ವಿಜಯ್ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ ಎಂದ ನಟಿ ಅಕ್ಷರಾ ಗೌಡ

ಕನ್ನಡತಿಯಾದರೂ ತಮಿಳು, ತೆಲುಗಿನಲ್ಲಿ ಮಿಂಚುತ್ತಿರುವ ನಟಿ ಅಕ್ಷರಾ ಗೌಡ ದಳಪತಿ ವಿಜಯ್ ಸಿನಿಮಾ ದಲ್ಲಿ ನಟಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

ಶಿವಣ್ಣನ ಭೇಟಿ ಮಾಡ್ಬೇಕು ಅನ್ನೋದು ಅವನ ಕೊನೆ ಆಸೆ ಆಗಿತ್ತು | Shivanna | Filmibeat Kannada

ಖ್ಯಾತ ನಟ ವಿಜಯ್ ಜೊತೆ ಅಕ್ಷರಾ ಗೌಡ ಅವರು ತುಪಾಕಿ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ಅಕ್ಷರಾ ಗೌಡ ಗೆ ಸಹ ಹೆಸರು ತಂದು ಕೊಟ್ಟಿತು, ಆದರೂ ಅವರು ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ತುಪಾಕಿ ಸಿನಿಮಾ ಅಕ್ಷರಾ ಗೌಡ ಅವರ ಮೂರನೇ ಸಿನಿಮಾ ಆಗಿತ್ತು, ಸಿನಿಮಾದ ಸಣ್ಣ ಪಾತ್ರದಲ್ಲಿ ಅಕ್ಷರಾ ಗೌಡ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ನಟಿಸಬಾರದು ಎಂದು ಈಗ ಅಕ್ಷರಾ ಹೇಳುತ್ತಿರವುದಕ್ಕೆ ಕಾರಣವೂ ಇದೆ.

ಕಾಜಲ್ ಗೆಳತಿಯ ಪಾತ್ರಕ್ಕೆ ಕೇಳಲಾಗಿತ್ತಂತೆ

ಕಾಜಲ್ ಗೆಳತಿಯ ಪಾತ್ರಕ್ಕೆ ಕೇಳಲಾಗಿತ್ತಂತೆ

ಅಕ್ಷರಾ ಗೌಡ ಅವರನ್ನು ಸಿನಿಮಾ ತಂಡ ಮೊದಲ ಸಂಪರ್ಕಿಸಿದಾಗ ಅವರನ್ನು ನಾಯಕಿ ಕಾಜಲ್ ಅಗರ್ವಾಲ್ ಗೆಳತಿಯ ಪಾತ್ರಕ್ಕೆ ಕೇಳಲಾಗಿತ್ತಂತೆ, ಕತೆ ಹೇಳಿದಾಗ ಇದ್ದ ಪಾತ್ರಕ್ಕೂ ನಂತರ ಅವರ ಬಳಿಯಿಂದ ಮಾಡಿಸಿದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿತ್ತಂತೆ.

ಆ ಪಾತ್ರದಲ್ಲಿ ನಟಿಸಬಾರದಿತ್ತು: ಅಕ್ಷರಾ ಗೌಡ

ಆ ಪಾತ್ರದಲ್ಲಿ ನಟಿಸಬಾರದಿತ್ತು: ಅಕ್ಷರಾ ಗೌಡ

ಸಿನಿಮಾದಲ್ಲಿ ವಿಜಯ್ ನಾಯಕ, ನಿರ್ದೇಶಕ ಎ.ಆರ್.ಮುರುಗದಾಸ್ ಎಂಬ ಕಾರಣಕ್ಕಷ್ಟೆ ಹೆಚ್ಚು ಯೋಚಿಸದೆ ಆ ಸಿನಿಮಾದಲ್ಲಿ ನಾನು ನಟಿಸಿದೆ. ಆದರೆ ಆ ಪಾತ್ರ ನಾನು ಮಾಡಬಾರದಿತ್ತು ಎಂದು ಅಕ್ಷರಾ ಹೇಳಿದ್ದಾರೆ.

ಪಂಚತಂತ್ರ ಸಿನಿಮಾದಲ್ಲಿ ನಟಿಸಿರುವ ಅಕ್ಷರಾ ಗೌಡ

ಪಂಚತಂತ್ರ ಸಿನಿಮಾದಲ್ಲಿ ನಟಿಸಿರುವ ಅಕ್ಷರಾ ಗೌಡ

ಅಕ್ಷರಾ ಗೌಡ ಆ ನಂತರ ಕೆಲವಾರು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಹಿಂದಿಯ ರಂಗ್ರೇಜ್, ಅಜಿತ್ ಜೊತೆ ಆರಂಭಂ, ನಾಗಾರ್ಜುನ ನಟನೆಯ ಮನ್ಮತುಡು 2 ಜೊತೆಗೆ ಕನ್ನಡದ ಪಂಚತಂತ್ರ ಸಿನಿಮಾದಲ್ಲೂ ನಟಿಸಿದ್ದಾರೆ.

 ತ್ರಿವಿಕ್ರಮ ಸಿನಿಮಾದಲ್ಲಿ ನಟಿಸಿದ್ದಾರೆ

ತ್ರಿವಿಕ್ರಮ ಸಿನಿಮಾದಲ್ಲಿ ನಟಿಸಿದ್ದಾರೆ

ಪಂಚತಂತ್ರ ಮಾತ್ರವಲ್ಲದೆ ಪ್ರೇಮದಲ್ಲಿ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇನ್ನೂ ಬಿಡುಗಡೆ ಆಗದ ತ್ರಿವಿಕ್ರಮ ಕನ್ನಡ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇದರ ಜೊತೆಗೆ ತಮಿಳು-ತೆಲುಗಿನಲ್ಲಿ ಒಟ್ಟಿಗೆ ಬಿಡುಗಡೆ ಆಗಲಿರುವ ಸೂರ್ಪನಗೈ ಸಿನಿಮಾದಲ್ಲಿ ಸಹ ನಟಿಸಿದ್ದಾರೆ.

More from Filmibeat

English summary
Actress Akshara Gowda said i made mistake by acting in Thuppaki movie staring Vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X