Abhinaya Marriage: 'ಹುಡುಗರು' ನಟಿ ಅಭಿನಯ ಅದ್ಧೂರಿ ಮದುವೆ; ಇಲ್ಲಿದೆ ಫೋಟೊಸ್

'ಹುಡುಗರು' ಸಿನಿಮಾ ಖ್ಯಾತಿಯ ತಮಿಳು ನಟಿ ಅಭಿನಯ ಹಸೆಮಣೆ ಏರಿದ್ದಾರೆ. ಬಹಳ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳು ನೆರವೇರಿದೆ. 15 ವರ್ಷಗಳ ಕಾಲ ಉದ್ಯಮಿ ವೇಗೇಶನಾ ಕಾರ್ತಿಕ್‌ ಅವರನ್ನು ಪ್ರೀತಿಸಿ ಅಭಿನಯ ಮದುವೆ ಆಗಿದ್ದಾರೆ. ಆಕೆಯ ಮದುವೆ ಫೋಟೊಗಳು ವೈರಲ್ ಆಗುತ್ತಿದೆ.

ಹೈದರಾಬಾದ್‌ನಲ್ಲಿರುವ ಜೆಆರ್‌ಸಿ ಕನ್ವೆಂಷನ್ ಹಾಲ್‌ನಲ್ಲಿ ಅಭಿನಯ ಹಾಗೂ ಸನ್ನಿ ವರ್ಮಾ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳು ನೆರವೇರಿದೆ. ಎರಡೂ ಕುಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ಜೋಡಿಗೆ ಶುಭ ಹಾರೈಸಿದ್ದಾರೆ. ಚಿಕ್ಕಂನಿಂದಲೂ ಇಬ್ಬರೂ ಪ್ರೀತಿಸುತ್ತಿದ್ದರು.

Hudugaru actress Abhinaya Ties-The-knot With sunny varma see pics

ತೆಲುಗಿನ 'ನೇನಿಂತೆ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ನಟಿ ಅಭಿನಯ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಸಹೋದರಿ ಪಾತ್ರದಲ್ಲಿ ಅಭಿನಯ ನಟಿಸಿ ಗಮನ ಸೆಳೆದರು. ಕಿವಿ ಕೇಳಿಸದ, ಮಾತನಾಡಲು ಬಾರದ ವಿಶೇಷ ಚೇತನ ಪ್ರತಿಭೆ ನಟಿ ಅಭಿನಯ. ಆದರೆ ತಮ್ಮ ನ್ಯೂನ್ಯತೆಗಳನ್ನು ಮೀರಿ ಚಿತ್ರರಂಗದಲ್ಲಿ ಕಮಾಲ್ ಮಾಡಿದ್ದಾರೆ.

ನಟ ವಿಶಾಲ್ ಹಾಗೂ ಅಭಿನಯ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ನಟಿ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದರು. ಸನ್ನಿ ವರ್ಮಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 9ರಂದು ಇಬ್ಬರು ಮದುವೆ ನಿಶ್ಚಿತಾರ್ಥ ನೆರವೇರಿತ್ತು. ನಿನ್ನೆ(ಏಪ್ರಿಲ್ 16) ಜೋಡಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

ಏಪ್ರಿಲ್ 20ರಂದು ಹೈದರಾಬಾದ್‌ನಲ್ಲೇ ಅಭಿನಯ- ಸನ್ನಿ ವರ್ಮಾ ಜೋಡಿಯ ಗ್ರ್ಯಾಂಡ್ ರಿಸೆಪ್ಷನ್ ಪಾರ್ಟಿ ಕೂಡ ಏರ್ಪಡಿಸಲಾಗಿದೆ. ಖಾಸಗಿ ಹೋಟೆಲ್‌ನಲ್ಲಿ ಈ ಸಮಾರಂಭ ನಡೆಯಲಿದೆ. ಈ ವೇಳೆ ತೆಲುಗು ಹಾಗೂ ತಮಿಳು ಸಿನಿಮಾ ತಾರೆಯರು ಭಾಗಿ ಆಗಿ ಜೋಡಿಗೆ ಶುಭ ಕೋರಲಿದ್ದಾರೆ. ತಮಿಳಿನ 'ನಾಡೋಡಿಗಳ್' ಸಿನಿಮಾ ಅಭಿನಯ ಅವರಿಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಚಿತ್ರದಲ್ಲಿ ನಾಯಕನ ಸಹೋದರಿ ಪಾತ್ರದಲ್ಲಿ ಮಿಂಚಿದ್ದ ಅಭಿನಯ ಸಾಕಷ್ಟು ಪ್ರಶಸ್ತಿ ಪಡೆದಿದ್ದರು.

'ನಾಡೋಡಿಗಳ್' ಸಿನಿಮಾ ಕನ್ನಡಕ್ಕೆ 'ಹುಡುಗರು' ಆಗಿ ರೀಮೆಕ್ ಆಗಿತ್ತು. ಪುನೀತ್ ರಾಜ್‌ಕುಮಾರ್ ಹೀರೋ ಪ್ರಭು ಆಗಿ ನಟಿಸಿದರೆ ಆತನ ಸಹೋದರಿ ಪವಿತ್ರಾ ಪಾತ್ರದಲ್ಲಿ ಅಭಿನಯ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆಲುಗಿಗೆ ರೀಮೆಕ್ ಆಗಿದ್ದಾಗಲೂ ಅದೇ ಪಾತ್ರವನ್ನು ನಿಭಾಯಿಸಿದ್ದರು. ಅಷ್ಟರಮಟ್ಟಿಗೆ ಆ ಪಾತ್ರ ಆಕೆಗೆ ಅದೃಷ್ಟ ತಂದುಕೊಟ್ಟಿತ್ತು. ಹುಡುಗರು ಬಳಿಕ ಕನ್ನಡದಲ್ಲಿ 'ಕಿಚ್ಚು' ಹಾಗೂ 'ಆಟೋ ರಾಮಣ್ಣ' ಎಂಬ ಸಿನಿಮಾಗಳಲ್ಲಿ ಅಭಿನಯ ಬಣ್ಣ ಹಚ್ಚಿದ್ದರು.

ಅಭಿನಯ- ಸನ್ನಿ ವರ್ಮಾ ಮದುವೆಗೆ ಮುನ್ನ ಸಂಗೀತ್ ಪಾರ್ಟಿ, ಮೆಹಂದಿ ಶಾಸ್ತ್ರ ಎಲ್ಲವೂ ಅದ್ಧೂರಿಯಾಗಿ ನಡೆದಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭರ್ಜರಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಸಹ ಮಾಡಿಸಿದ್ದಾರೆ. ಆ ಫೋಟೊಗಳನ್ನೆಲ್ಲಾ ಅಭಿನಯ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮದುವೆ ಫೋಟೊಗಳನ್ನು ಪೋಸ್ಟ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ತೆಲುಗಿನ 'ಧಮ್ಮು', 'ಡಮರುಕಂ', 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು', 'ಧ್ರುವ', ತಮಿಳಿನ 'ವೀರಂ', 'ಪೂಜೈ', 'ತನಿ ಒರುವನ್', 'ಮಾರ್ಕ್ ಆಂಟನಿ' ಸೇರಿದಂತೆ ಕೆಲ ಹಿಟ್ ಸಿನಿಮಾಗಳಲ್ಲಿ ಅಭಿನಯ ಮಿಂಚಿದ್ದಾರೆ. ಕಳೆದ ವರ್ಷ ಅಭಿನಯ ನಟನೆಯ 4 ತೆಲುಗು ಸಿನಿಮಾಗಳು ತೆರೆಗೆ ಬಂದಿತ್ತು. ಸದ್ಯ 'ಮೂಕುಟ್ಟಿ ಅಮ್ಮನ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಮಿಂಚಲಿದ್ದಾರೆ.

More from Filmibeat

English summary
Abhinaya wedding: Hudugaru actress marries long-time boyfriend Vegesna Karthik (Sunny Varma) in Hyderabad
Read more about: kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X