ಸೂರ್ಯ- ಜ್ಯೋತಿಕಾ ಮಗಳ ದ್ವಿತೀಯ ಪಿಯುಸಿ ಅಂಕಗಳು ಎಷ್ಟು? /600ಕ್ಕೆ ಗಳಿಸಿದ್ದೆಷ್ಟು?
ಕಾಲಿವುಡ್ ಹಾಟ್ ಕಪಲ್ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ಸದ್ಯ ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಜ್ಯೋತಿಕಾ ಇತ್ತೀಚೆಗೆ ಮತ್ತೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಚೆನ್ನೈನಿಂದ ಮುಂಬೈಗೆ ದಂಪತಿ ಮನೆಯನ್ನು ಬದಲಾಯಿಸಿದ್ದಾರೆ. ನಮ್ಮ ಸಿನಿಮಾಗಳು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ನಿರ್ಧಾರ ಎಂದು ಜ್ಯೋತಿಕಾ ಹೇಳಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೂರ್ಯ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. 'ಕಂಗುವ' ಆಗಿ ಪ್ಯಾನ್ ಇಂಡಿಯಾಮಟ್ಟದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಂದ 'ಶೈತಾನ್' ಚಿತ್ರದಲ್ಲಿ ಜ್ಯೋತಿಕಾ ನಟಿಸಿದ್ದಾರೆ. ಮುಂಬೈ ಮೂಲದ ಜ್ಯೋತಿಕಾ ಸೌತ್ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಕೊನೆಗೆ ನಟ ಸೂರ್ಯ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.

2006ರಲ್ಲಿ ಸೂರ್ಯ- ಜ್ಯೋತಿಕಾ ಮದುವೆ ಹಸೆಮಣೆ ಏರಿದ್ದರು. ದಂಪತಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಮದುವೆ ಬಳಿಕ ಜ್ಯೋತಿಕಾ ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ್ದರು. ಕುಟುಂಬ ಮಕ್ಕಳ ಲಾಲನೆ ಪಾಲನೆ ಎಂದು ವಿಶ್ರಾಂತಿ ಪಡೆದಿದ್ದರು. ಬಳಿಕ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ವಾಪಸ್ ಆಗಿದ್ದರು. ದಂಪತೊಯ ಮಕ್ಕಳು ಮುಂಬೈನ ಪ್ರತಿಷ್ಠಿತ ಧೀರುಬಾಯ್ ಅಂಬಾನಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ವರ್ಷ ಸೂರ್ಯ-ಜ್ಯೋತಿಕಾ ಮಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಳು. ಅದರ ಫಲಿತಾಂಶ ಹೊರಬಿದ್ದಿದ್ದು ದಿಯಾ ಉತ್ತಮ ಅಂಕ ಗಳಿಸಿ ಉತ್ತೀರ್ಣಳಾಗಿದ್ದಾಳೆ. ಆಕೆಯ ಅಂಕಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ದಿಯಾ 600ಕ್ಕೆ 581 ಅಂಕ ಗಳಿಸಿದ್ದಾಳೆ. ತಂದೆ -ತಾಯಿ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಇಂಗ್ಲಿಷ್‌ನಲ್ಲಿ -97 ಅಂಕಗಳು, ದ್ವಿತಿಯ ಭಾಷೆಯಲ್ಲಿ -96 ಅಂಕಗಳು, ಅಕೌಂಟ್ಸ್‌ನಲ್ಲಿ -94 ಅಂಕಗಳು, ಭೌತಶಾಸ್ತ್ರದಲ್ಲಿ -99 ಅಂಕಗಳು, ರಸಾಯನಶಾಸ್ತ್ರದಲ್ಲಿ -98 ಅಂಕಗಳು ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ 97 ಅಂಕಗಳನ್ನು ಪಡೆದಿದ್ದಾಳೆ. ಈ ವಿಚಾರ ತಿಳಿದು ಅಭಿಮಾನಿಗಳು ಸೂರ್ಯ ಮಗಳಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ದ್ವಿತಿಯ ಪಿಯುಸಿ ಮಾತ್ರವಲ್ಲ ಎಸ್‌ಎಸ್‌ಎಲ್‌ಸಿಯಲ್ಲಿ ಕೂಡ ದಿಯಾ ಉತ್ತಮ ಅಂಕಗಳನ್ನು ಪಡೆದಿದ್ದಳು. ಶೇ. 97ರಷ್ಟು ಅಂಕಗಳನ್ನು ಸಾಧಿಸಿದ್ದಳು. ಓದಿನಲ್ಲಿ ಮಾತ್ರವಲ್ಲದೇ ಕ್ರೀಡಾ ವಿಭಾಗದಲ್ಲಿ ಕೂಡ ದಿಯಾ ಗಮನ ಸೆಳೆದಿದ್ದಳು. ಟೆನ್ನಿಸ್ ಹಾಗೂ ಫುಟ್ಬಾಲ್ ಆಟಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಹಿಂದೆ ಸುದ್ದಿ ಆಗಿತ್ತು.

ಸೂರ್ಯ- ಜ್ಯೋತಿಕಾ ಪುತ್ರ ದೇವ್ ಕೂಡ ಕರಾಟೆ ಸೇರಿದಂತೆ ಕೆಲ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಆತನ ಕರಾಟೆ ಪ್ರದರ್ಶನದ ಬಗ್ಗೆ ಸುದ್ದಿಯಾಗಿತ್ತು. ಸದ್ಯಕ್ಕೆ ಇಬ್ಬರು ಚಿತ್ರರಂಗದತ್ತ ಗಮನ ಹರಿಸಿಲ್ಲ. ಮುಂದಿನ ದಿನಗಳಲ್ಲಿ ಇಬ್ಬರಲ್ಲಿ ಯಾರಾದರೂ ಬಣ್ಣದಲೋಕಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜ್ಯೋತಿಕಾ ತಾವು ಮುಂಬೈಗೆ ಶಿಫ್ಟ್ ಆಗಿದ್ದು ಯಾಕೆ ಎನ್ನುವ ಬಗ್ಗೆ ಮಾತನಾಡಿದ್ದರು. ನಮ್ಮ ಪೋಷಕರು ಅಲ್ಲೇ ಇದ್ದಾರೆ. ಅವರಿಗೆ ಬಹಳ ವಯಸ್ಸಾಗಿದೆ. ಜೊತೆಗೆ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮುಂಬೈನಲ್ಲಿ ಸೆಟ್ಲ್ ಆಗಿದ್ದೀವಿ. ಸಿನಿಮಾಗಳಿಗಾಗಿ ನಾನು ಅಲ್ಲಿಗೆ ಹೋದೆವು ಎನ್ನುವುದು ಸುಳ್ಳು. ಅದು ಕೊನೆಯ ಕಾರಣ ಆಗಿರುತ್ತದೆ ಎಂದಿದ್ದರು.
'ಸುರರೈ ಪೋಟ್ರು' ಸಿನಿಮಾ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಲಾಗುತ್ತದೆ. ಅಕ್ಷಯ್‌ಕುಮಾರ್ ಹೀರೊ ಆಗಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಸೂರ್ಯ ಕೂಡ ಕಾಣಿಸಿಕೊಂಡಿದ್ದಾರೆ. ಮುಂದಿನ ಸೂರ್ಯ ಬಾಲಿವುಡ್‌ಗೆ ಹೀರೊ ಆಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications