Nayanthara: ಮುದ್ದಿನ ಮಡದಿ ನಯನತಾರಾ ಹುಟ್ಟುಹಬ್ಬಕ್ಕೆ ಪತಿ ವಿಘ್ನೇಶ್ ಶಿವನ್ ಸ್ಪೆಷಲ್ ವಿಶ್

ತಮಿಳು, ತೆಲುಗು, ಕನ್ನಡ, ಬಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ನಟಿ ನಯನತಾರಾಗೆ ಹುಟ್ಟಹಬ್ಬದ ಸಂಭ್ರಮ. ಲೇಡಿ ಸೂಪರ್‌ ಸ್ಟಾರ್ ಎಂದು ಹೆಸರು ಪಡೆದಿರುವ ನಟಿ ನವೆಂಬರ್ 18 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಕೋಟ್ಯಾಂತರ ಮಂದಿ ಅವರಿಗೆ ಶುಭಾಶಯ ಕೋರಿದ್ದಾರೆ.

ತಮಿಳು ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್‌ಗಳ ಸಾಲಿನಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಕೂಡ ಸೇರಿಕೊಂಡಿದ್ದೆ. ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿ ಅನಿಸಿಕೊಂಡಿದೆ ಈ ಕಪಲ್. ಈಗ ನಟಿ ನಯನತಾರಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮುದ್ದಿನ ಮಡದಿಗೆ ಪತಿ ಸ್ಪೆಷಲ್ ವಿಶ್ ಹೇಳಿದ್ದಾರೆ.

special-wish-to-wife-nayanthara

ಲೇಡಿ ಸೂಪರ್ ಸ್ಟಾರ್ ನಯನತಾರಾ ಹುಟ್ಟುಹಬ್ಬ

ತಮಿಳು ಸಿನಿಮಾ ನಿರ್ದೇಶಕ, ಪತಿ ವಿಘ್ನೇಶ್ ಶಿವನ್ ಮನ ಮೆಚ್ಚಿದ ಮಡದಿ ನಯನತಾರಾ ಬರ್ತ್‌ಡೇಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಹುಟ್ಟುಹಬ್ಬದ ಶುಭ ಹಾರೈಸಿದ ಅವರು ಕೇಕ್ ಜೊತೆಗೆ ಸಂಭ್ರಮಾಚರಣೆ ಮಾಡಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಘ್ನೇಶ್ ಶಿವನ್ ಇನ್‌ಸ್ಟಾಗ್ರಾಮ್ ಪೋಸ್ಟ್

ಪತಿಯ ಹುಟ್ಟುಹಬ್ಬ ಆಚರಣೆ ಮಾಡಿರುವ ವಿಘ್ನೇಶ್ ಶಿವನ್, ನಯನತಾರಾ ಅವರೊಂದಿಗಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರು ತಮ್ಮ ಮಕ್ಕಳಾದ ಉಯಿರ್ ಮತ್ತು ಉಲಗಂ ಅವರೊಂದಿಗೆ ಕ್ಯಾಮರಾಗೆ ಮುದ್ದಾಗಿ ಪೋಸ್ ನೀಡುತ್ತಿದ್ದಾರೆ. ಈ ಕ್ಯೂಟ್ ಫೋಟೋದಲ್ಲಿ ನಯನತಾರಾ ಮತ್ತು ವಿಘ್ನೇಶ್ ಆಲಿವ್ ಗ್ರೀನ್ ಟಿ ಶರ್ಟ್‌ಗಳಲ್ಲಿ ಮಿಂಚಿದ್ದಾರೆ.

ಈ ಮುದ್ದಾದ ಫೋಟೋಗೆ "ಹುಟ್ಟುಹಬ್ಬದ ಶುಭಾಶಯಗಳು ನನ್ನ ತಂಗಮೇ, ನಯನತಾರಾ" ಎಂದಿದ್ದು, ಕಿಸ್ಸಿಂಗ್ ಎಮೋಜಿಗಳನ್ನು ಹಾಕಿದ್ದಾರೆ. ಇದರ ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ವಿಘ್ನೇಶ್ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಚಾಕೊಲೇಟ್ ಕೇಕ್ ಮೇಲೆ "ಹುಟ್ಟುಹಬ್ಬದ ಶುಭಾಶಯಗಳು ನನ್ನ ಉಯಿರ್ ಉಲಗಂ" ಎಂಬ ಪದಗಳಿವೆ.

special-wish-to-wife-nayanthara

ಶೀರ್ಷಿಕೆಯಲ್ಲಿ, "ಲವ್ ಯೂ ಮೈ ಉಯಿರ್ ಮತ್ತು ಉಲಗಂ. ನಯನತಾರಾ ನಿಮಗೆ ಜನ್ಮದಿನದ ಶುಭಾಶಯಗಳು. ನನ್ನ ಜೀವನದ ಎಲ್ಲಾ ಬ್ಯೂಟಿ ಮತ್ತು ಅರ್ಥವೇ ನೀವು ಮತ್ತು ನಿಮ್ಮ ಸಂತೋಷ" ಎಂದು ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ವಿಘ್ನೇಶ್ ಶಿವನ್ ಮತ್ತು ನಯನತಾರಾ ಮದುವೆ

ಕಳೆದ ವರ್ಷ ಜೂನ್ 9 ರಂದು ವಿಘ್ನೇಶ್ ಶಿವನ್ ಮತ್ತು ನಯನತಾರಾ ಚೆನ್ನೈನಲ್ಲಿ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಮದುವೆಯಲ್ಲಿ ಅವರ ಕುಟುಂಬದವರು ಮತ್ತು ಚಿತ್ರರಂಗದ ಕೆಲವು ಆಪ್ತರು ಪಾಲ್ಗೊಂಡಿದ್ದರು. ಈ ಜೋಡಿಯ ಮದುವೆಗೆ ಬಂದ ಅತಿಥಿಗಳಲ್ಲಿ ಶಾರುಖ್ ಖಾನ್ ಮತ್ತು ರಜನಿಕಾಂತ್ ಕೂಡ ಸೇರಿದ್ದಾರೆ.

ನಯನತಾರಾ ಇತ್ತೀಚೆಗೆ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಜವಾಣ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮೂಲಕ ನಯನತಾರಾ ಹಿಂದಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾ ಈ ವರ್ಷದ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 1100 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಚಿತ್ರದಲ್ಲಿ ನಯನತಾರಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಖಳನಟನಾಗಿ ಅಬ್ಬರಿಸಿದ್ದಾರೆ. ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ.

More from Filmibeat

English summary
Vignesh Shivan special wish to Nayanthara on her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X