ರಾಘವ ಲಾರೆನ್ಸ್ ಸೋದರನ ಮೇಲೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಕೇಸ್
ಚಿತ್ರರಂಗದಲ್ಲಿ ಈ ನಡುವೆ ಲೈಂಗಿಕ ಆರೋಪಗಳು, ಮೀಟೂ ಕೇಸುಗಳು ಹೆಚ್ಚಾಗಿ ಕೇಳಿ ಬರುತ್ತವೆ. ಒಂದೆಡೆ ಕಾಸ್ಟಿಂಗ್ ಕೌಚ್ ಬಗ್ಗೆ ಹಿರಿಯ ನಟಿಯರು ದನಿಯೆತ್ತಿದ್ದಾರೆ. ಆದರೆ, ಸಿನಿಮಾರಂಗದ ಪ್ರಭಾವಿಗಳು ಜ್ಯೂನಿಯರ್ ಆರ್ಟಿಸ್ಟ್ ಗಳನ್ನು ಲೈಂಗಿಕವಾಗಿ ಬಳಸಿಕೊಂಡು, ಬೆದರಿಕೆ ಹಾಕುವ ಪ್ರಕರಣಗಳು ಕಡಿಮೆಯಾಗಿಲ್ಲ. ಇಂಥದ್ದೊಂದು ಆರೋಪ ಈಗ ದಕ್ಷಿಣ ಭಾರತ ಚಿತ್ರರಂಗ ಜನಪ್ರಿಯ ನೃತ್ಯ ಸಂಯೋಜಕ ಕಮ್ ನಟ ರಾಘವ ಲಾರೆನ್ಸ್ ಅವರ ಸೋದರನ ಮೇಲೆ ಬಂದಿದೆ.
Recommended Video
ನೃತ್ಯ ಸಂಯೋಜಕ, ನಟ, ನಿರ್ದೇಶಕ ಲಾರೆನ್ಸ್ ಅವರ ಕಿರಿಯ ಸಹೋದರನ ಮೇಲೆ ಲೈಂಗಿಕ ಆರೋಪ ಹೊರೆಸಿರುವುದು ಒಬ್ಬ ಜ್ಯೂನಿಯರ್ ಕಲಾವಿದೆ. ವಾರಂಗಲ್ ಮೂಲದ ಈ ಕಲಾವಿದೆ ತನಗಾದ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಲ್ಲದೆ, ನ್ಯಾಯಕ್ಕಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಆದರೆ, ನ್ಯಾಯ ಕೇಳಿಕೊಂಡು ಬಂದ ಸಂತ್ರಸ್ತೆಯನ್ನೇ ಜೈಲಿಗೆ ಕಳಿಸಿದ ಘಟನೆ ನಡೆದಿದೆ.
ಜೂನಿಯರ್ ಆರ್ಟಿಸ್ಟ್ ಹೆಸರು ದಿವ್ಯಾ ಎಂದು ತಿಳಿದು ಬಂದಿದೆ. ರಾಘವ ಲಾರೆನ್ಸ್ ಅವರ ಕಿರಿಯ ಸಹೋದರ ಎಲ್ವಿನ್ ಅಲಿಯಾಸ್ ವಿನೋದ್ (ವಿನ್ನಿ) ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಳು. ಟಾಲಿವುಡ್ ಸೈಡ್ ಡ್ಯಾನ್ಸರ್, ಜೂನಿಯರ್ ಆರ್ಟಿಸ್ಟ್ ದಿವ್ಯಾ (19) ತನಗಾದ ನೋವನ್ನು ತೋಡಿಕೊಂಡಿದ್ದೆ ತಪ್ಪಾಗಿ ಬಿಟ್ಟಿದೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದರೆ, ಆಕೆ ಮೇಲೆ ಕೇಸ್ ಹಾಕಲಾಗಿದೆ.

ವಾರಂಗಲ್ ಮೂಲದ ಕಿರಿಯ ಕಲಾವಿದ ದಿವ್ಯಾ
ವಾರಂಗಲ್ ಮೂಲದ ಕಿರಿಯ ಕಲಾವಿದ ದಿವ್ಯಾ ಮೊದಲಿಗೆ ಪಶ್ಚಿಮ ಪರೇದ್ ಪಲ್ಲಿ ಪೊಲೀಸರ ಬಳಿ ದೂರು ನೀಡಿ, ವಿನೋದ್ ಕೊಟ್ಟ ಕಿರುಕುಳವನ್ನು ವಿವರಿಸಿದ್ದಾಳೆ.
ಆದರೆ, ವೇಶ್ಯಾವಾಟಿಕೆ ಅಡ್ದಾದಲ್ಲಿ ಸಿಕ್ಕವರ ಪಟ್ಟಿಯಲ್ಲಿ ಆಕೆಯ ಹೆಸರನ್ನು ಸೇರಿಸಿ ಜೈಲಿಗೆ ಕಳುಹಿಸಲಾಗಿದೆ. 21 ದಿನಗಳ ಜೈಲುವಾಸ ಅನುಭವಿಸಿ ಹೊರ ಬಂದ ಬಳಿಕವೂ ಆಕೆಗೆ ಕಿರುಕುಳ, ಬೆದರಿಕೆ, ಹಿಂಸೆ, ನೋವು ಮುಂದುವರೆದಿದೆ.

ಪೊಲೀಸರ ಜೊತೆ ಎಲ್ವಿನ್ ಶಾಮೀಲು
ಎಸಿಪಿ ತನ್ನ ವಿರುದ್ಧ ಸುಳ್ಳು ಕೇಸ್ ಹಾಕಿ 21 ದಿನಗಳ ಕಾಲ ಅನ್ಯಾಯವಾಗಿ ಜೈಲಿಗೆ ಕಳುಹಿಸಿದ್ದಾನೆ. ಇದೆಲ್ಲವೂ ಎಲ್ವಿನ್ ನಿರ್ದೇಶನದಂತೆ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಎಲ್ವಿನ್ ಅಲ್ಲದೆ, ಪೊಲೀಸರಿಂದಲೂ ನಿರಂತರವಾಗಿ ಕಿರುಕುಳ ಅನುಭವಿಸಿದ್ದೇನೆ ಎಂದಿದ್ದಾಳೆ.

ಕೊಲೆ ಬೆದರಿಕೆ ಬಂದಿದೆ ಎಂದಿರುವ ದಿವ್ಯಾ
ವಿನೋದ್ ಮತ್ತು ಅವನ ಅನುಯಾಯಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರಾಂಪುರದ ಕಾಜಿಪೇಟ್ ಮೂಲದ ದಿವ್ಯಾ ಉತ್ತಮ ಡ್ಯಾನ್ಸರ್ ಹಾಗೂ ಕರಾಟೆ ಪಟುವಾಗಿದ್ದಾರೆ. ಸಿನಿಮಾ ಚಿತ್ರೀಕರಣವೊಂದರಲ್ಲಿ ಎಲ್ವಿನ್ ಭೇಟಿಯಾಗಿದ್ದಾಳೆ. ನೀನು ನನಗೆ ಇಷ್ಟ ಎನ್ನಲು ಶುರು ಮಾಡಿದ ಎಲ್ವಿನ್ ನಂತರ ನಿರಂತರವಾಗಿ ಕಾಡತೊಡಗಿದ್ದಾನೆ.

ನನಗೆ ರಕ್ಷಣೆ ಕೊಡಿ ಎಂದು ಸಿಎಂಗೆ ಮೊರೆ
ಲಾರೆನ್ಸ್ ಅವರ ಕಿರಿಯ ಸಹೋದರ ವಿನೋದ್ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನನಗೆ ರಕ್ಷಣೆ ನೀಡಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಮುಂದಾಗಬೇಕು. ಇಲ್ಲದಿದ್ದರೆ, ಎಲ್ವಿನ್ ಕಡೆಯವರು ನನ್ನನ್ನು ಕೊಂದು ಹಾಕುತ್ತಾರೆ ಎಂದು ದಿವ್ಯಾ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ


Click it and Unblock the Notifications











