For Quick Alerts
  ALLOW NOTIFICATIONS  
  For Daily Alerts

  ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!

  |

  ತಮಿಳು ಚಿತ್ರರಂಗದ ಅತ್ಯುತ್ತಮ ನಟಿಯರ ಸಾಲಿನಲ್ಲಿ ನಯನತಾರಾ ಒಬ್ಬರು. 'ಬಿಗಿಲ್', 'ನಾನುಮ್ ರೌಡಿ ದಾನ್', 'ಆರಂಭಮ್', 'ಅರಾಮ್', 'ಚಂದ್ರಮುಖಿ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ಸೈ ಎನಿಸಿಕೊಂಡವರು. ನಟಿಯಾಗಿ ಹೆಸರು ಮಾಡಿದಂತೆಯೇ ನಯನತಾರಾ ವೈಯಕ್ತಿಕ ಬದುಕಿನ ಕಾರಣಕ್ಕೂ ಸದಾ ಸುದ್ದಿಯಲ್ಲಿದ್ದವರು, ಈಗಲೂ ಸುದ್ದಿಯಲ್ಲಿದ್ದಾರೆ.

  ಕೋಟಿ ಕೋಟಿ ಜೇಬಿಗೆ ಇಳಿಸಿಕೊಂಡ ರಜನಿ ದರ್ಬಾರ್ | DARBAR First day collection report / FILMIBEAT KANNADA

  ನನ್ನ ಮತ್ತು ಪ್ರಭುದೇವ ನಡುವಿನ ಸಂಬಂಧ ಹಾಳಾಗಲು ನಯನತಾರಾ ಕಾರಣ ಎಂದು ಇತ್ತೀಚೆಗೆ ಪ್ರಭುದೇವ ಮಾಜಿ ಪತ್ನಿ ರಾಮಲತಾ ಆರೋಪಿಸಿದ್ದರು. ನಯನತಾರಾ ಬಗ್ಗೆ ಇಂತಹ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ನಯನತಾರಾ ನಟ ಸಿಂಬು (ಸಿಲಂಬರಸನ್) ಜತೆ ಸಂಬಂಧ ಹೊಂದಿದ್ದರು. ಆದರೆ ಅವರ ಗೆಳೆತನ ಹೆಚ್ಚು ಕಾಲ ಉಳಿಯಲಿಲ್ಲ. ಅದಕ್ಕೆ ಕಾರಣ ಒಂದು ಕಿಸ್! ಮುಂದೆ ಓದಿ...

  'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ

  ಸೋರಿಕೆಯಾದ 'ಮುತ್ತು' ಮತ್ತು ವಿವಾದ

  ಸೋರಿಕೆಯಾದ 'ಮುತ್ತು' ಮತ್ತು ವಿವಾದ

  'ವಲ್ಲವನ್' ಬಿಡುಗಡೆಯಾದ ನಂತರ ಸಿಂಬು ಮತ್ತು ನಯನತಾರಾ ತಮ್ಮ ಆರಂಭದ ಪ್ರೇಮ ಪ್ರಯಾಣವನ್ನು ಸಂಭ್ರಮಿಸುತ್ತಿದ್ದರು. ಆದರೆ ಅವರಿಬ್ಬರೂ ಬಹಳ ಸಲಿಗೆಯಿಂದ ಇರುವ ಕ್ಷಣಗಳ ಚಿತ್ರ ಸೋರಿಕೆಯಾಯಿತು. ಸಿಂಬು ಮತ್ತು ನಯನತಾರಾ ಉತ್ಕಟತೆಯಿಂದ ಚುಂಬಿಸುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  ಅಲ್ಲಿಂದ ಶುರುವಾಯ್ತು ಕಿತ್ತಾಟ

  ಅಲ್ಲಿಂದ ಶುರುವಾಯ್ತು ಕಿತ್ತಾಟ

  ಕಿಸ್ಸಿಂಗ್ ಫೋಟೊಗಳು ಸೋರಿಕೆಯಾದ ಬಳಿಕ ಸಿಂಬು ಮತ್ತು ನಯನತಾರಾ ಸಂಬಂಧವು ದಿನದಿಂದ ದಿನಕ್ಕೆ ಹಳಸತೊಡಗಿತು. ಇಬ್ಬರೂ ಬ್ರೇಕಪ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬ್ರೇಕಪ್ ಬಳಿಕ ತಮ್ಮ ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸಿದ್ದು ಸಿಂಬು ಎಂದು ಆರೋಪಿಸಿದ ನಯನತಾರಾ, ಮತ್ತೆಂದೂ ಅವರ ಜತೆ ನಟಿಸುವುದಿಲ್ಲ ಎಂದು ಶಪಥ ಮಾಡಿದರು.

  ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?

  ಸಿಂಬು ಹೇಳಿದ್ದೇನು?

  ಸಿಂಬು ಹೇಳಿದ್ದೇನು?

  ನಯನತಾರಾ ಆರೋಪದ ಬಳಿಕ ಸ್ಪಷ್ಟೀಕರಣ ನೀಡಿದ ನಟ ಸಿಂಬು, ತಾವು ಫೋಟೊಗಳನ್ನು ಸೋರಿಕೆ ಮಾಡಲಿಲ್ಲ ಎಂದು ಹೇಳಿದರು. ಹೊಸದಾಗಿ ತಂದಿದ್ದ ಕ್ಯಾಮೆರಾದಲ್ಲಿ ಕ್ಲಾರಿಟಿ ಚೆಕ್ ಮಾಡುವ ಸಲುವಾಗಿಯಷ್ಟೇ ಫೋಟೊಗಳನ್ನು ತೆಗೆಯಲಾಗಿತ್ತು ಎಂದಿದ್ದರು.

  ಡೇಟಿಂಗ್‌ನಲ್ಲಿ ಬಿಜಿ!

  ಡೇಟಿಂಗ್‌ನಲ್ಲಿ ಬಿಜಿ!

  ಬ್ರೇಕಪ್ ಬಳಿಕ ನಯನತಾರಾ, ಪ್ರಭುದೇವ ಜತೆ ಪ್ರೇಮ ಸಲ್ಲಾಪ ಆರಂಭಿಸಿದರು. ಅದು 2012ರಲ್ಲಿ ಕೊನೆಗೊಂಡಿತು. ಈಗ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸಿಂಬು, ಹನ್ಸಿಕಾ ಮೋಟ್ವಾನಿ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ.

  ನಾವು ಹೊಡೆದಾಡಿಕೊಂಡಿಲ್ಲ...

  ನಾವು ಹೊಡೆದಾಡಿಕೊಂಡಿಲ್ಲ...

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಂಬುವಿಗೆ ನಯನತಾರಾ ಮರಳಿ ಬಂದರೆ ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಅವರು, ನಾವಿಬ್ಬರೂ ಈಗ ಸ್ನೇಹಿತರಷ್ಟೇ. ಅದಕ್ಕೀಗ ಏಕೆ ಮಹತ್ವ ಕೊಡಬೇಕು. ನಾವಿಬ್ಬರೂ ಇಲ್ಲಿ ಸಾರಿ ಕೇಳುವ ಪ್ರಮೇಯವಿಲ್ಲ. ಸಾರಿ ಕೇಳಲು ನಾವು ಹೊಡೆದಾಡಿಕೊಂಡಿಲ್ಲ. ಜತೆಗಿದ್ದೆವು, ಕೆಲವು ಕಾರಣಗಳಿಂದ ದೂರಾದೆವು. ಬಹಳ ಕಾಲದ ಬಳಿಕ ಭೇಟಿಯಾದಾಗಲೂ ಮಾಮೂಲಿ ಮಾತುಕತೆ ನಡೆಸಿದ್ದೆವು ಎಂದಿದ್ದರು.

  English summary
  Nayanthara and Simbu were in relationship during their initial stage of her career. But leaked initimate pics of them broke everything.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X