ಪದ್ಮಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಅಜಿತ್ ಸುತ್ತ ಬೆಳೆದ 'ಕಾಮ'ದ ಹುತ್ತ ; ತಲಾ ಮೇಲೆ ಬಾಂಬ್ ಎಸೆದ ಮಾಜಿ ಪ್ರೇಯಸಿ..!

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.

ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ನೀಡದೇ ಇದ್ದರೂ ಸಂಬಂಧ ಮುರಿದು ಬಿದ್ದು 27 ವರ್ಷವಾದರೂ ಕೂಡ ಹೀರಾ ರಾಜ್ ಗೋಪಾಲ್ ಬ್ರೇಕಪ್‌ನ ನೋವಿನಿಂದ ಹೊರ ಬಂದಿಲ್ಲ. ಕಾಲಿವುಡ್‌ನ ಸೂಪರ್ ಸ್ಟಾರ್ ಅಜಿತ್‌ನ ಮರೆತಿಲ್ಲ. 25 ವರ್ಷವಾದರೂ ಕೂಡ ಅಜಿತ್ ವಿರುದ್ಧ ಹಗೆತನವನ್ನು ಹೀರಾ ಸಾಧಿಸುತ್ತಲೇ ಇದ್ದಾರೆ.

Heera Rajagopal Drops Bombshell Ajith Wanted a Maid-Like Wife to Excuse His Affairs

ಹೌದು, ಅಸಲಿಗೆ ಹೀರಾ ರಾಜ್ ಗೋಪಾಲ್ ಮತ್ತು ಅಜಿತ್ ಒಂದ್ಕಾಲದಲ್ಲಿ ಪ್ರಣಯ ಗೀತೆಯನ್ನು ಹಾಡುತ್ತಿದ್ದರು. 90ರ ದಶಕದಲ್ಲಿ ಇಬ್ಬರ ಪ್ರೇಮಕಥೆ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ 1997ರ ಆಸು ಪಾಸು ಈ ಸಂಬಂಧ ಮುರಿದು ಬಿತ್ತು.

ಈಗ ಸಂದರ್ಶನಗಳನ್ನೇ ನೀಡದ ಅಜಿತ್ ಆ ಕಾಲದಲ್ಲಿ ಸಂದರ್ಶನ ನೀಡುತ್ತಿದ್ದರು. ತಮ್ಮ ಬ್ರೇಕಪ್ ಕುರಿತು ಕೂಡ ಮಾತನಾಡಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಅಜಿತ್ ನನಗೆ ಹೀರಾ ತುಂಬಾನೇ ಇಷ್ಟ. ಇಬ್ಬರು ಜೊತೆಯಲ್ಲಿ ವಾಸ ಕೂಡ ಮಾಡಿದ್ದೇವೆ ಎಂದು ಹೇಳಿದ್ದರು. ಆದರೆ ಈಗ ಮೊದಲಿನಂತೆ ನಮ್ಮ ಸಂಬಂಧ ಇಲ್ಲ. ಆಕೆ ಮಾದಕ ವ್ಯಸನಕ್ಕೆ ದಾಸಿಯಾಗಿದ್ದಾಳೆ ಎಂದು ಹೇಳಿದ್ದರು.

ಹೀಗೆ ಸಂದರ್ಶನದಲ್ಲಿ ಮಾತನಾಡಿದ ಅಜಿತ್ ಆ ನಂತರ ಶಾಲಿನಿ ಅವರನ್ನು ಭೇಟಿಯಾದರು. ಅಮರಕಲಂ ಚಿತ್ರದ ಸಮಯದಲ್ಲಿ ಅರಳಿದ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. 2000ನೇ ಇಸ್ವಿಯಲ್ಲಿ ಅಜಿತ್ ಮತ್ತು ಶಾಲಿನಿ ಮದುವೆಯೂ ಆದರು. ಹೀರಾ ರಾಜ್ ಗೋಪಾಲ್ ಅವರನ್ನು ಸಂಪೂರ್ಣವಾಗಿ ಅಜಿತ್ ಮರೆತರು.

ಆದರೆ, ಹೀರಾ ರಾಜ್ ಗೋಪಾಲ್ ಮಾತ್ರ ಅಜಿತ್ ಕುಮಾರ್ ಅವರನ್ನು ಮರೆಯಲೇ ಇಲ್ಲ. ಬದಲಿಗೆ ಕಾಲ ಕಾಲಕ್ಕೆ ಅಜಿತ್ ವಿರುದ್ಧ ಕೆಂಡ ಕಾರುತ್ತಲೇ ಬಂದರು. ಇಂಥಾ ಹೀರಾ ರಾಜ್ ಗೋಪಾಲ್ ಈ ವರ್ಷದ ಆರಂಭದಲ್ಲಿ ತಮ್ಮ ವೆಬ್‌ಸೈಟ್‌ನಲ್ಲಿ ಅಜಿತ್ ಕುಮಾರ್ ತಮ್ಮನ್ನು ಹೇಗೆ ಬಳಿಸಿಕೊಂಡು ಮೋಸ ಮಾಡಿದರು ಎಂದು ಹೇಳಿದ್ದರು. ಅಜಿತ್ ಕುಮಾರ್ ಹೆಸರನ್ನು ಎಲ್ಲಿಯೂ ನಮೂದಿಸದೇ ಸುದೀರ್ಘವಾದ ಲೇಖನ ಬರೆದಿದ್ದರು.

ಅಂದು ಬರೆದ ಈ ಲೇಖನ ಮೊನ್ನೆಯ ದಿನ ಅಜಿತ್ ಪದ್ಮ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ, ಅನೇಕರಿಗೆ ನೆನಪಾಗಿದೆ. ಹೀಗಾಗಿಯೇ ಹೀರಾ ರಾಜ್ ಗೋಪಾಲ್ ಅವರ (https://heeraalaya.com) ವೆಬ್ ಸೈಟ್‌ನ ಒಳ ಹೊಕ್ಕುವ ಪ್ರಯತ್ನವನ್ನು ಅನೇಕರು ಮಾಡಿದ್ದಾರೆ. ವೆಬ್ ಸೈಟ್‌ಗೆ ಬಂದ ಜನಸಂದಣಿ ಎಷ್ಟಿತ್ತು ಅಂದರೆ ಸದ್ಯ ಹೀರಾ ರಾಜ್ ಗೋಪಾಲ್ ಅವರ ವೆಬ್ ಸೈಟ್ ಕ್ರ್ಯಾಶ್ ಆಗಿದೆ.

ಅಜಿತ್ ಕುಮಾರ್ ಬಗ್ಗೆ ಹೀರಾ ರಾಜ್‌ಗೋಪಾಲ್ ಬರೆದುಕೊಂಡಿದ್ದೇನು ?

ನನ್ನ ಹದಿಹರೆಯದ ವಯಸ್ಸಿನಲ್ಲಿ ಒಬ್ಬ ನಟ ನನಗೆ ದ್ರೋಹ ಬಗೆದಿದ್ದು ಅಲ್ಲದೇ, ತನ್ನ ಅಭಿಮಾನಿಗಳ ಜೊತೆ ಸೇರಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳೆದ, ಮಾದಕ ವಸ್ಯನಿ ಎಂಬ ಹಣೆ ಪಟ್ಟಿಯನ್ನು ಕಟ್ಟಿದ, ನನ್ನ ಬಗ್ಗೆ ಅಪಪ್ರಚಾರ ಮಾಡಿದ.

ಸೇವಕಿಯಂತೆ ಕಾಣುವ ಹೆಣ್ಣನ್ನು ಮದುವೆಯಾದರೆ..!

ನನ್ನ ಬಗ್ಗೆ ವ್ಯವಸ್ಥಿತವಾಗಿ ಹಬ್ಬಿಸಲಾದ ಈ ಸುದ್ದಿಗಳನ್ನು ಕೇಳಿ ನಾನು ದಿಗ್ಬ್ರಮೆಗೊಂಡಿದ್ದೆ, ಹೀಗಾಗಿ ನಾನು ಒಮ್ಮೆ ಆ ನಟನನ್ನು ಭೇಟಿ ಮಾಡಲು ಹೋಗಿದ್ದೆ, ಆದರೆ ಆ ವ್ಯಕ್ತಿ ಹೆಚ್ಚು ಮಾತನಾಡಲಿಲ್ಲ. ನನ್ನ ಬಗ್ಗೆ ನಿರ್ಲಕ್ಷ್ಯದ ಭಾವನೆ ಹೊಂದಿದ್ದ, ಇಷ್ಟೇ ಅಲ್ಲ ನಾನು ಸೇವಕಿಯಂತೆ ಕಾಣುವ ಮಹಿಳೆಯನ್ನು ಮದುವೆಯಾಗುವುದಾಗಿ ನನ್ನೆದುರು ಆತ ಹೇಳಿದ್ದ, ಸೇವಕಿಯಂತೆ ಇರುವ ಹೆಣ್ಣನ್ನು ಮದುವೆಯಾದರೆ ಆಕೆಯನ್ನು ಯಾರು ನೋಡುವುದಿಲ್ಲ, ಆದರೆ ನಾನು ಮಾತ್ರ ನನಗೆ ಇಷ್ಟವಾದ ಮಹಿಳೆಯರ ಜೊತೆ ಲೈಂಗಿಕ ಸಂಬಂಧ ಹೊಂದಬಹುದು ಎಂದು ಕೂಡ ಹೇಳಿದ್ದ ಎಂದು ಹೀರಾ ರಾಜ್ ಗೋಪಾಲ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

ಶಸ್ತ್ರ ಚಿಕಿತ್ಸೆ ಎಂದು ಸುಳ್ಳು ಹೇಳಿದ..!

ಮುಂದುವರೆದು ಅದೊಂದು ದಿನ ನನಗೆ ಬೆನ್ನು ಮೂಳೆಗೆ ಗಾಯವಾಗಿದೆ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಹೇಳಿದ. ಆ ಸಮಯದಲ್ಲಿ ನಾನು ಅವನ ಜೊತೆ ಆಸ್ಪತ್ರೆಯಲ್ಲಿ ಉಳಿದುಕೊಂಡೆ, ಮಗುವಿನಂತೆ ಅವನ ಆರೈಕೆ ಮಾಡಿದೆ, ಅವನಿಗೆ ಬೆಂಬಲ ನೀಡಿದೆ, ಧೈರ್ಯ ತುಂಬಿದೆ, ಹುರಿದುಂಬಿಸಿದೆ, ಇಷ್ಟೆಲ್ಲ ಮಾಡಿದ ನನಗೆ ಕೊನೆಯಲ್ಲಿ ಸಿಕ್ಕಿದ್ದೇನು ? ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಆತ ಬದಲಾಗಿ ಹೋದ ಎಂದು ಹೇಳಿದ್ದರು.

ಇನ್ನು ಶಸ್ತ್ರಚಿಕಿತ್ಸೆ ವಿಚಾರ ಸತ್ಯವಾಗಿರಲಿಲ್ಲ. ಬದಲಿಗೆ ಅದು ಸುಳ್ಳಾಗಿತ್ತು. ಚಿತ್ರರಂಗದಲ್ಲಿ ಎಲ್ಲರ ಸಹಾನುಭೂತಿ ಪಡೆಯಲು, ಎದುರಾಳಿ ಸ್ಟಾರ್‌ಗಳ ವಿರುದ್ಧ ಮೇಲುಗೈ ಸಾಧಿಸಲು ಆತ ಸುಳ್ಳು ಹೇಳಿದ್ದ ಎನ್ನುವ ವಿಚಾರ ನನಗೆ ಆ ನಂತರ ಗೊತ್ತಾಯಿತು. ತುಂಬಾನೇ ಬೇಸರವೂ ಆಗಿತ್ತು ಎಂದು ಹೀರಾ ರಾಜ್ ಗೋಪಾಲ್ ಈ ಜನವರಿಯಲ್ಲಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

ಆತ್ಮಹತ್ಯೆಯ ಆಲೋಚನೆ..!

ನನ್ನ ವಿರುದ್ಧ ಅಪಪ್ರಚಾರ ಮಾಡಿ ನನ್ನ ಘನತೆಯನ್ನೆಲ್ಲ ಮಣ್ಣು ಪಾಲು ಮಾಡಿದ ಆ ವ್ಯಕ್ತಿಯನ್ನು ಕ್ಷಮಿಸುವುದಾದರು ಹೇಗೆ.? ನಿರಂತರವಾಗಿ ನನ್ನ ವಿರುದ್ಧ ಹೇಳಲಾದ ಸುಳ್ಳುಗಳನ್ನೆಲ್ಲ ಕೇಳಿ ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೆ ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಒಂದು ಸಮಯದಲ್ಲಿ ನಾನು ಮುಂದಾಗಿದ್ದೆ ಎಂದು ಕೂಡ ಹೀರಾ ರಾಜ್‌ಗೋಪಾಲ್ ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದರು.

ಅಜಿತ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರಾ ವಿಜಯ್..?

ಹೀಗೆ ಈ ಜನವರಿಯಲ್ಲಿ ಅಜಿತ್ ಹೆಸರನ್ನೇಳದೇ ಹೀರಾ ರಾಜ್ ಗೋಪಾಲ್ ತಮ್ಮ ವೆಬ್ ಸೈಟ್‌ನಲ್ಲಿ ಲೇಖನ ಬರೆದುಕೊಂಡಿದ್ದರು. ಈ ಲೇಖನವನ್ನು ಈಗ ಅನೇಕರು ಓದಲು ಮುಂದಾಗಿದ್ದಾರೆ. ಇನ್ನು ಇದೇ ಸಮಯದಲ್ಲಿ ಅಜಿತ್ ವಿರುದ್ಧ ವ್ಯವಸ್ಥಿತ ಸಂಚು, ಪಿತೂರಿ ನಡೆಯುತ್ತಿದೆ ಎನ್ನುವ ಅನುಮಾನ ಕೂಡ ಹಲವರಲ್ಲಿ ಬಂದಿದೆ. ಹೀರಾ ರಾಜ್ ಗೋಪಾಲ್ ಅವರನ್ನು ಬಳಿಸಿಕೊಂಡು ಅಜಿತ್ ಅವರ ಎದುರಾಳಿಯೆಂದೇ ಪರಿಗಣಿಸಲ್ಪಟ್ಟಿರುವ ವಿಜಯ್ ತಮ್ಮ ರಾಜಕೀಯದ ಬೆಳೆ ಬೇಯಿಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಕೂಡ ಈಗ ಎದ್ದಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಅಭಿಮಾನಿಗಳು ಮಾಡುತ್ತಿದ್ದು ಮತ್ತೊಮ್ಮೆ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ವಾಕ್ಸಮರ ತಾರಕಕ್ಕೇರುವ ಎಲ್ಲ ಲಕ್ಷಣ ಸದ್ಯಕ್ಕೆ ಕಂಡು ಬರುತ್ತಿದೆ.

ಹೀರಾ ರಾಜ್‌ಗೋಪಾಲ್ ಜೊತೆ ಅಜಿತ್ ಸಂಬಂಧ ಮುರಿದು ಬೀಳಲು ಬೇರೆ ಕಾರಣವೇನು..?

ಅಂದ್ಹಾಗೇ 27 ವರ್ಷಗಳ ಹಿಂದೆ 'ಕಾದಲ್ ಕೋಟೈ' ಚಿತ್ರದ ಚಿತ್ರೀಕರಣದಲ್ಲಿ ಭೇಟಿಯಾಗಿ ಆ ನಂತರ ಪರಸ್ಪರ ಪ್ರೀತಿಸಲು ಶುರು ಮಾಡಿದ್ದ ಅಜಿತ್ ಮತ್ತು ಹೀರಾ ರಾಜ್‌ಗೋಪಾಲ್, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಹೀರಾ ರಾಜ್ ಗೋಪಾಲ್ ಅವರ ತಾಯಿ ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಮಾತು ಚೆನ್ನೈನಲ್ಲಿ ಕೇಳಿ ಬರುತ್ತೆ. ಆ ನಂತರ ಹೀರಾ ಅವರ ವರ್ತನೆಯಲ್ಲಿ ಕೂಡ ಬದಲಾವಣೆ ಕಂಡು ಬಂದ ಹಿನ್ನೆಲೆ ಅಜಿತ್ ಹಿಂದೆ ಸರಿದರು, ಸಂಬಂಧ ಮುರಿದುಕೊಂಡರು ಎಂಬ ಮಾತನ್ನು ಅಂದು ಅನೇಕರು ಹೇಳಿದ್ದರು. ಈಗಲೂ ಕೂಡ ಈ ಮಾತುಗಳನ್ನೇ ಹೇಳುತ್ತಿದ್ದಾರೆ.

ಮೌನ ಮುರಿಯುತ್ತಾರಾ ಅಜಿತ್..?

ಹೀರಾ ರಾಜ್ ಗೋಪಾಲ್ ಸದ್ಯ ಅಜಿತ್ ಬಗ್ಗೆ ಬರೆದಿರುವ ಲೇಖನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಜಿತ್ ಅಭಿಮಾನಿ ಬಳಗದಲ್ಲಿ ಹೀರಾ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಇನ್ನು ಅಜಿತ್ ಪ್ರತಿ ಬಾರಿ ಜಗತ್ತಿಗೆ ಏನಾದರು ಹೇಳಬೇಕು ಅಂದರೆ ತಮ್ಮ ಮ್ಯಾನೇಜರ್ ಸುರೇಶ್ ಚಂದ್ರ ಅವರ ಮೂಲಕ ಪತ್ರವನ್ನು ರವಾನೆ ಮಾಡುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಕೂಡ ಅಜಿತ್ ಪತ್ರ ಬರೆಯುವ ನಿರೀಕ್ಷೆ ಇದೆ. ಸುರೇಶ್ ಚಂದ್ರ ಅವರ ಎಕ್ಸ್ ಖಾತೆಯ ಮೇಲೀಗ ಎಲ್ಲರ ಕಣ್ಣಿದೆ.

More from Filmibeat

English summary
In a bombshell revelation that has sent shockwaves through the Tamil film community, actress Heera Rajagopal has made an explosive accusation against renowned actor Ajith Kumar. Heera claims that Ajith allegedly sought to marry a woman who appeared "maid-like," not for love or partnership, but to create an excuse to engage in extramarital affairs without facing any judgment or consequences. The controversial statement, published in a blog post on her personal website, rapidly went viral, causing the site to crash under the weight of skyrocketing traffic.
Read more about: ajith kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X