ಮಗನನ್ನು ಕ್ರೈಸ್ತ ಧರ್ಮಕ್ಕೆ ದೀಕ್ಷೆ ಕೊಡಿಸಿದ 'ಹೆಬ್ಬುಲಿ' ನಟಿ ಅಮಲಾ ಪೌಲ್: ಏಕೆ ಗೊತ್ತೇ?

By ಫಿಲ್ಮಿಬೀಟ್ ಡೆಸ್ಕ್

ದಕ್ಷಿಣ ಭಾರತದ ಸಿನಿ ಪ್ರಿಯರಿಗೆ ಅಮಲಾ ಪೌಲ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಸಿನಿಮಾ ಕ್ರೇಜ್ ಇರುವವರ ಪ್ರತಿಯೊಬ್ಬರಿಗೂ ಅಮಲಾ ಪೌಲ್ ಯಾರೆಂದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಕನ್ನಡಿಗರಿಗೆ ಅಮಲಾ ಪೌಲ್ ಅಂದ ಕೂಡಲೇ ಕಿಚ್ಚ ಸುದೀಪ್ ನಟಿಸಿದ 'ಹೆಬ್ಬುಲಿ' ಸಿನಿಮಾವೇ ನೆನಪಿಗೆ ಬರುತ್ತೆ. ಈ ಸಿನಿಮಾದಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿ ಕನ್ನಡಿಗರ ಕಣ್ಣು ಅರಳುವಂತೆ ಅಮಲಾ ಪೌಲ್ ಮಾಡಿದ್ದರು.

ವಿವಾಹದ ಬಳಿಕ ಅಮಲಾ ಪೌಲ್ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಹೆಚ್ಚಾಗಿ ಫ್ಯಾಮಿಲಿಗೆ ಟೈಮ್ ಕೊಡುತ್ತಿದ್ದಾರೆ. ಆಗಾಗ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತಾರೆ. ಇತ್ತೀಚೆಗೆ ಅಮಲಾ ಪೌಲ್ 'ದಿ ಗೋಟ್ ಲೈಫ್' ಹಾಗೂ 'ಲೆವೆಲ್ ಕ್ರಾಸ್' ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ ಮತ್ತಾವುದೂ ಸಿನಿಮಾ ರಿಲೀಸ್ ಆಗಿಲ್ಲ. ಈ ಮಧ್ಯೆ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ.

Hebbuli film actress Amala Paul shares her son Ilai s baptism photos

ಬಹುಭಾಷಾ ನಟಿ ಅಮಲಾಪೌಲ್ ತನ್ನ ಇನ್‌ಸ್ಟಾಗ್ರಾಂ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಮಗನ ಬ್ಯಾಪ್ಟಿಸಮ್ ಕಾರ್ಯಕ್ರಮ ಫೋಟೋಗಳಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ ಅಮಲಾ ಪೌಲ್ ಮಗನನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದಾರೆಂದು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಅಮಲಾ ಪೌಲ್ ಈ ಮಗನನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ಬ್ಯಾಪಿಸ್ಟಮ್ ಕಾರ್ಯ ಮಾಡಿದ್ದು ಏಕೆ? ಮಗನನ್ನೇ ನಟಿ ಮತಾಂತರ ಮಾಡಿದರೇ? ಏನಿದು ಬ್ಯಾಪಿಸ್ಟಮ್? ತಿಳಿಯುವುದಕ್ಕೆ ಮುಂದಕ್ಕೆ ಓದಿ.

ಅಮಲಾ ಪೌಲ್ ಮೂಲತ: ಕೇರಳ ಮೂಲದವರು. ಇವರು ತಂದೆ ಪೌಲ್ ವರ್ಗೀಸ್ ಹಾಗೂ ತಾಯಿ ಅನಿ ಪೌಲ್. ಇವರದ್ದು ಮೂಲತ: ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ. ಅಮಲಾ ಪೌಲ್ ಸಿನಿಮಾ ಎಂಟ್ರಿ ಕೊಟ್ಟು, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಧರ್ಮದ ಹುಡುಗಿಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಹೀಗಾಗಿ ಸಿನಿ ಪ್ರಿಯರು ಇವರ ಧರ್ಮದ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ. ಅವರ ನಟನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದಾರೆ. ಆದ್ರೀಗ ಮಗ ಇಳೈಗೆ ಕ್ರಿಶ್ವಿಯನ್ ಸಂಪ್ರದಾಯದಂತೆ ಬ್ಯಾಪ್ಟಿಸಮ್‌ಗೆ ಒಳಗಾಗಿಸಿದ್ದು, ಚರ್ಚೆಯಾಗುತ್ತಿದೆ.

ಅಮಲಾ ಪೌಲ್ 2024ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ವಿವಾಹವಾಗಿದ್ದರು. ಆದರೆ, ಆ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಕೇವಲ ಮೂರು ವರ್ಷಗಳಲ್ಲಿಯೇ ಮುರಿದು ಬಿದ್ದಿತ್ತು. 2023ರಲ್ಲಿ ಅಮಲಾ ಪೌಲ್ ಎರಡನೇ ಮದುವೆಯಾದರು. ಉದ್ಯಮಿ ಜಗತ್ ದೇಸಾಯಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ಜೂನ್ 11, 2024ರಂದು ಇಳ್ಳೈ ಎಂಬ ಗಂಡು ಮಗು ಜನಿಸಿದ್ದಾನೆ. ಇಳೈಗೆ ಪವಿತ್ರ ದೀಕ್ಷಾ ಸ್ನಾನವನ್ನು ಮಾಡಿದ್ದಾರೆ.

ಅಮಲಾ ಪೌಲ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರಿಂದ ಮಗನಿಗೆ ಸಂಪ್ರದಾಯದಂತೆ ಬ್ಯಾಪ್ಟಿಸಮ್ ಮಾಡಿಸುವುದಕ್ಕೆ ಮುಂದಾಗಿದ್ದಾರೆ. ಈ ಫೋಟೋಗಳನ್ನೇ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಬ್ಯಾಪ್ಟಿಸಮ್ ಯಾಕೆ ಮಾಡುತ್ತಾರೆ? ಇದರ ಹಿನ್ನೆಲೆಯನ್ನು ನೋಡುವುದಾರೆ, ಕ್ರೈಸ್ತ ಧರ್ಮದಲ್ಲಿ ಈ ಆಚರಣೆ ಕಾಮನ್ ಆಗಿದ್ದು, ಒಂದರ್ಥದಲ್ಲಿ ಕ್ರೈಸ್ತ ಧರ್ಮಕ್ಕೆ ದೀಕ್ಷೆ ಕೊಡಿಸುವುದು. ಮಗುವಿನ ತಲೆಯ ಮೇಲೆ ಮೂರು ಬಾರಿ ನೀರನ್ನು ಚಿಮುಕಿಸಿ ಕ್ರೈಸ್ತ್ರ ಧರ್ಮಕ್ಕೆ ದೀಕ್ಷೆಯನ್ನು ಕೊಡಲಾಗುತ್ತೆ.

ಇದನ್ನೇ ಅಮಲಾ ಪೌಲ್ ಕೂಡ ತಮ್ಮ ಪುತ್ರ ಇಳೈಗೂ ಮಾಡಿಸಿದ್ದಾರೆ. ಇನ್ನು ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ಮದುವೆ ಕೇರಳದಲ್ಲಿ ಕ್ರಿಶ್ವಿಯನ್ ಸಂಪ್ರದಾಯದಂತೆ ನೆರವೇರಿತ್ತು. ಜಗತ್ ದೇಸಾಯಿ ಗುಜರಾತ್ ಮೂಲದವರು ಎಂದು ಹೇಳಲಾಗಿದ್ದರೂ, ಗೋವಾದ ಐಷಾರಾಮಿ ವಿಲ್ಲಾದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆಂದು ವರದಿಯಾಗಿತ್ತು. ಈಗ ಮಗ ಇಳೈ ಬ್ಯಾಪ್ಟಿಸಮ್ ಕಾರ್ಯಕ್ರಮವನ್ನು ಸಂಭ್ರಮಿಸಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಕೊಂಚ ಶಾಕ್ ಆಗಿದ್ದಾರೆ.

More from Filmibeat

English summary
Tamil Actress Amala Paul shared son Ilai baptism photos. Amala Paul shared photos from the ceremony on her Instagram. The photos depict Ilai's baptism surrounded by love and peace, as noted in the caption.
Read more about: actress amala paul tamil industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X