ಹೊಸ ವರ್ಷಕ್ಕೆ ಹೊಸ ಸಿನಿಮಾ ಘೋಷಿಸಿದ ದಳಪತಿ ವಿಜಯ್: ಇಲ್ಲಿದೆ ಹೆಚ್ಚಿನ ಮಾಹಿತಿ

ಇತ್ತೀಚೆಗೆ 'ಲಿಯೋ' ಸಿನಿಮಾ ಮಾಡಿ ಗೆದ್ದ ದಳಪತಿ ವಿಜಯ್ ಇದೀಗ ಹೊಸ ಸಿನಿಮಾ ಘೋಷಿಸಿದ್ದಾರೆ. ವೆಂಕಟ್ ಪ್ರಭು ಜೊತೆ 68ನೇ ಸಿನಿಮಾ ಮಾಡುವುದಾಗಿ ಈ ಹಿಂದೆ ಹೇಳಿದ್ದರು. ಇದೀಗ ಟೈಟಲ್ ಸಮೇತ ಆ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಮಾಡಲಾಗಿದೆ.

ಚಿತ್ರಕ್ಕೆ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಎಂದು ಹೆಸರಿಡಲಾಗಿದೆ. ಇದನ್ನು ವೆಂಕಟ್ ಪ್ರಭು ಹೀರೋ ಎಂದು ಕರೆಯುತ್ತಾರೆ ಎಂದು ಬರೆಯಲಾಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ದಳಪತಿ ವಿಜಯ್ ಎರಡು ಪಾತ್ರಗಳು ಪ್ಯಾರಾಚೂಟ್‌ನಿಂದ ಇಳಿದು ನಡೆದುಕೊಂಡು ಬರುವಂತೆ ಡಿಸೈನ್ ಮಾಡಿದ್ದಾರೆ. ಎರಡು ಪಾತ್ರಗಳಲ್ಲಿ ಒಬ್ಬರು ವಯಸ್ಸಾದವರಂತೆ ಕಂಡ್ರೆ ಇನ್ನೊಬ್ಬರು ಯಂಗ್ ಆಗಿ ಕಾಣುತ್ತಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತವಿದ್ದು 2024ರಲ್ಲೇ ಸಿನಿಮಾ ರಿಲೀಸ್ ಆಗಲಿದೆ.

GOAT: Thalapathy Vijays next official announcement with a title look poster is out

ಕಾಲಿವುಡ್‌ ನಂಬರ್ ವನ್‌ ಸ್ಟಾರ್‌ಗಳಲ್ಲಿ ವಿಜಯ್ ಒಬ್ಬರು. ಒಂದೇ ಭಾಷೆಯಲ್ಲಿ ದಳಪತಿ ಸಿನಿಮಾಗಳು 300ರಿಂದ 400 ಕೋಟಿ ರೂ. ಬ್ಯುಸಿನೆಸ್ ಮಾಡುತ್ತವೆ. ಅದೇ ಕಾರಣಕ್ಕೆ ರಜನಿಕಾಂತ್‌ನ ಮೀರಿಸಿದ ನಟ ವಿಜಯ್ ಎನ್ನುವಂತೆ ಇತ್ತೀಚೆಗೆ ಭಾರೀ ಚರ್ಚೆ ನಡೀತು. 'ಲಿಯೋ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಈ ಹಿಂದೆ ವೆಂಕಟ್ ಪ್ರಭು ಕನ್ನಡ ನಟ ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ಚರ್ಚೆ ಆಗಿತ್ತು. ಆದರೆ ದಿಢೀರನೆ ಆ ಸಿನಿಮಾ ಪಕ್ಕಕ್ಕಿಟ್ಟ ವೆಂಕಟ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 'ಮಂಗಾತ', 'ಮಾನಾಡು' ರೀತಿಯ ಹಿಟ್ ಸಿನಿಮಾಗಳನ್ನು ವೆಂಕಟ್ ಕೊಟ್ಟಿದ್ದಾರೆ. ಇದೀಗ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿ ವಿಜಯ್ ಜೊತೆ ಕೈಜೋಡಿಸಿದ್ದಾರೆ.

'ಲಿಯೋ' ಸಿನಿಮಾ ತೆರೆಕಂಡ ನಾಲ್ಕೇ ದಿನಕ್ಕೆ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಸಿನಿಮಾ ಮುಹೂರ್ತ ನೆರವೇರಿತ್ತು. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಕೂಡ ನಡೀತಿದೆ. ವರ್ಷಕ್ಕೆ ಎರಡೆರಡು ಸಿನಿಮಾಗಳನ್ನು ವಿಜಯ ಮಾಡುತ್ತಾ ಬರುತ್ತಿದ್ದಾರೆ. ಕಳೆದ ವರ್ಷ 'ಬೀಸ್ಟ್' ಸಿನಿಮಾ ಮಾಡಿ ಸೋತಿದ್ದ ವಿಜಯ್ ಈ 'ವಾರಿಸು' ಹಾಗೂ 'ಲಿಯೋ' ಸಿನಿಮಾ ಮಾಡಿ ಗೆದ್ದಿದ್ದಾರೆ.

ಸ್ನೇಹಾ, ಪ್ರಶಾಂತ್, ಪ್ರಭುದೇವ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು ಹೀಗೆ ದೊಡ್ಡ ತಾರಾಗಣ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿದೆ. ಸಿದ್ದಾರ್ತ್ ನುನಿ ಛಾಯಾಗ್ರಹಣ ಚಿತ್ರಕ್ಕಿದೆ. ಮುಂದಿನ ವರ್ಷ ದೀಪಾವಳಿ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಈ ಹಿಂದೆ ಚಿತ್ರಕ್ಕೆ 'ಬಾಸ್' ಅಥವಾ 'ಪಝಲ್' ಎನ್ನುವ ಟೈಟಲ್ ಇಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು.

'ಕತ್ತಿ', 'ತುಪಾಕಿ' ಸಿನಿಮಾಗಳ ಬಳಿಕ ದಳಪತಿ ವಿಜಯ್ ಖದರ್ ಹೆಚ್ಚಾಯಿತು. ಅಲ್ಲಿಂದ ಮುಂದೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡುತ್ತಾ ಬಂದರು. ಅಲ್ಲೊಂದು ಇಲ್ಲೊಂದು ಸಿನಿಮಾ ಸೋತರೂ ದಳಪತಿ ಕ್ರೇಜ್ ಕಮ್ಮಿ ಆಗಲಿಲ್ಲ. 'ತೇರಿ', 'ಮೆರ್ಸಲ್', 'ಸರ್ಕಾರ್', 'ಬಿಗಿಲ್', 'ಮಾಸ್ಟರ್' ಹೀಗೆ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದವು. 'ಬೀಸ್ಟ್' ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ತಲುಪದಿದ್ದರೂ ನಷ್ಟವೇನು ಆಗಲಿಲ್ಲ. ಲೋಕೇಶದ ಕನಕರಾಜ್ ನಿರ್ದೇಶನದ 'ಲಿಯೋ' ಕೂ ಪ್ರೇಕ್ಷಕರ ನಿರೀಕ್ಷೆ ತಕ್ಕಂತೆ ಮೂಡಿ ಬರಲಿಲ್ಲ.

More from Filmibeat

English summary
THE GREATEST OF ALL TIME: Thalapathy Vijay's Film Now Has A Title
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X