ಸೂಪರ್‌ ಸ್ಟಾರ್‌ ರಜನಿಕಾಂತ್ ಬಗ್ಗೆ ನಿಮಗೆಷ್ಟು ಗೊತ್ತು: ಸಂದರ್ಶನದಲ್ಲೇ ಚಿಗುರಿತು ಪ್ರೀತಿ!

ಭಾರತೀಯ ಸಿನಿಮಾ ರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಇಂದು (ಡಿಸೆಂಬರ್ 12) 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ರಂಗದ ಗಣ್ಯರಿಂದ, ಅಭಿಮಾನಿಗಳಿಂದ ತಲೈವಾ ರಜನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ರಜನಿಕಾಂತ್ ಅಣ್ಣಾತೆ ಸಿನಿಮಾ ರಿಲೀಸ್‌ ಆಗಿದೆ. ಅಣ್ಣಾತೆ ಮೂಲಕ ದಾಖಲೆ ಮಾಡಿರುವ ರಜನಿಕಾಂತ್ ಮುಂದಿನ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಪಾಂಡಿ ರಾಜ್ ಜೊತೆಯಲ್ಲಿ ರಜನಿಕಾಂತ್ ಮುಂದಿನ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ.

ಇನ್ನು ರಜನಿಕಾಂತ್ ಬಗ್ಗೆ ಎಷ್ಟು ಹೇಳಿದರು ಸಾಲದು. ಅವರ ಜೀವನದ ಬಗ್ಗೆ, ಸಿನಿಮಾ ಜರ್ನಿಯ ಬಗ್ಗೆ ಒಮದಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ರಜನಿಕಾಂತ್ ಲವ್‌ ಸ್ಟೋರಿ ಕಥೆಯೇ ಬಲು ರೋಚಕ!

ರಜನಿಕಾಂತ್ ಲವ್‌ ಸ್ಟೋರಿ ಕಥೆಯೇ ಬಲು ರೋಚಕ!

ನಟ ರಜನಿಕಾಂತ್‌ ಅವರದ್ದು ಲವ್‌ ಮ್ಯಾರೇಜ್. ರಜನಿ ತಮ್ಮ ಪತ್ನಿ ಲತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಲತಾ ರಜನಿಕಾಂತ್‌ ಅವರು ರಜನಿಕಾಂತ್‌ ಅವರಿಗಿಂತಲೂ ವಯಸ್ಸಿನಲ್ಲಿ 8 ವರ್ಷ ಚಿಕ್ಕವರು. ಲತಾ ಅವರು ರಜನಿಕಾಂತ್ ಅವರ ಸಂದರ್ಶನ ಮಾಡುವ ಸಮಯದಲ್ಲಿ ಪರಸ್ಪರ ಭೇಟಿ ಆಗಿದ್ದರು. ಲತಾ ಅವರು ತಮ್ಮ ಕಾಲೇಜಿನ ಮಾಸ ಪತ್ರಿಕೆಗಾಗಿ ಸಂದರ್ಶನ ಮಾಡುವ ಸಲುವಾಗಿ ಲತಾ ಅವರು ರಜನಿಕಾಂತ್ ಅವರನ್ನು ಭೇಟಿ ಆಗಿದ್ದರು. 1981ರಲ್ಲಿ ರಜನಿಕಾಂತ್ ಲತಾ ಅವರನ್ನು ವರಿಸಿದರು.

ಜಾಕಿ ಚಾನ್ ಬಳಿಕ ಹೆಚ್ಚು ಸಂಭಾವನೆ ಪಡೆದ ನಟ ರಜನಿಕಾಂತ್!

ಜಾಕಿ ಚಾನ್ ಬಳಿಕ ಹೆಚ್ಚು ಸಂಭಾವನೆ ಪಡೆದ ನಟ ರಜನಿಕಾಂತ್!

ನಟ ರಜನಿಕಾಂತ್ ಸೂಪರ್‌ ಸ್ಟಾರ್‌ ಆಗಿ ಅವರು ಮಾಡಿದ ದಾಖಲೆಗಳಿಗೆ ಲೆಕ್ಕವಿಲ್ಲ. ಆದರೆ ಅದರಲ್ಲಿ ಅವರ ಸಂಭಾವನೆಯೂ ಒಂದು ವಿಶಿಷ್ಟ ದಾಖಲೆ ಅಗಿ ಉಳಿದಿದೆ. ಏಷ್ಯದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟರಲ್ಲಿ ರಜನಿಕಾಂತ್ ಎರಡನೆಯವರು. ಜಾಕಿ ಚಾನ್ ಬಳಿಕ ಹೆಚ್ಚು ಪಡೆದ ನಟ ಎನ್ನುವ ಹೆಗ್ಗಳಿಕೆ ಇವರಿಗಿದೆ. 2007ರಲ್ಲಿ ಬಂದ 'ಶಿವಾಜಿ' ಚಿತ್ರಕ್ಕಾಗಿ 26 ಕೋಟಿ ಸಂಭಾವನೆ ಪಡೆದಿದ್ದರು.

ರಜನಿ ಮೊದಲು ಮಾತಾಡಿದ್ದು ಕನ್ನಡ ಮತ್ತು ಮರಾಠಿ!

ರಜನಿ ಮೊದಲು ಮಾತಾಡಿದ್ದು ಕನ್ನಡ ಮತ್ತು ಮರಾಠಿ!

ತಮಿಳ ಸಿನಿಮಾರಂಗದಲ್ಲಿ ದೈತ್ಯ ಪ್ರತಿಭೆ ಆಗಿ ಬೆಳೆದ ರಜನಿಕಾಂತ್, ನೋಡ ನೋಡುತ್ತಲೇ ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ರಜನಿಕಾಂತ್ ಕನ್ನಡದ ಹಲವು ಚಿತ್ರಗಳಲ್ಲು ಅಭಿನಯಿಸಿದ್ದಾರೆ. ಇನ್ನು ರಜನಿಕಾಂತ್ ತಮಿಳು ಚಿತ್ರರಂಗದಲ್ಲಿ ಸೂಪರ್‌ ಸ್ಟಾರ್‌ ಅಗಿ ಬೆಳೆದರೂ ಕೂಡ ಅವರ ಮಾತೃಭಾಷೆ ಮರಾಠಿ. ಮರಾಠಿಯ ಜೊತೆಗೆ ಅವರು ಮನೆಯಲ್ಲಿ ಕನ್ನಡವನ್ನು ಮಾತನಾಡುತ್ತಿದ್ದರು. ಸಿನಿಮಾ ನಂಟು ಹೆಚ್ಚಾದ ಬಳಿಕ ಅಷ್ಟೇ ಅವರು ತಮಿಳು ಕಲಿತದ್ದು.

ಅಮಿತಾಬ್‌ ಬಚ್ಚನ್‌ ಅವರ 11 ಚಿತ್ರಗಳನ್ನು ರಿಮೇಕ್ ಮಾಡಿರುವ ರಜಿನಿ!

ಅಮಿತಾಬ್‌ ಬಚ್ಚನ್‌ ಅವರ 11 ಚಿತ್ರಗಳನ್ನು ರಿಮೇಕ್ ಮಾಡಿರುವ ರಜಿನಿ!

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್ ಬಾಲಿವುಡ್‌ ಬಿಗ್ ಬಿ ಅಮಿತಾಬ್‌ ಬಚ್ಚನ್‌ ಅವರ ಸಿನಿಮಾಗಳನ್ನು ರಿಮೇಕ್‌ ಮಾಡಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಅಮಿತಾಬ್‌ ಬಚ್ಚನ್ ಅವರ 11 ಚಿತ್ರಗಳನ್ನು ರಜನಿಕಾಂತ್ ತಮಿಳಿಗೆ ರಿಮೇಕ್ ಮಾಡಿದ್ದಾರೆ. ದಿವಾರ್, ಅಮರ್ ಅಕ್ಬರ್ ಆಂಥೋನಿ ಸೇರಿದಂತೆ 11 ಚಿತ್ರಗಳನ್ನು ರಿಮೇಕ್ ಮಾಡಿದ್ದಾರೆ.

ಮಹಿಳಾ ವಿರೋಧಿ ಪಾತ್ರದಲ್ಲಿ ರಜನಿಕಾಂತ್!

ಮಹಿಳಾ ವಿರೋಧಿ ಪಾತ್ರದಲ್ಲಿ ರಜನಿಕಾಂತ್!

ನಟ ರಜನಿಕಾಂತ್ ಇಂದು ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ನಟ. ಅದರೆ ನಾಯಕ ನಟನಾಗಿ ಅಭಿನಯಿಸುವ ಮೊದಲು ರಜನಿಕಾಂತ್ ಖಳನಾಯಕನಾಗಿ ಹಲವು ಪಾತ್ರಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಅವರನ್ನು ನೆಗೆಟಿವ್ ಶೇಟ್ ಪಾತ್ರಗಳು ಹುಡುಕಿ ಬರುತ್ತಿದ್ದವು. ಮಹಿಳಾ ವಿರೋಧಿ ಪಾತ್ರಗಳಲ್ಲಿ ರಜನಿ ಕಾಣಿಸಿಕೊಳ್ಳುತ್ತಾ ಇದ್ದರು. ರಜನಿಕಾಂತ್ ರೇಪ್‌ ದೃಶ್ಯಗಳಲ್ಲೂ ಅಭಿನಯಿಸಿದ್ದಾರೆ.

ರಜನಿಕಾಂತ್‌ಗಿದೆ ಅತಿ ದೊಡ್ಡ ಅಭಿಮಾನಿ ಬಳಗ!

ರಜನಿಕಾಂತ್‌ಗಿದೆ ಅತಿ ದೊಡ್ಡ ಅಭಿಮಾನಿ ಬಳಗ!

ಇನ್ನು ರಜನಿಕಾಂತ್‌ಗೆ ಪ್ರತಿ ನಗರ, ಊರುಗಳಲ್ಲಿ ಅಭಿಮಾನಿಗಳಿದ್ದಾರೆ. ರಜನಿಕಾಂತ್‌ರನ್ನು ದೇವರಂತೆ ಪೂಜಿಸುವ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರ ಸಿನಿಮಾ ಬರ್ತಿದೆ ಅಂದರೆ ಎಲ್ಲರಿಗು ಅದೊಂದು ದೊಡ್ಡ ಹಬ್ಬ. ಒಂದು ಅಂದಾಜಿನ ಪ್ರಕಾರ ರಜನಿಕಾಂತ್‌ಗೆ ವಿಶ್ವಾದ್ಯಂತ 5ಕೋಟಿಗೂ ಅಧಿಕ ಅಭಿಮಾನಿಗಳು ಇದ್ದಾರೆ.

ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ ರಜನಿಕಾಂತ್ ಜೀವನ ಮತ್ತು ಸಿನಿಮಾ ಜರ್ನಿ.

More from Filmibeat

English summary
Here Is The Interesting Facts About Superstar Rajinikanth, Know More About Rajinikanth,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X