ಅವರ ಮಗಳು ಎನಿಸಿಕೊಳ್ಳುವುದಕ್ಕಿಂತ ನನ್ನದೇ ಸ್ವಂತ ಐಡೆಂಟಿಟಿ ಇರಬೇಕು, ಹಣ ಸಂಪಾದಿಸಬೇಕು ಎಂದ ಎಆರ್ ರಹಮಾನ್ ಪುತ್ರಿ!

ಎಆರ್ ರಹಮಾನ್.. ಭಾರತ ಚಿತ್ರರಂಗ ಕಂಡ ಲೆಜೆಂಡರಿ ಮ್ಯೂಸಿಕ್ ಡೈರೆಕ್ಟರ್. ಅನೇಕ ಭಾಷೆಗಳ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಎಆರ್ ರಹಮಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕಟೀಜಾ ಹಾಗೂ ರಹೀಮಾ ಎಂಬ ಇಬ್ಬರು ಪುತ್ರಿಯರಿದ್ದು, ಅಮೀನ್ ಎಂಬ ಪುತ್ರ ಸಹ ಇದ್ದಾನೆ.

ಈ ಪೈಕಿ ಹಿರಿಯ ಪುತ್ರಿ ಕಟೀಜಾ ಹಾಗೂ ಪುತ್ರ ಅಮೀನ್ ತಂದೆಯಂತೆಯೇ ಸಂಗೀತದ ಕಡೆ ಒಲವನ್ನು ಬೆಳೆಸಿಕೊಂಡು ಗಾಯನವನ್ನು ವೃತ್ತಿಯನ್ನಾಗಿ ಆರಿಸಿಕೊಂಡಿದ್ದಾರೆ. ಇಬ್ಬರೂ ಸಹ ಚಲನಚಿತ್ರ ಗೀತೆಗಳಿಗೆ ದನಿ ನೀಡಿದ್ದಾರೆ. ಈ ಪೈಕಿ ಕಟೀಜಾ ಸಿನಿ ಜರ್ನಿ ವಿಶೇಷ ಮತ್ತು ಆಶ್ಚರ್ಯವೆನಿಸಲಿದೆ.

I want to earn money and fame myself says AR Rahmans daughter Khatija Rahman

ಹೌದು, ಎಆರ್ ರಹಮಾನ್ ಅವರ ಪುತ್ರಿ ಎಂಬ ಕಾರಣಕ್ಕೆ ಕಟೀಜಾಗೆ ಸುಲಭವಾಗಿ ಗುರುತಿಸುವಿಕೆ ಸಿಗಲಿಲ್ಲ. ಅಲ್ಲದೇ ಕಟೀಜಾ ತಂದೆಯ ಹೆಸರನ್ನು ಬಳಸದೇ ಸ್ವಂತವಾಗಿ ಹೆಸರು ಮಾಡಬೇಕು ಎಂದು ಪಣತೊಟ್ಟು ಶ್ರಮ ಹಾಕಿದವರು. ಹೀಗಿದ್ದರೂ ಸಹ ಕಟೀಜಾ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವಿರೋಧ ಹಾಗೂ ಟೀಕೆಗಳನ್ನು ಎದುರಿಸಿದರು.

ವಿಪರ್ಯಾಸವೆಂದರೆ ಕಟೀಜಾ ರಹಮಾನ್ ಸಹ ಇತರೆ ಕಲಾವಿದರ ಹಾಗೆ 'ಇಂಪೋಸ್ಟರ್ ಸಿಂಡ್ರೋಮ್' ಅನುಭವಿಸಿದ್ದರು. ಹೌದು, ಕಲಾವಿದನೋರ್ವನ/ಳ ಕಲೆಯ ಬಗ್ಗೆ ಅನುಮಾನಿಸುವುದನ್ನು ಇಂಪೋಸ್ಟರ್ ಸಿಂಡ್ರೋಮ್ ಎನ್ನುತ್ತಾರೆ. ಹೀಗೆ ಎಷ್ಟೆಲ್ಲಾ ಟೀಕೆಗಳು, ಅನುಮಾನಗಳು ತನ್ನ ವಿರುದ್ಧ ವ್ಯಕ್ತವಾದರೂ ತಲೆ ಕೆಡಿಸಿಕೊಳ್ಳದ ಕಟೀಜಾ ತನ್ನ ಸ್ವಂತ ಕಾಲಿನ ಮೇಲೆ ತಾನು ನಿಲ್ಲಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

ಸದ್ಯ ಈ ಕುರಿತು ಬ್ರಂಟ್ ನಡೆಸಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಕಟೀಜಾ ರಹಮಾನ್ ತಾವು ಎದುರಿಸುತ್ತಿರುವ ಕಷ್ಟ ಹಾಗೂ ತಾವು ಸಾಧಿಸಬೇಕಾಗಿರುವ ಗುರಿಗಳೇನು ಎಂಬುದನ್ನು ಹೇಳಿಕೊಂಡಿದ್ದಾರೆ.

ನಾನು ನನ್ನ ಸ್ವಂತ ಗುರುತಿಸುವಿಕೆ ಹಾಗೂ ದನಿಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ಮಾತನ್ನು ಆರಂಭಿಸಿದ ಕಟೀಜಾ ರಹಮಾನ್ ತಾನು ಯಾರೊಬ್ಬರ ಮಗಳು ಅಥವಾ ಪತ್ನಿ ಎಂದು ಮಾತ್ರವಷ್ಟೇ ಗುರುತಿಸಿಕೊಳ್ಳಲು ಇಷ್ಟವಿಲ್ಲ, ಅದಕ್ಕಿಂತ ಏನಾದರೂ ಹೆಚ್ಚಿನ ಸಾಧನೆ ಮಾಡಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ಅರ್ಧದಷ್ಟು ಕಾಮೆಂಟ್ ಕೆಟ್ಟದಾಗಿಯೇ ಬರಲಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ ಕಟೀಜಾ ಇದಕ್ಕೆಲ್ಲಾ ನಾನು ತಯಾರಾಗಿದ್ದೇನೆ ಎಂದೂ ಸಹ ಉಲ್ಲೇಖಿಸಿದ್ದಾರೆ.

ಇನ್ನೂ ಮುಂದುವರಿದು ತನ್ನೆರಡು ಹಾಡುಗಳಾದ ಫರಿಸ್ತಾ ಹಾಗೂ ಅಮ್ನಾ ಬೀಬಿ ಬಗ್ಗೆ ಮಾತನಾಡಿದ ಕಟೀಜಾ ರಹಮಾನ್ ಫರಿಷ್ತಾ ಇದು ನನ್ನ ಎದೆಯಿಂದ ಬಂದ ಪ್ರಾರ್ಥನೆ, ಗುಣಮುಖವಾಗಿರುವ ಪ್ರಪಂಚಕ್ಕೆ ಮಾಡಿದ ಮನವಿ ಅದು ಎಂದರು. ಇದು ಒಂಟಿ ಮಹಿಳೆ ತನ್ನ ಜೀವನದ ಬಗ್ಗೆ ಹಾಡುವ ಹಾಡಾಗಿತ್ತು. ಇನ್ನು ಅಮ್ನಾ ಬೀಬಿಯಲ್ಲಿ ಮಗಳ ಜತೆ ತಾಯಿಯ ಬದಲಾಗಿ ತಂದೆ ಹಾಡುವ ಬಾಂಧವ್ಯದ ಹಾಡಾಗಿತ್ತು.

ಅಲ್ಲದೇ ತಾನು ಆರ್ಥಿಕವಾಗಿ ಬೆಳೆಯಬೇಕು ಎಂಬ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ ಕಟೀಜಾ ರಹಮಾನ್ ನೀವು ಸ್ವಂತವಾಗಿ ಹತ್ತು ರೂಪಾಯಿ ಸಂಪಾದನೆ ಮಾಡಿ, ನೂರು ರೂಪಾಯಿ ಸಂಪಾದನೆ ಮಾಡಿ ಅದು ನಿಮಗೆ ತುಂಬಾ ತೃಪ್ತಿಯನ್ನು ನೀಡುತ್ತದೆ ಎಂದು ಹೇಳಿದರು. ಇದನ್ನೇ ತಮ್ಮ ತಂದೆ ಕಲಿಸುತ್ತಾ ಬಂದಿದ್ದಾರೆ ಎನ್ನುವ ಕಟೀಜಾ ತಾನೇ ಸ್ವಂತವಾಗಿ ಹಣ ಸಂಪಾದನೆ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ.

ಇಷ್ಟೇ ಅಲ್ಲದೇ 14ನೇ ವಯಸ್ಸಿಗೆ ತನ್ನ ಮೊದಲ ಹಾಡನ್ನು ಬಿಡುಗಡೆ ಮಾಡಿದ ಕಟೀಜಾ ಆ ಸಮಯದಲ್ಲಿ ತನಗೆ ಬಂದ ಖ್ಯಾತಿಯನ್ನು ಸಹ ಹೇಗೆ ನಿಭಾಯಿಸಬೇಕು ಎಂದು ತಿಳಿದಿರಲಿಲ್ಲ ಎಂದು ಹೇಳಿದರು. ಬಳಿಕ ಏಳು ವರ್ಷಗಳ ಅಂತರ ತೆಗೆದುಕೊಂಡ ಕಟೀಜಾ ಎಂದಿರನ್ ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆಯಷ್ಟೆ ಬಿಡುಗಡೆಗೊಂಡ ಪೊನ್ನಿಯಿನ್ ಸೆಲ್ವನ್ 2 ಚಿತ್ರದವರೆಗೂ ಹಲವಾರು ಚಿತ್ರಗಳಲ್ಲಿ ಹಾಡನ್ನು ಹಾಡಿದ್ದಾರೆ. ಖಟೀಜಾ ಹೇಳಿರುವ ಈ ಮಾತುಗಳನ್ನು ಕೇಳಿದ ನೆಟ್ಟಿಗರು ಆಕೆಯ ಗುರಿ ಈಡೇರಲಿ ಎಂದು ಶುಭ ಹಾರೈಸಿದ್ದಾರೆ.

More from Filmibeat

English summary
I want to earn money and fame myself says AR Rahman's daughter Khatija Rahman. Read on
Read more about: ar rahman tamil ತಮಿಳು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X