ಹೋಟೆಲ್‌ನಲ್ಲಿ ತ್ರಿಶಾ ಜೊತೆ ವಿಜಯ್ ರಹಸ್ಯ ವಾಸ ; ಸುಳ್ಳಾದರೆ ನನ್ನ ಮೇಲೆ ಕೇಸ್ ಹಾಕಲಿ - ದಳಪತಿಗೆ ಓಪನ್ ಚಾಲೆಂಜ್
ಮದುವೆ ಅನ್ನುವುದು ಅನೇಕ ಹೃದಯಗಳಿಗೆ ನವಿರಾದ ಕಂಪನ. ಮಧುರ ಬಂಧನವೊಂದಕ್ಕೆ ಬೆಸೆದುಕೊಳ್ಳುವ, ಬದುಕು ಹಂಚಿಕೊಳ್ಳುವ ಸಡಗರ ತರುವ ಅನುಬಂಧ. ಈ ಬಂಧಕ್ಕೆ ತಮ್ಮನ್ನು ಜೋಡಿಸಿಕೊಳ್ಳುವ ಕಣ್ಣುಗಳು ಕಾಣುವ ಕನಸುಗಳಿಗೆ ಕೊನೆ ಇಲ್ಲ.
ಆದರೆ, ಈಗ ಆಧುನಿಕ ಯುಗದಲ್ಲಿ ಎಲ್ಲವೂ ಸರಿಯಾಗಿದ್ದರೂ ಕೂಡ ಹೊಸ ಸಂಬಂಧಕ್ಕೆ ಅನೇಕರು ಹಾತೊರೆಯುತ್ತಾರೆ. ವಿವಾಹೇತರ ಸಂಬಂಧ ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆಯೂ ಅನೇಕರು ಭಾವಿಸುತ್ತಾರೆ. ಉದಾಹರಣೆಗೆ ಇಳಯ ದಳಪತಿ ವಿಜಯ್.

ಹೌದು, ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಮತ್ತು ತ್ರಿಶಾ ಸಂಬಂಧವನ್ನು ಮೊದಲಿಂದ ಹಲವರು ಅನುಮಾನದ ದೃಷ್ಟಿಯಿಂದ ನೋಡುತ್ತಾ ಬಂದಿದ್ದಾರೆ. ಸಂಗೀತಾ ಅವರ ಆರೋಪದಿಂದ ಈ ಅನುಮಾನ ನಿಜಾ ಆದಂತೆ ಇದೆ.
ಇದು ಸಾಲದು ಎಂಬಂತೆ ನಿನ್ನೆ (ಮಾರ್ಚ್ 5) ಮದುವೆ ಕಾರ್ಯಕ್ರಮದಲ್ಲಿ ತ್ರಿಶಾ ಜೊತೆ ವಿಜಯ್ ಭಾಗವಹಿಸಿದ್ದಾರೆ. ಒಂದೇ ಕಾರಿನಲ್ಲಿ ಬಂದಿಳಿದಿದ್ದಾರೆ. ಮ್ಯಾಚಿಂಗ್ ಡ್ರೆಸ್ ಬೇರೆ. ಬಹುಶಃ ತಮ್ಮ ಅನಧಿಕೃತ ಸಂಬಂಧವನ್ನು ಅಧಿಕೃತವನ್ನಾಗಿ ಘೋಷಿಸಲು ವಿಜಯ್ ತುದಿಗಾಲಿನಲ್ಲಿ ನಿಂತಂತೆ ಇದೆ.
ಹೀಗಿರುವಾಗ ಇದೀಗ ಬಿಜೆಪಿ ಮಾಜಿ ಕಾರ್ಯಕಾರಿಣಿ ಸದಸ್ಯ ತಿರುಚಿ ಸೂರ್ಯ, ತಿರುಚಿದ ಕಥೆಯಲ್ಲ, ಕಣ್ಣಾರೆ ಕಂಡ ಕಥೆ ಇದು ಎಂದು ವಿಜಯ್ ಮತ್ತು ತ್ರಿಶಾ ಹೋಟೆಲ್ ರಹಸ್ಯ ಹೇಳಿದ್ದಾರೆ. ಚೆನ್ನೈನ ನುಂಗಂಬಾಕ್ಕಂ (Nungambakkam) ಹೋಟೆಲ್‌ನಲ್ಲಿ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ವಾಸ ಮಾಡಿದ್ದರು ಎಂದಿದ್ದಾರೆ.
ಆಗಲೇ ಹೇಳಿದಂತೆ ತಿರುಚಿ ಸೂರ್ಯ, ಸತ್ಯವನ್ನು ತಿರುಚುತ್ತಿಲ್ಲ. ಇದೇ ಮಾತನ್ನು ಖುದ್ದು ಹೇಳಿರುವ ತಿರುಚಿ ಸೂರ್ಯ ನನ್ನ ಮಾತು ಸುಳ್ಳಾಗಿದ್ದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ವಿಜಯ್ ಮತ್ತು ತ್ರಿಶಾ ಹೂಡಬಹುದು ಎಂದು ಹೇಳಿದ್ದಾರೆ. ಅವರು ಇಬ್ಬರು ಹೋಟೆಲ್‌ನಲ್ಲಿ ವಾಸ ಮಾಡಿದ್ದರು ಎನ್ನುವುದಕ್ಕೆ ನನ್ನ ಬಳಿ ಪಕ್ಕಾ ಸಾಕ್ಷಿಗಳಿವೆ ಎಂದಿದ್ದಾರೆ. ಮಾನಹಾನಿ ಕೇಸ್ ನನ್ನ ಮೇಲೆ ಅವರು ಹೂಡಿದರೆ ನಾನು ಸಾಕ್ಷ್ಯವನ್ನು ನ್ಯಾಯಾಲಯದಲ್ಲಿ ನೀಡುತ್ತೇನೆ ಎಂದು ಕೂಡ ಹೇಳಿದ್ದಾರೆ.

ಸದ್ಯ ತಿರುಚಿ ಸೂರ್ಯ ಅವರ ಈ ಮಾತು, ಹಲವರ ಮನ ಕೆಡಿಸಿದೆ. ಇನ್ನೂ ನಿಮಗೆ ಗೊತ್ತು. ಕೆಲ ಒಮ್ಮೆ ಕೆಲ ಪೋಸ್ಟ್ ಗಳು, ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಗ್ರೆನೇಡ್‌ನಂತೆ ಬ್ಲಾಸ್ಟ್ ಆಗುತ್ತಾವೆ. ಆ ಮಾತು ಸತ್ಯ ಇರಲಿ, ಇಲ್ಲದಿರಲಿ, ತಾವು ಮಾಡಿದ ವಾದಕ್ಕೆ ಪೂರಕವಾಗಿ ಸಾಕ್ಷಿ ಇರಲಿ, ಇಲ್ಲದಿರಲಿ, ಕೆಲವೇ ಗಂಟೆಗಳಲ್ಲಿ ಪೋಸ್ಟ್ ಅಥವಾ ಹೇಳಿಕೆಗಳು ಹರಡುತ್ತವೆ. ಕೆಲವರನ್ನು ಕೆರಳಿಸುತ್ತವೆ. ಉರಿಯುವ ಬೆಂಕಿಗೆ ತುಪ್ಪವನ್ನು ಕೂಡ ಸುರಿಯುತ್ತವೆ. ತಿರುಚಿ ಸೂರ್ಯ ಅವರ ಹೇಳಿಕೆ ಸದ್ಯ ಈ ಕೆಲಸವನ್ನೇ ಮಾಡುತ್ತಿದೆ.
ಇದಕ್ಕೆ ಪುರಾವೆ ಎನ್ನುವಂತೆ ಸಾಕ್ಷ್ಯ ಒದಗಿಸಿ ಮಾತನಾಡಿ ಎಂದು ತಿರುಚಿ ಸೂರ್ಯ ಅವರ ಬಳಿ ಯಾರು ಕೇಳುತ್ತಿಲ್ಲ. ಬದಲಿಗೆ ಅಭಿಮಾನಿಗಳು ತಮ್ಮ ತಮ್ಮ ನಡುವೆ ಯುದ್ದ ಮಾಡಲು ಶುರು ಮಾಡಿದ್ದಾರೆ. ಇನ್ನೂ ಬದಲಾದ ಈ ಕಾಲದಲ್ಲಿ ಸತ್ಯಾಸತ್ಯತೆ ಪರಿಶೀಲನೆಗಿಂತಲೂ ವಿವಾದಗಳು ಬಹುಬೇಗ ವೇಗವಾಗಿ ಎಲ್ಲರನ್ನು ತಲುಪುತ್ತವೆ. ಸ್ಕ್ರೀನ್‌ಶಾಟ್‌ಗಳು, ಊಹಾಪೋಹಗಳು ಮತ್ತು ಆಧಾರರಹಿತ ಆರೋಪಗಳು, ಸತ್ಯ ಹೊರಬರುವ ಮೊದಲೇ ವ್ಯಾಪಕವಾಗಿ ಹರಡಿಬಿಡುತ್ತವೆ. ಅದರಲ್ಲಿಯೂ ಸೆಲೆಬ್ರಿಟಿಗಳ ಸುತ್ತ ಈ ತರಹದ ಮಾತುಗಳು ಕೇಳಿ ಬಂದಾಗ ಜನಸಾಮಾನ್ಯರ ಗಮನ ಹಲವು ಪಟ್ಟು ಹೆಚ್ಚಾಗುತ್ತದೆ.
ವಿಜಯ್ ಮತ್ತು ತ್ರಿಶಾ ವಿಚಾರದಲ್ಲಿ ಹೀಗೆ ಆಗಿದ್ದು, ತಿರುಚಿ ಸೂರ್ಯ ನಾನೇಳಿದ್ದು ಸುಳ್ಳಾದರೆ ಕೇಸ್ ಹಾಕುವಂತೆ ವಿಜಯ್‌ಗೆ ಸವಾಲು ಹಾಕಿದ್ದಾರೆ. ತಿರುಚಿ ಸೂರ್ಯ ಅವರ ಮಾತು ಸುಳ್ಳೆಂದು ಸಾಬೀತು ಮಾಡಲು ವಿಜಯ್ ಮತ್ತು ತ್ರಿಶಾ ಮುಂದಾಗುತ್ತಾರಾ..? ಅಥವಾ ಎಂದಿನಂತೆ ಮೌನಂ ಸಮ್ಮತಿ ಲಕ್ಷಣಂ ಎಂದು ಸುಮ್ಮನಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











