ಸೀರೆಗೂ ಕೀರ್ತಿ ಸುರೇಶ್‌ಗೂ ಬಿಡಲಾರದ ನಂಟು; ಈ ಸೀರೆ ಬೆಲೆ ₹3 ಲಕ್ಷವಂತೆ.. ಏನಿದರ ವಿಶೇಷತೆ?

By ಫಿಲ್ಮಿಬೀಟ್ ಡೆಸ್ಕ್

ಕೀರ್ತಿ ಸುರೇಶ್ ಟ್ರೆಡಿಷನಲ್ ಲುಕ್‌ನಲ್ಲಿ ಕಂಡಿದ್ದು ತೀರಾ ವಿರಳ. ಟ್ರೆಡಿಷನಲ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸೆಳೆದಿದ್ದಾರೆ. ಕೇರಳ ಮೂಲದ ಈ ನಟಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಸಿನಿಮಾ ಅದೆಷ್ಟೇ ಮಾಡಿದ್ದರೂ, ಸೀರೆಯುಟ್ಟು ಪೋಸ್ ಕೊಟ್ಟರೆ, ಲೈಕ್ಸ್, ಕಾಮೆಂಟ್‌ಗಳಿಗೆ ಬರವಿಲ್ಲ.

ಕೀರ್ತಿ ಸುರೇಶ್ ತನ್ನ ಡ್ರೆಸ್ಸಿಂಗ್ ಸೆನ್ಸ್‌ನಿಂದ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡಿದ್ದಾರೆ. ಅದರಲ್ಲೂ ವಾರಕ್ಕೆ ಒಂದೆರಡು ಬಾರಿಯಾದರೂ, ಸೀರೆಯುಟ್ಟು ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಫೋಟೊಗಳಿಗೆ ಅವರ ಅಭಿಮಾನಿಗಳು ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳು ಬೀಳುತ್ತವೆ.

How much did Keerthy Suresh expensive saree cost designed by Tarun Tahiliani

ಕಳೆದ ಎರಡು ದಿನಗಳ ಹಿಂದೆ ಎಂದಿನಂತೆ ಕೀರ್ತಿ ಸುರೇಶ್ ಸೀರೆಯುಟ್ಟು ತೆಗಿಸಿಕೊಂಡ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಆ ಫೋಟೊಗಳು ಹೆಣ್ಮಕ್ಕಳ ಮನಸ್ಸನ್ನು ಸೆಳೆದು ಬಿಟ್ಟಿದೆ. ಆದರೆ, ಅದರ ಬೆಲೆ ಕಂಡು ದಂಗಾಗಿ ಹೋಗಿದ್ದಾರೆ. ಒಂದು ಸೀರೆಯ ಬೆಲೆ ಬರೋಬ್ಬರು 2,99,99 ರೂಪಾಯಿ ಎಂದರೆ, ಹೆಣ್ಮಕ್ಕಳಿಗೆ ಏನಾಗ್ಬೇಡಾ?

ಅಷ್ಟಕ್ಕೂ ಈ ಡಿಸೈನರ್ ಸೀರೆಯಲ್ಲಿ ಅಂತಹದ್ದೇನಿದೆ? ಅಂತ ಹುಡುಕಾಟ ಶುರುವಾಗಿದೆ. ಜನಪ್ರಿಯ ಡಿಸೈನರ್ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಸೀರೆಯಿದು. ಸಾಂಪ್ರದಾಯಿಕ ಕಸೂತಿ ಕಲೆಯನ್ನು ಬಳಸಿ ಈ ಸೀರೆಯನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಈ ಮಟ್ಟಿಗೆ ದುಬಾರಿ ಬೆಲೆ ಎನ್ನಲಾಗಿದೆ.

How much did Keerthy Suresh expensive saree cost designed by Tarun Tahiliani

ಅಷ್ಟಕ್ಕೂ ಈ ಡಿಸೈನರ್ ಸೀರೆಯ ವಿಶೇಷತೆ ಏನು ಗೊತ್ತೇ? ಹೂವು ಹಾಗೂ ಜಿಯೋಮೆಟ್ರಿಕ್ ಪ್ಯಾಟ್ರನ್ ಅನ್ನು ಥೀಮ್ ಆಗಿ ಇಟ್ಟುಕೊಳ್ಳಲಾಗಿದೆ. ಕಣ್ಣಿಗೆ ಹಿತ ಎನಿಸುವ ಹಲವು ಬಣ್ಣಗಳನ್ನು ಬಳಸಲಾಗಿದೆ. ಥ್ರೆಡ್ ವರ್ಕ್‌ಗಳನ್ನು ಮಾಡಿದ್ದಾರೆ. ಹೀಗಾಗಿ ಈ ಡಿಸೈನರ್ ಸೀರೆಯ ಬೆಲೆ ಮೂರು ಲಕ್ಷ ರೂಪಾಯಿಯಷ್ಟು ದುಬಾರಿ ಎನ್ನಲಾಗಿದೆ.

ಸಾಮಾನ್ಯವಾಗಿ ನಟಿಯರು ಮದುವೆ, ಸಿನಿಮಾ ಕಾರ್ಯಕ್ರಮಗಳು, ಇವೆಂಟ್‌, ಅವಾರ್ಡ್ ಫಂಕ್ಷನ್‌ಗಳಿಗೆ ಹೋಗಬೇಕಾದರೆ, ಹೀಗೆ ವಿನ್ಯಾಸಗೊಳಿಸಿದ ಸೀರೆಯನ್ನು ತೊಟ್ಟು ಹೋಗುತ್ತಾರೆ. ಅಂತಹ ದುಬಾರಿ ಕಾಸ್ಟ್ಯೂಮ್‌ಗಳನ್ನು ಜನಪ್ರಿಯ ಡಿಸೈನರ್ ಬಳಿ ವಿನ್ಯಾಸಗೊಳಿಸಿರುತ್ತಾರೆ. ಕೀರ್ತಿ ಸುರೇಶ್ ಇತ್ತೀಚೆಗೆ ನಡೆದ ನಿರ್ದೇಶಕ ಶಂಕರ್ ಮಗಳ ಮದುವೆಗೆ ಉಟ್ಟಿದ್ದ ಸೀರೆ ಎಂದು ಹೇಳಲಾಗುತ್ತಿದೆ.

ನಟಿ ಕೀರ್ತಿ ಸುರೇಶ್ ಸದ್ಯ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಈಕೆಯ ಕೈಯಲ್ಲಿ 'ರಘುತಾತ', 'ರಿವಾಲ್ವರ್ ರೀಟಾ', 'ಕನ್ನಿವೇದಿ' ಸೇರಿ ಮೂರು ತಮಿಳು ಸಿನಿಮಾಗಳಿವೆ. ಹಾಗೇ ಹಿಂದಿಯಲ್ಲಿ 'ಬೇಬಿ ಜಾನ್' ಅನ್ನುವ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾಗಳಲ್ಲಿ ಸೀರೆಯುಟ್ಟು ಮಿಂಚುತ್ತಿರುತ್ತಾರೆ.

More from Filmibeat

English summary
Do you know how much Keerthy Suresh saree cost?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X