"ನಾನು ದಳಪತಿ ವಿಜಯ್‌ಗೆ ವೋಟ್ ಹಾಕಲ್ಲ"; 'ರೋಜಾ' ನಟ ಅರವಿಂದ್ ಸ್ವಾಮಿ ಕೊಟ್ಟ ಕಾರಣಕ್ಕೆ ಸಿಕ್ತಿದೆ ಭಾರೀ ಮೆಚ್ಚುಗೆ
ಸಿನಿಮಾ ಕಲಾವಿದರು ರಾಜಕೀಯರಂಗಕ್ಕೆ ಬರೋದು ಹೊಸದೇನಲ್ಲ. ಇಂದಿಗೂ ಸಾಕಷ್ಟು ನಟ ನಟ, ನಟಿಯರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಸಿಎಂ ಪಟ್ಟ ಅಲಂಕರಿಸಿದವರು ಇದ್ದಾರೆ. ತಮಿಳು ನಟ ದಳಪತಿ ವಿಜಯ್ ಅದೇ ಹಾದಿಯಲ್ಲಿದ್ದಾರೆ. ಆದರೆ ವಿಜಯ್‌ಗೆ ನಾನು ವೋಟ್ ಹಾಕಲ್ಲ ಎಂದು ನಟ ಅರವಿಂದ್ ಸ್ವಾಮಿ ಬಹಿರಂಗವಾಗಿ ಹಿಂದೆ ಹೇಳಿದ್ದರು.
60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಳಪತಿ ವಿಜಯ್ ಸೂಪರ್ ಸಕ್ಸಸ್ ಕಂಡಿದ್ದಾರೆ. ರಜನಿಕಾಂತ್ ಬಳಿಕ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರ ಲಿಸ್ಟ್‌ನಲ್ಲಿದ್ದಾರೆ. ಹಲವು ದಿನಗಳಿಂದ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಚರ್ಚೆ ನಡೀತಿತ್ತು. ಇದೀಗ ಅಧಿಕೃತವಾಗಿ ಪಕ್ಷ ಸ್ಥಾಪನೆ ವಿಚಾರವನ್ನು ಘೋಷಣೆ ಮಾಡಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎನ್ನುವ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ.

ದಳಪತಿ ವಿಜಯ್ ತಮಿಳುನಾಡು ರಾಜಕೀಯರಂಗಕ್ಕೆ ಧುಮುಕುತ್ತಿರುವುದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾಗಳಲ್ಲಿ ಜನನಾಯಕನ ಪಾತ್ರಗಳಲ್ಲಿ ನಟಿಸಿರುವ ವಿಜಯ್ ಭ್ರಷ್ಟಚಾರ ಹಾಗೂ ಭ್ರಷ್ಟ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಂತಹವರು ರಾಜಕೀಯಕ್ಕೆ ಬಂದರೆ ಜನರಿಗೆ ಒಳ್ಳೆಯದಾಗುತ್ತದೆ ಎನ್ನುವ ಅಭಿಪ್ರಾಯ ಕೆಲವರದ್ದು. ಅಭಿಮಾನಿಗಳಂತೂ ವಿಜಯ್ ಹೊಸ ಪರ್ವಕ್ಕೆ ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ.
ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ದಳಪತಿ ವಿಜಯ್ ಕಣ್ಣಿಟ್ಟಿದ್ದಾರೆ. ಆ ದಿಕ್ಕಿನಲ್ಲಿ ಪಕ್ಷವನ್ನು ಬಲಪಡಿಸಿ, ಜನರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ. ಸಿನಿಮಾ ನಟರೆಲ್ಲಾ ರಾಜಕೀಯರಂಗದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವೇ? ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆದು ಜೈಕಾರ ಹಾಕಿದವರು ವೋಟ್ ಹಾಕಿ ಗೆಲ್ಲಿಸುತ್ತಾರಾ? ಎನ್ನುವ ಪ್ರಶ್ನೆ ಶುರುವಾಗಿದೆ.
ಎಂಜಿಆರ್, ಎನ್‌ಟಿಆರ್, ಜಯಲಲಿತಾ ರೀತಿ ರಾಜಕೀಯರಂಗದಲ್ಲಿ ಭಾರೀ ಯಶಸ್ಸು ಗಳಿಸಿದವರು ಇದ್ದಾರೆ. ಅದೇ ರೀತಿ ಚಿರಂಜೀವಿ, ಪವನ್ ಕಲ್ಯಾಣ್, ಕಮಲ್ ಹಾಸನ್ ರೀತಿಯ ದಿಗ್ಗಜ ನಟರು ಸೋಲುಂಡಿದ್ದಾರೆ. ಇನ್ನು ದಳಪತಿ ವಿಜಯ್ ಪೊಲಿಟಿಕಲ್ ಎಂಟ್ರಿ ಬೆನ್ನಲ್ಲೇ ನಟ ಅರವಿಂದ ಸ್ವಾಮಿ ಹೇಳಿಕೆ ವೈರಲ್ ಆಗುತ್ತಿದೆ. ನೇರವಾಗಿಯೇ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ 'ರೋಜಾ' ನಟ ವಿಶ್ಲೇಷಿಸಿದ್ದಾರೆ.
ವಿಜಯ್ ಹೊಸ ಪಕ್ಷ ಸ್ಥಾಪನೆ ಬಗ್ಗೆ ಅರವಿಂದ ಸ್ವಾಮಿ ಮಾತನಾಡಿದ್ದಾರೆ. "ನಾನು ರಜನಿ ಸರ್ ಹಾಗೂ ಕಮಲ್ ಸರ್ ಅವರ ದೊಡ್ಡ ಅಭಿಮಾನಿ, ನನಗೂ ವಿಜಯ್ ಅಂದ್ರೆ ಇಷ್ಟ. ಹಾಗಂತ ನಾನು ವೋಟ್ ಹಾಕಲ್ಲ, ನಾನು ಹಾಕಬಾರದು ಕೂಡ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಹಾಕಲ್ಲ" ಎಂದಿದ್ದಾರೆ.
"ನೀವು ಹೇಳುವ ವಿಷಯದಲ್ಲಿ ಏನಾದರೂ ಬದಲಾವಣೆ ಇದ್ಯಾ? ಬದಲಾವಣೆ ಆಗುತ್ತಾ? ನಿಮ್ಮಿಂದ ಅದು ಸಾಧ್ಯವೇ? ನಿಮ್ಮ ಒಳ್ಳೆಯ ಉದ್ದೇಶ, ನಡೆ ನನಗೆ ಮೊದಲು ಗೊತ್ತಾಗಬೇಕು. ನೀವು ದೊಡ್ಡ ನಟ, ಆದರೆ ನಿಮಗೆ ಒಳ್ಳೆ ರಾಜಕೀಯ ನೀತಿಯನ್ನು ತರುವ ಅರ್ಹತೆ ಇದೆ ಎಂದು ನಾನು ಹೇಗೆ ನಂಬುವುದು? ಎಂದು ಅರವಿಂದ ಸಾಮಿ ಪ್ರಶ್ನಿಸಿದ್ದಾರೆ.
"ನಿಮಗೆ ಒಳ್ಳೆ ಉದ್ದೇಶ ಇರಬಹುದು. ನೀವು ಸಿನಿಮಾಗಳಲ್ಲಿ ಇಷ್ಟು ದಿನ ಜನರನ್ನು ಕಾಪಾಡಿರಬಹುದು. ಅದೇ ರೀತಿ ರಾಜಕೀಯರಂಗಕ್ಕೆ ಬಂದು ನೀವು ಜನರನ್ನು ಕಾಪಾಡುತ್ತೀನಿ ಎಂದುಕೊಂಡಿರಬಹುದು. ಎಲ್ಲಾ ಸ್ಟಾರ್ ನಟರಿಗೂ ಹೀಗೆ ಅನ್ನಿಸುತ್ತದೆ. ಆದರೆ ನೀವು ಒಂದು ರಾಜ್ಯದ ಸರ್ಕಾರ ನಡೆಸಲು, ನೀತಿಗಳನ್ನು ಜಾರಿಗೆ ತರಲು ನಿಮಗೆ ಎಷ್ಟು ತಿಳುವಳಿಕೆ ಇದೆ? ನಿಮ್ಮಿಂದ ಸಾಧ್ಯವಿಲ್ಲ ಎನ್ನುತ್ತಿಲ್ಲ, ಆದರೆ ನೀವು ಅದಕ್ಕೂ ಶ್ರಮಿಸಬೇಕು. ನಿಮ್ಮ ಸುತ್ತ ಒಳ್ಳೆ ಜನರು ಇರಬಹುದು, ಆದರೆ ಅವರು ಏನು ಒಳ್ಳೆಯದು ಮಾಡುತ್ತಾರೆ ಎಂದು ನೋಡುವುದಕ್ಕೆ, ಸಲಹೆ ನೀಡುವುದಕ್ಕೆ ನಾಯಕನಾಗಿ ನಿಮಗೆ ಒಂದಷ್ಟು ತಿಳುವಳಿಕೆ ಅವಶ್ಯಕ" ಎಂದಿದ್ದಾರೆ.
5 ವರ್ಷಗಳ ಹಿಂದೆ ಅರವಿಂದ ಸ್ವಾಮಿ ನೀಡಿದ್ದ ಈ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ. ಸ್ಟಾರ್ ನಟರು ರಾಜಕೀಯರಂಗ ಪ್ರವೇಶಿಸುವ ಬಗ್ಗೆ ಎದುರಾಗಿದ್ದ ಪ್ರಶ್ನೆಗೆ ಅಂದು ಅರವಿಂದ ಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದರು. ಸ್ಟಾರ್ ನಟ ರಾಜಕೀಯರಂಗಕ್ಕೆ ಬಂದರು ಎಂದ ಮಾತ್ರಕ್ಕೆ ವೋಟ್ ಹಾಕಬಾರದು ಎಂದು ಅರವಿಂದ ಸ್ವಾಮಿ ಹೇಳಿರುವುದು ನಿಜ. ಎಲ್ಲರೂ ಇದೇ ರೀತಿ ಆಲೋಚಿಸಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಎಲ್ಲರನ್ನು ಕಾಪಾಡಿದ್ದೀನಿ ಎನ್ನುವ ಒಬ್ಬ ನಟನಿಗೆ ಒಳ್ಳೆಯ ಸರ್ಕಾರಿ ನೀತಿಗಳನ್ನು ಮಾಡುವ ಹಕ್ಕಿದೆ ಎಂದು ನೀವು ಹೇಗೆ ನಂಬುತ್ತೀರಿ?'' ಎಂದು ಅರವಿಂದ್ ಸ್ವಾಮಿ ಅವರನ್ನು ಪ್ರಶ್ನಿಸಲಾಯಿತು. ಅರವಿಂದ್ ಹೇಳಿದರು.


Click it and Unblock the Notifications











