ಗಾಡ್ ಫಾದರ್ ಪ್ರೇಕ್ಷಕರಿಗೆ ಕಾದಿದೆ ಪ್ರಸಾದ್ ಗಿಫ್ಟ್!

ಅಂದಹಾಗೆ, ಈ 'ಗಾಡ್‌ಫಾದರ್ ಚಿತ್ರ ಮೇ ತಿಂಗಳ ಮೊದಲ ವಾರದಲ್ಲೇ ಬಿಡುಗಡೆ ಆಗಬೇಕಿತ್ತು. ಆಗ ಚಿತ್ರದ ಬಿಡುಗಡೆಗೆ ಅಡ್ಡ ಬಂದದ್ದು ಮುನಿರತ್ನ ನಿರ್ಮಾಣದ 'ಕಠಾರಿ ವೀರ ಸುರಸುಂದರಾಂಗಿ'. ಗಾಡ್ ಫಾದರ್ ಹಾಗೂ ಕಠಾರಿವೀರ ಬಿಡುಗಡೆ ಸಂಬಂಧ ಮೊದಲು ಭಾರೀ ಸ್ನೇಹಿತರಾಗಿದ್ದ ಮಂಜು ಹಾಗೂ ಮುನಿರತ್ನ, ಪರಸ್ಪರ ಬೀದಿಜಗಳದಂತೆ ಮಾಧ್ಯಮದ ಮುಂದೆಯೂ ಕಚ್ಚಾಡಿದ್ದರು. ನಂತರ ಕಠಾರಿವೀರ ಬಿಡುಗಡೆಗೊಂಡಿದ್ದು ಈಗ ಇತಿಹಾಸ.
ಗಾಡ್‌ಫಾದರ್ ಚಿತ್ರಕ್ಕೆ ಪ್ರಮುಖ ಆಕರ್ಷಣೆಯೆಂದರೆ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ. ಈ ಚಿತ್ರದ ಏಳು ಹಾಡುಗಳ ಪೈಕಿ ಮೂರು ಹಾಡುಗಳಿಗೆ ಹೊಸದಾಗಿ ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಶಾಸ್ತ್ರೀಯ ಸಂಗೀತ ಆಧಾರಿತ ಹಾಡುಗಳು ಹಿಂದಿನ ಮಾಧುರ್ಯವನ್ನು ನೆನಪಿಸುವಂತಿವೆ.
ಗಾಡ್‌ಫಾದರ್ ಚಿತ್ರದ ವಿತರಣೆ ಹಕ್ಕುಗಳು ಈಗಾಗಲೇ ಸಮರ್ಥ್ ವೆಂಚರ್ಸ್ ಪ್ರಸಾದ್ ಪಾಲಾಗಿವೆ. ಹೀಗಾಗಿ ಚಿತ್ರ ಗಳಿಕೆಯಲ್ಲೂ ಸೋತರೂ ನಿರ್ಮಾಪಕ ಮಂಜು ಸಂಪೂರ್ಣ ಸೇಫ್. ಈಗ ತಾವು ವಿತರಿಸಲಿರುವ ಗಾಡ್‌ಫಾದರ್, ಗೆಲ್ಲಲೇಬೇಕು ಎಂದು ಹಠ ಹಿಡಿದು ಕಾರ್ಯಪ್ರವೃತ್ತರಾಗಿರುವ ಪ್ರಸಾದ್, ಆಡಿಯೋ ಸೀಡಿಗಳನ್ನು ಉಚಿತವಾಗಿ ಹಂಚಲು ನಿರ್ಧರಿಸಿದ್ದಾರೆ.
ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಡುಗಳ ಧ್ವನಿಸುರುಳಿಗಳನ್ನು ಎಲ್ಲಾ ಪ್ರೇಕ್ಷಕರಿಗೂ ನೀಡಲಾಗುತ್ತದೆ" ಎಂದಿದ್ದಾರೆ ಸಮರ್ಥ್ ವೆಂಚರ್ಸ್ ಪ್ರಸಾದ್. ಅದೆಷ್ಟು ನಿಜ ಎಂಬುದು ಚಿತ್ರ ಬಿಡುಗಡೆ ಬಳಿಕವಷ್ಟೇ ತಿಳಿಯಲಿದೆ. ಸುದ್ದಿ ಮೂಲಗಳ ಪ್ರಕಾರ ಸಿಡಿ ಉಚಿತ. ಆದರ ಟಿಕೆಟ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಲಾಗುತ್ತದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











