Chiyaan Vikram : ವಿಕ್ರಂ ಆರೋಗ್ಯ ಹೇಗಿದೆ? ಆಸ್ಪತ್ರೆ ಬಿಡುಗಡೆ ಮಾಡಿದೆ ಆರೋಗ್ಯ ಮಾಹಿತಿ

ತಮಿಳಿನ ಖ್ಯಾತ ನಟ ವಿಕ್ರಂ ಆರೋಗ್ಯದಲ್ಲಿ ಏರು-ಪೇರಾದ ಕಾರಣ ಇಂದು ಮಧ್ಯಾಹ್ನ ಹಠಾತ್ತನೆ ಚೆನ್ನೈನ ಪ್ರತಿಷ್ಠಿತ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಯ್ತು.

ನಟ ವಿಕ್ರಂಗೆ ಹೃದಯಾಘಾತವಾಗಿರುವ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿಗಳು ಹರಿದಾಡಿದವು. ಇನ್ನು ಕೆಲವೆಡೆ ವಿಕ್ರಂಗೆ ತೀವ್ರ ಸ್ವರೂಪದ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದೀಗ ವಿಕ್ರಂ ದಾಖಲಾಗಿರುವ ಕಾವೇರಿ ಆಸ್ಪತ್ರೆಯವರೇ ವಿಕ್ರಂರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ವೈದ್ಯರ ಪ್ರಕಾರ ವಿಕ್ರಂಗೆ ಯಾವುದೇ ಗಂಭೀರ ಸಮಸ್ಯೆ ಆಗಿಲ್ಲ.

Hospital Released Vikram Health Update, Says He Is Stable Now

ಕಾವೇರಿ ಆಸ್ಪತ್ರೆಯ ಸಹ ಸ್ಥಾಪಕ ಹಾಗೂ ವೈದ್ಯ ಅರವಿಂದ ಸೆಲ್ವರಾಜ್, ವಿಕ್ರಂ ಆರೋಗ್ಯ ಕುರಿತು ಬುಲೆಟಿನ್ ಬಿಡುಗಡೆ ಮಾಡಿದ್ದು, ''ಇಂದು ಮಧ್ಯಾಹ್ನ ಎದೆ ನೋವೆಂದು ವಿಕ್ರಂ ನಮ್ಮ ಆಸ್ಪತ್ರೆಗೆ ಬಂದರು. ಅವರ ಸ್ಥಿತಿಯನ್ನು ಪರಿಶೀಲಿಸಿ, ಅರಿತು, ತಜ್ಞರು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಹೃದಯಾಘಾತವಾಗಿಲ್ಲ, ಅವರೀಗ ಚೇತರಿಸಿಕೊಂಡಿದ್ದಾರೆ. ಆದಷ್ಟು ಶೀಘ್ರವಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗುತ್ತಾರೆ'' ಎಂದಿದ್ದಾರೆ.

ಈ ಹೆಲ್ತ್ ಬುಲೆಟಿನ್ ಜುಲೈ 08ರ ಸಂಜೆ 5 ಗಂಟೆಗೆ ಹೊರಡಿಸಲಾಗಿದೆ. ಆಸ್ಪತ್ರೆ ಬಿಡುಗಡೆ ಮಾಡಿರುವ ವಿಕ್ರಂ ಆರೋಗ್ಯ ಮಾಹಿತಿ ವಿಕ್ರಂರ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

ವಿಕ್ರಂ ಇಂದು ಮಧ್ಯಾಹ್ನ ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿದ್ದರು, ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಡಿ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು, ಹಲವು ಅಭಿಮಾನಿಗಳು ಚೆನ್ನೈನ ಕಾವೇರಿ ಆಸ್ಪತ್ರೆ ಬಳಿ ನೆರೆದಿದ್ದರು ಸಹ ಈಗ ಅಭಿಮಾನಿಗಲು ನಿರುಮ್ಮಳವಾಗಿದ್ದಾರೆ.

Hospital Released Vikram Health Update, Says He Is Stable Now

ವಿಕ್ರಂ ತಮಿಳಿನ ಸ್ಟಾರ್ ನಟರಲ್ಲೊಬ್ಬರು. ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ವಿಕ್ರಂಗೆ ವಯಸ್ಸೀಗ 56. ಆದರೂ ಜಿಮ್ ಮಾಡಿ ಫಿಟ್ ಆಗಿರುವ ವಿಕ್ರಂ ಆಗಾಗ್ಗೆ ತಮ್ಮ ದೇಹವನ್ನು ದಪ್ಪಕ್ಕೆ, ಸಣ್ಣಕ್ಕೆ ಮಾಡಿಕೊಳ್ಳುತ್ತಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರಿಗೆ ಹೃದಯ ಸಮಸ್ಯೆ ಬಂದಿರಬಹುದಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಬಂದಿರುವ ಆರೋಗ್ಯ ಮಾಹಿತಿಯಿಂದ ಅನುಮಾನ ನಿವಾರಣೆ ಆಗಿದೆ.

ಇನ್ನು ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಮುಖ್ಯ ಪಾತ್ರದಲ್ಲಿದ್ದಾರೆ. ಅದಾದ ಬಳಿಕ ಭಾರಿ ನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್' ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ವಿಕ್ರಂ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Chennai's Kauvery hospital released Vikram health update. Says He did not had cardiac arrest, he is stable now. will discharge from hospital soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X