32ನೇ ವರ್ಷಕ್ಕೆ 2ನೇ ಮದುವೆ, 2ತಿಂಗಳಲ್ಲೇ ಗರ್ಭಿಣಿ ; ಆ ವ್ಯಕ್ತಿ ಹೇಳಿದ್ದ ಭವಿಷ್ಯ ನಿಜಾ ಆಯ್ತು-ಅಮಲಾ ಪೌಲ್

ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ.

ಕೇವಲ ಜ್ಯೋತಿಷ್ಯ ಮಾತ್ರ ಅಲ್ಲ ಸಂಖ್ಯಾಶಾಸ್ತ್ರ ಮತ್ತು ರೇಖಾಶಾಸ್ತ್ರವನ್ನು ಕೂಡ ನಂಬುವ ಬಹುದೊಡ್ಡ ವರ್ಗ ಸದ್ಯ ಇದೆ. ಆ ಪೈಕಿ ಅಮಲಾ ಪೌಲ್ ಕೂಡ ಒಬ್ಬರು. ಹೌದು, ಅಮಲಾ ಪೌಲ್.. ಚಿಕ್ಕ ಚಿಕ್ಕ ವಿಚಾರಕ್ಕೆ ಸುದ್ದಿಯಾಗುವ ಸುಂದರಿ. ಫೋಟೊಶೂಟ್.. ಮದುವೆ.. ಡಿವೋರ್ಸ್.. ಇತ್ಯಾದಿ ವಿಚಾರಗಳು ಅಮಲಾ ಸದ್ದು ಮಾಡಲು ಪ್ರಮುಖ ಕಾರಣ.

I Didn t Even Have a Boyfriend Amala Paul s Eerie Astrologer Prediction Came True

2009ರಲ್ಲಿ ''ನೀಲತಾಮರ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅಮಲಾ ''ವೀರ ಶೇಖರನ್'' ಮೂಲಕ ಕಾಲಿವುಡ್‌ಗೆ ಬಂದರು. ''ಮೈನಾ''.. ''ದೈವ ತಿರುಮಗಳ್''.. ''ವಿಐಪಿ''..''ಆಡೈ''.. ''ಇದ್ದರಮ್ಮಾಯಿಲಥೋ''.. ''ಜೆಂಡಾಪೈ ಕಪಿರಾಜು''..''ಬೆಜವಾಡ''.. ಇವರ ಕೆಲ ಮುಖ್ಯವಾದ ಸಿನಿಮಾಗಳು. ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ''ಹೆಬ್ಬುಲಿ'' ಸಿನಿಮಾದ ಮೂಲಕ ಕನ್ನಡಕ್ಕೂ ಬಂದಿದ್ದರು ಈ ಮಾದಕ ಚೆಲುವೆ.

ಇನ್ನೂ ವೈಯಕ್ತಿಕ ವಿಚಾರಕ್ಕೆ ಬಂದರೆ ಸಿನಿಮಾಗಳಲ್ಲಿ ಸಾಕೆನ್ನುವಷ್ಟು ಅವಕಾಶಗಳಿದ್ದಾಗಲೇ ನಿರ್ದೇಶಕ ಎ.ಎಲ್. ವಿಜಯ್‌ನನ್ನು ಪ್ರೀತಿಸಿ ಮದುವೆಯಾದಳು. ಅದಾಗಿ ಎರಡೇ ವರ್ಷಕ್ಕೆ ವಿಚ್ಛೇದನವೂ ಆಯ್ತು. ಆ ನಂತರ ಬಾಲಿವುಡ್ ಸಿಂಗರ್ ಭವೀಂದರ್ ಸಿಂಗ್ ಅವರ ಜೊತೆ ಅಮಲಾ ಸದ್ದಿಲ್ಲದೇ ಮದುವೆಯಾಗಿದ್ಧಾರೆ ಎನ್ನುವ ಸುದ್ದಿ ಬಂತು. ಇದರ ಬೆನ್ನಲ್ಲೇ ಅಮಲಾ ಮತ್ತು ಭವೀಂದರ್ ಲಿವಿನ್ ರಿಲೇಷನ್ನಿನಲ್ಲಿದ್ದರು ಎನ್ನುವ ವಿಚಾರ ಚರ್ಚೆಗೀಡಾಯ್ತು.

ಆ ನಂತರ ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ ಸಪ್ತಪದಿ ತುಳಿದರು. ವಿಶೇಷ ಅಂದರೆ ಮದುವೆಯಾದ ಎರಡೇ ತಿಂಗಳಿನಲ್ಲಿ ಅಮಲಾ ಪೌಲ್ ಗುಡ್ ನ್ಯೂಸ್ ನೀಡಿದ್ದರು. ಗರ್ಭಿಣಿಯಾದ ವಿಚಾರ ಹಂಚಿಕೊಂಡಿದ್ದರು.

ಇಂಥಾ ಅಮಲಾ ಪೌಲ್ ಸದ್ಯ ತಮ್ಮ ಈ ಎರಡನೇ ಮದುವೆ ಕುರಿತು ಜ್ಯೋತಿಷಿಯೊಬ್ಬರು ಹೇಳಿದ್ದ ಭವಿಷ್ಯದ ಕುರಿತು ಮಾತನಾಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಲಾ ಪೌಲ್, ನಾನು ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದೆ, ಆ ಸಮಯದಲ್ಲಿ ಅವರು ನಿನಗೆ 32ನೇ ವಯಸ್ಸಿನಲ್ಲಿ ಮದುವೆಯಾಗುತ್ತೆ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.

I Didn t Even Have a Boyfriend Amala Paul s Eerie Astrologer Prediction Came True

ಜ್ಯೋತಿಷಿ ಆಡಿದ ಈ ಮಾತುಗಳಿಂದ ನನಗೆ ತುಂಬಾನೇ ನಗು ಬಂದಿತ್ತು, ಯಾಕೆಂದರೆ ಆ ಸಮಯದಲ್ಲಿ ನಾನು ಸಿಂಗಲ್ ಆಗಿದ್ದೇ ಎಂದು ಹೇಳಿರುವ ಅಮಲಾ ಪೌಲ್ ಆಗ ನನಗೆ ಒಬ್ಬ ಬಾಯ್‌ಫ್ರೆಂಡ್ ಕೂಡ ಇರಲಿಲ್ಲ, ಹೀಗಾಗಿ ಮದುವೆಗೆ ಹುಡುಗ ಎಲ್ಲಿಂದ ಬರುತ್ತಾನೆ ಎಂದುಕೊಂಡು ನಾನು ನಕ್ಕಿದೆ, ಆ ನಂತರ ಆ ಜ್ಯೋತಿಷಿಯ ಮಾತನ್ನು ಮರೆತಿದ್ದೆ ಎಂದು ಹೇಳಿದ್ದಾರೆ.

ಇದೆಲ್ಲವೂ ಆಗಿ ಕೆಲ ದಿನಗಳ ನಂತರ ನಾನು ಗೋವಾಗೆ ಪ್ರವಾಸಕ್ಕೆಂದು ಹೋಗಿದ್ದೇ, ಅಲ್ಲಿ ನನ್ನ ಬದುಕು ಬದಲಾಯ್ತು ಎಂದು ಹೇಳಿರುವ ಅಮಲಾ ಅಲ್ಲಿ ನನಗೆ ಜಗತ್ ಅವರ ಪರಿಚಯವಾಯ್ತು ಎಂದು ಹೇಳಿದ್ದಾರೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಮ್ಯಾಜಿಕ್ ನಡೆದ ಅನುಭವ ಅದು ಎಂದು ಹೇಳಿರುವ ಅಮಲಾ ಆ ನಂತರ ಪರಿಚಯ ಸ್ನೇಹವಾಯ್ತು. ಸ್ನೇಹ ಡೇಟಿಂಗ್‌ಗೆ ನಾಂದಿ ಹಾಡಿತು, ಗೋವಾ ನಮ್ಮ ಪ್ರೇಮ ಕಥೆಗೆ ಸಾಕ್ಷಿಯಾಯ್ತು ಎಂದು ಹೇಳಿದ್ದಾರೆ.

ಮುಂದುವರೆದು ಆ ಕ್ಷಣಕ್ಕೆ ಮದುವೆಯಾಗುವ ಯಾವ ಯೋಚನೆ-ಯೋಜನೆ ನನಗೆ ಇರಲಿಲ್ಲ ಎಂದು ಹೇಳಿರುವ ಅಮಲಾ ಪೌಲ್, ನಾನು ಅನಿರೀಕ್ಷಿತವಾಗಿ ಗರ್ಭಿಣಿಯಾದೆ ಆಗ ನಮ್ಮ ಸಂಬಂಧಕ್ಕೆ ಒಂದು ಅಧಿಕೃತ ಮುದ್ರೆ ಒತ್ತಬೇಕು ಎಂದು ಇಬ್ಬರು ನಿರ್ಧಾರ ಮಾಡಿ ಮದುವೆಯಾದೆವು ಎಂದು ಹೇಳಿದ್ದಾರೆ.
ಜಗತ್ ಜೊತೆ ನನಗೆ ಮದುವೆ ನಿಶ್ಚಯವಾದಾಗ ಆ ಜ್ಯೋತಿಷಿಯ ಭವಿಷ್ಯದಂತೆಯೇ ನನಗೆ 32 ವರ್ಷವಾಗಿತ್ತು ಎಂದು ಹೇಳಿರುವ ಅಮಲಾ ಆ ಜ್ಯೋತಿಷಿ ನುಡಿದ ಆ ಭವಿಷ್ಯವಾಣಿ ಬಗ್ಗೆ ನನಗೆ ನಿಜಕ್ಕೂ ಅಚ್ಚರಿ ಇದೆ, ಅವರ ಮೇಲೆ ಗೌರವ ಕೂಡ ಹೆಚ್ಚಾಗಿದೆ ಎಂದು ಹೇಳಿದ್ಧಾರೆ. ಸದ್ಯ ಅಮಲಾ ಪೌಲ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಚರ್ಚೆಗೆ ಗ್ರಾಸವಾಗಿವೆ.

More from Filmibeat

English summary
Actress Amala Paul shares the shocking backstory of an astrologer’s prophecy. Discover why she didn't believe the prediction about her future partner at the time.
Read more about: amala paul astrology kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X