For Quick Alerts
  ALLOW NOTIFICATIONS  
  For Daily Alerts

  ಇಂಡಿಯನ್ 2: ನ್ಯಾಯಾಲಯದಲ್ಲಿ ನಿರ್ದೇಶಕ ಶಂಕರ್‌ಗೆ ಮೇಲುಗೈ

  |

  ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ನಿರ್ಮಾಣ ಸಂಸ್ಥೆ ಲೈಕಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರಿಗೆ ಹಿನ್ನಡೆಯಾಗಿದ್ದು, ಶಂಕರ್ ನಿರಾಳರಾಗಿದ್ದಾರೆ.

  ಲೈಕಾ ಪ್ರೊಡಕ್ಷನ್‌ಗಾಗಿ ಕಮಲ್‌ಹಾಸನ್ ನಟನೆಯ 'ಇಂಡಿಯನ್ 2' ಸಿನಿಮಾ ನಿರ್ದೇಶಿಸುತ್ತಿದ್ದ ಶಂಕರ್ ತಮ್ಮ ಮುಂದಿನ ಸಿನಿಮಾದ ಘೋಷಣೆ ಸಹ ಮಾಡಿ ಅದರ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದು ಲೈಕಾ ಪ್ರೊಡಕ್ಷನ್ ಅನ್ನು ಕೆರಳಿಸಿತ್ತು.

  ಶಂಕರ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಲೈಕಾ ಪ್ರೊಡಕ್ಷನ್, ''ಇಂಡಿಯನ್ 2' ಸಿನಿಮಾ ಪೂರ್ಣವಾಗುವವರೆಗೆ ಶಂಕರ್ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡದೇ ಇರುವಂತೆ ತಡೆಯಾಜ್ಞೆ ನೀಡುವಂತೆ ಕೇಳಿತ್ತು, ಜೊತೆಗೆ ಸಿನಿಮಾ ಸ್ಥಗಿತದಿಂದ ಆಗಿರುವ ನಷ್ಟ ತುಂಬಿಕೊಡಲು ಆದೇಶಿಸುವಂತೆ ಸಹ ಮನವಿ ಮಾಡಿತ್ತು. ಆದರೆ ಲೈಕಾ ಪ್ರೊಡಕ್ಷನ್‌ನ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ.

  ಕೊರೊನಾ, ತಮಿಳುನಾಡು ಚುನಾವಣೆ ಹಾಗೂ ಇತರ ಕಾರಣಗಳಿಂದಾಗಿ ಶಂಕರ್ ನಿರ್ದೇಶಿಸುತ್ತಿದ್ದ 'ಇಂಡಿಯನ್ 2' ಸ್ಥಗಿತಗೊಂಡಿತ್ತು. ಅದರ ನಡುವೆಯೇ ಶಂಕರ್, ತೆಲುಗಿನ ರಾಮ್ ಚರಣ್ ತೇಜ ಜೊತೆಗೆ ಮುಂದಿನ ಸಿನಿಮಾ ಮಾಡುವುದಾಗಿ ಘೋಷಿಸಿದರು. ಇದರಿಂದ ಸಿಟ್ಟಿಗೆದ್ದ ಲೈಕಾ, ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದಾಗಿದೆ. ಶಂಕರ್‌ಗೆ ಸಹ ಬಹುಪಾಲು ಸಂಭಾವನೆ ನೀಡಿಯಾಗಿದೆ ಹಾಗಿದ್ದರೂ ಸಿನಿಮಾ ಪೂರ್ಣ ಮಾಡಿಲ್ಲವೆಂದು ದೂರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಶಂಕರ್‌ಗೆ ಜಯವಾಗಿದೆ.

  ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada

  'ಇಂಡಿಯನ್ 2' ಹೊರತುಪಡಿಸಿ ಶಂಕರ್ ಬಳಿ ಎರಡು ಸಿನಿಮಾಗಳಿವೆ, ದಿಲ್ ರಾಜು ನಿರ್ಮಿಸಿ, ರಾಮ್ ಚರಣ್ ತೇಜ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾ, ಹಾಗೂ ತಮಿಳಿನ 'ಅನ್ನಿಯನ್' ಸಿನಿಮಾದ ಹಿಂದಿ ರೀಮೆಕ್ ಅನ್ನು ಶಂಕರ್ ನಿರ್ದೇಶಿಸಲಿದ್ದಾರೆ. ಆ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸಲಿದ್ದಾರೆ.

  English summary
  Madras high court dismisses injunction filled by Lyca production against director Shankar. Lyca requested to gave injunction that Shankar should not commit to any other movie till he finishes Indian 2 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X