ಪಷ್ಟನೆ ನೀಡಿದ್ದಾರೆ. 12 ವರ್ಷಗಳ ಹಿಂದೆ 'ಮದಗಜ ರಾಜ' ಸಿನಿಮಾ ನಿರ್ಮಾಣವಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಲೀಗಲ್ ಹಾಗೂ ಆರ್ಥಿಕ ಸಮಸ್ಯೆಯಿಂದ ತಡವಾಗಿತ್ತು ಎನ್ನಲಾಗ್ತಿದೆ. ಇದೀಗ ಸ್ವತಃ ವಿಶಾಲ್ ಚಿತ್ರದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತಮ್ಮದೇ ಸಿನಿಮಾ ಆಗಿರುವುದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರೂ ಪ್ರಚಾರಕ್ಕೆ ಆಗಮಿಸಿದ್ದರು.

ಸುಂದರ್ .ಸಿ ನಿರ್ದೇಶನದ ಆಕ್ಷನ್ ಕಾಮಿಡಿ ಎಂಟರ್‌ಟೈನರ್ 'ಮದಗಜ ರಾಜ' ಸಿನಿಮಾ ಜನವರಿ 12ಕ್ಕೆ ತೆರೆಗೆ ಬರ್ತಿದೆ. ತಮಿಳಿನ ಯಾವುದೇ ದೊಡ್ಡ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರುತ್ತಿಲ್ಲ. ಇದು ವಿಶಾಲ್ ಚಿತ್ರಕ್ಕೆ ಪ್ಲಸ್ ಆಗುವ ನಿರೀಕ್ಷೆಯಿದೆ. ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ, ಸೋನು ಸೂದ್, ಸುಬ್ಬರಾಜು ಹಾಗೂ ಸಂತಾನಂ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

2013ರ ಸಂಕ್ರಾಂತಿ 'ಮದಗಜ ರಾಜ' ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ವಿಪರ್ಯಾಸ ಅಂದರೆ 13 ವರ್ಷಗಳ ಬಳಿಕ ಸುಗ್ಗಿ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಟೀಸರ್ ರಿಲೀಸ್ ಮಾಡಲಾಗಿದೆ. ಪಳನಿ, ಜೈಪುರ್, ಚೆನ್ನೈ ಹಾಗೂ ಆಸ್ಟ್ರೇಲಿಯಾದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ವಿಜಯ್ ಆಂಟೋನಿ ಸಂಗೀತ ಚಿತ್ರಕ್ಕಿದೆ.

More from Filmibeat

English summary
GK Reddy, father of Tamil actor Vishal, shared an exclusive update about his son's health with Filmibeat Kannada;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X