For Quick Alerts
  ALLOW NOTIFICATIONS  
  For Daily Alerts

  ನಯನತಾರಾ- ವಿವಾಹಕ್ಕೆ ಆಗಮಿಸುವ ಅತಿಥಿ ಪಟ್ಟಿ

  |

  ಕಳೆದ ಕೆಲ ವರ್ಷಗಳಿಂದ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಆಗಿದ್ದ ನಟಿ ನಯನತಾರಾ ಹಾಗೂ ವಿಗ್ನೇಶ್ ವಿವಾಹವಾಗುತ್ತಿದ್ದಾರೆ.

  ನಯನತಾರಾ ಹಾಗೂ ವಿಗ್ನೇಶ್ ಇಂದೇ (ಜೂನ್ 09) ವಿವಾಹವಾಗುತ್ತಿದ್ದಾರೆ. ತಮ್ಮ ವಿವಾಹ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಖುದ್ದಾಗಿ ತೆರಳಿ ಹಲವು ಅತಿಥಿಗಳನ್ನು ವಿವಾಹಕ್ಕೆ ಆಮಂತ್ರಿಸಿದ್ದಾರೆ.

  ತಮಿಳು ಚಿತ್ರರಂಗದ ಈ ತಾರಾ ಜೋಡಿಯ ವಿವಾಹಕ್ಕೆ ಹಲವು ಸಿನಿಮಾ ಹಾಗೂ ರಾಜಕೀಯ ರಂಗದ ಗಣ್ಯರು ಆಗಮಿಸಲಿದ್ದಾರೆ. ನಯನತಾರಾ-ವಿಘ್ನೇಶ್ ವಿವಾಹಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್, ಅವರ ಪುತ್ರ ಉದಯ ನಿಧಿ ಸ್ಟಾಲಿನ್ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

  ಇದರ ಜೊತೆಗೆ ನಯನತಾರಾ ಜೊತೆ ನಟಿಸಿರುವ ತಮಿಳಿನ ಸೂಪರ್‌ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್ ಅವರುಗಳು ಸಹ ವಿವಾಹಕ್ಕೆ ಆಗಮಿಸಲಿದ್ದಾರೆ. ಇವರ ಜೊತೆಗೆ ಬಾಲಿವುಡ್‌ನಿಂದ ಶಾರುಖ್ ಖಾನ್ ಸಹ ಬರಲಿದ್ದಾರೆ ಎನ್ನಲಾಗುತ್ತಿದೆ. ಶಾರುಖ್ ಖಾನ್‌ರ ಹೊಸ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಇನ್ನು ನೆರೆ ಹೊರೆಯ ಚಿತ್ರಗಳಿಂದ ಹಲವು ನಟ-ನಟಿಯರು ನಯನತಾರಾ-ವಿಗ್ನೇಶ್ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಂತಾ, ಕಾಜಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ ಇನ್ನೂ ಹಲವರು ಈ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

  ಇಂದು ಬೆಳಿಗ್ಗೆಯಷ್ಟೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ವಿಗ್ನೇಶ್ ಶಿವನ್, ''ಇಂದು ಜೂನ್ 09. ಇಂದು ನಯನಾ ಹಾಗೂ ನನಗೆ ವಿಶೇಷ ದಿನ. ನನ್ನ ಜೀವನದ ಪಯಣದಲ್ಲಿ ಎದುರಾದ ಎಲ್ಲ ವ್ಯಕ್ತಿಗಳಿಗೆ, ಸಂಬಂಧಗಳಿಗೆ, ಮಧುರ ಕ್ಷಣಗಳಿಗೆ ಕಾರಣರಾದ ವ್ಯಕ್ತಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನೀವೆಲ್ಲ ನನ್ನ ಜೀವನವನ್ನು ಸುಂದರಗೊಳಿಸಿದ್ದೀರಿ. ಚಿತ್ರೀಕರಣದಲ್ಲಾಗಲಿ, ಅದರ ಹೊರಗಿನ ಜೀವನವಾಗಲಿ ನಿಮ್ಮಿಂದ ಸುಂದರವಾಗಿದೆ. ನಿಮ್ಮ ಪ್ರಾರ್ಥನೆಗಳಿಗೆ ನಾನು ಋಣಿಯಾಗಿದ್ದೇನೆ'' ಎಂದಿದ್ದಾರೆ.

  ಮುಂದುವರೆದು, ''ಇನ್ನು ನನ್ನ ಜೀವನ, ಪ್ರೀತಿ ಎಲ್ಲವೂ ನನ್ನ ಜೀವನವೇ ಆಗಿರುವ ನಯನತಾರಾಗೆ ಮೀಸಲು. ಓ ನನ್ನ ಪ್ರಿಯತಮೆಯೇ ನೀನು ವಧುವಿನ ಉಡುಗೆಯಲ್ಲಿ ನಡೆದುಕೊಂಡು ಬರುವುದನ್ನು ನೋಡಲಿಕ್ಕಾಗಿ ಕಾಯುತ್ತಿದ್ದೇನೆ. ಇನ್ನು ಕೆಲವು ಗಂಟೆಗಳಲ್ಲಿ ಆಸೆ ಪೂರೈಸಲಿದೆ'' ಎಂದಿದ್ದಾರೆ.

  ಇನ್ನು ನೆರೆ ಹೊರೆಯ ಚಿತ್ರಗಳಿಂದ ಹಲವು ನಟ-ನಟಿಯರು ನಯನತಾರಾ-ವಿಗ್ನೇಶ್ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಂತಾ, ಕಾಜಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ ಇನ್ನೂ ಹಲವರು ಈ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

  English summary
  Guest list of Nayanthara, Vignesh Shivan wedding cermony. Wedding is happening today on June 09 in Mahabalipuram.
  Thursday, June 9, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X