ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಮಾಡಲು ರಜನಿ ಮಗಳೇ ಕಾರಣ ಎಂದ ಮನೆ ಕೆಲಸಗಾರ್ತಿ!
ಕಳೆದ ವಾರ ರಜನಿಕಾಂತ್ ಮಗಳು ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಕಳ್ಳತನವಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಮನೆಯ ಲಾಕರ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿಯ ಚಿನ್ನ ಕಾಣದಿದ್ದ ಕಾರಣ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುವಿಟ್ಟುಕೊಂಡಿದ್ದ ಪೊಲೀಸರಿಗೆ ಲಾಕರ್‌ನಲ್ಲಿದ್ದ ಚಿನ್ನಾಭರಣ ಕಳುವಾದ ಬಳಿಕವೂ ಲಾಕರ್ ಅನ್ನು ನೀಟಾಗಿ ಲಾಕ್ ಮಾಡಿ ಇಡಲಾಗಿದೆ ಎಂದರೆ ಇದು ಮನೆಯೊಳಗಿನ ಕಳ್ಳರೇ ಮಾಡಿರುವ ಕಳ್ಳತನ ಎಂಬುದು ತಿಳಿದುಬಿಟ್ಟಿತ್ತು.

ಅದೇ ಹಾದಿಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಮನೆಯ ಕೆಲಸಗಾರ್ತಿಯ ಖಾತೆಗೆ ದೊಡ್ಡ ಮೊತ್ತ ಜಮಾ ಆಗಿರುವುದು ಆಕೆಯೇ ಕಳ್ಳಿ ಎಂಬ ಸುಳಿವನ್ನು ನೀಡಿತ್ತು. ಅದರಂತೆ ವಿಚಾರಣೆ ನಡೆಸಿದಾಗ ಕೆಲಸಗಾರ್ತಿ ಈಶ್ವರಿ ಸತ್ಯವನ್ನು ಯಾವುದೇ ಹಿಂದೇಟು ಹಾಕದೇ ಒಪ್ಪಿಕೊಂಡಿದ್ದಾಳೆ. ಈ ವಿಚಾರಣೆ ವೇಳೆ ಆಶ್ಚರ್ಯವಾಗುವಂತಹ ಮಾಹಿತಿಯನ್ನೂ ಸಹ ಬಿಚ್ಚಿಟ್ಟಿದ್ದಾಳೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದಿಯಲು ರಜನಿಕಾಂತ್ ಪುತ್ರಿ ಐಶ್ವರ್ಯ ಅವರೇ ಕಾರಣ ಎಂದು ಈಶ್ವರಿ ತಿಳಿಸಿದ್ದಾಳೆ. ಹೌದು, ತಾನು ಎಷ್ಟೇ ಕಷ್ಟ ಪಟ್ಟು ದುಡಿದರೂ ಸಹ ತನಗೆ ತಕ್ಕನಾದ ಸಂಬಳ ನೀಡುತ್ತಿರಲಿಲ್ಲ, ದನದಂತೆ ಕೆಲಸ ಮಾಡಿದರೂ ಕಡಿಮೆ ಸಂಬಳ ನೀಡುತ್ತಿದ್ದ ಕಾರಣದಿಂದಲೇ ಕಳ್ಳತನ ಮಾಡಿದೆ ಎಂದು ಈಶ್ವರಿ ತಿಳಿಸಿದ್ದಾಳೆ. ಈ ಕಾರಣವೇ ತನ್ನನ್ನು ಕಳ್ಳತನ ಮಾಡುವಂತೆ ಪ್ರೇರೇಪಿಸಿತು ಎಂದು ತಿಳಿಸಿದ್ದಾಳೆ.
ಇನ್ನು ಪೊಲೀಸರು ಕೆಲಸ ಮಾಡಿದ್ದಕ್ಕಾಗಿ ನಿನಗೆ ಎಷ್ಟು ಸಂಬಳ ನೀಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಿ 30 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದರು ಎಂದು ಉತ್ತರಿಸಿದ್ದಾಳೆ. ಇನ್ನು ರಜನಿ ಮಗಳ ಮನೆಯಲ್ಲಿ ಹದಿನೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತನಗೆ ಅವರು ಲಾಕರ್‌ನಲ್ಲಿ ಏನು ಇಡುತ್ತಿದ್ದರು ಹಾಗೂ ಅದರ ಕೀ ಎಲ್ಲಿ ಇಡುತ್ತಿದ್ದರು ಎಂಬುದು ತಿಳಿದಿತ್ತು. ಹೀಗಾಗಿ ಮೊದಲಿಗೆ ಸ್ವಲ್ಪ ಚಿನ್ನಾಭರಣವನ್ನು ಕದ್ದೆ, ಬಳಿಕ ಹೆಚ್ಚೆಚ್ಚು ಚಿನ್ನಾಭರಣವನ್ನು ಕದ್ದು, ಸಂಪೂರ್ಣ ಲಾಕರ್ ಖಾಲಿ ಮಾಡಿದೆ ಎಂದು ಈಶ್ವರಿ ತಿಳಿಸಿದ್ದಾಳೆ.
ಇನ್ನು ಈ ಕದ್ದ ಚಿನ್ನಾಭರಣವನ್ನು ಮಾರಿ ಬಂದ ಹಣದಿಂದ 95 ಲಕ್ಷ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದೆ ಎಂದ ಈಶ್ವರಿ ಕಾರು ಚಾಲಕ ವೆಂಕಟಾಚಲನ್ ಸಹಾಯದಿಂದ ಸುಮಾರು ನಾಲ್ಕು ವರ್ಷಗಳಲ್ಲಿ ಎಲ್ಲಾ ಆಭರಣವನ್ನು ಕದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟೆಲ್ಲಾ ತಪ್ಪನ್ನು ಕೊಂಚವೂ ಹೆದರದೇ ಹಾಗೂ ಹಿಂದೇಟು ಹಾಕದೇ ಹೇಳಿಕೊಂಡರುವ ಈಶ್ವರಿ ಮನೆಯರಿಗೆ ಆಭರಣ ಕಳುವಾಗಿರುವ ವಿಷಯ ತಿಳಿಯದೇ ಹೋಗಿದ್ದರೆ ಇನ್ನಷ್ಟು ಕಳ್ಳತನ ಮಾಡುತ್ತಿದ್ದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾಳೆ. ಒಟ್ಟಿನಲ್ಲಿ ತಿಂಗಳಿಗೆ 30 ಸಾವಿರ ಸಂಬಳ ಸಾಕಾಗದ ಕಾರಣ ಕೆಲಸಗಾರ್ತಿ ಈಶ್ವರಿ ಈ ಕಳ್ಳತನ ಮಾಡಿದೆ ಎಂದು ರಾಜರೋಷವಾಗಿ ತಿಳಿಸಿದ್ದಾಳೆ.
ಇನ್ನು ಈಶ್ವರಿ ಚಿನ್ನಾಭರಣವನ್ನು ಮಾರಾಟ ಮಾಡಿದ್ದ ಕೆಲ ಜ್ಯೂವೆಲ್ಲರ್ಸ್ ಅಂಗಡಿಗಳಿಗೂ ಸಹ ಭೇಟಿ ನೀಡಿರುವ ಚೆನ್ನೈ ಪೊಲೀಸರು ನೂರು ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಕೆಲಸಗಾರ್ತಿ ಈಶ್ವರಿ ನೀಡಿದ ಈ ಹೇಳಿಕೆ ಇಡೀ ಪ್ರಕರಣಕ್ಕೆ ಶಾಕಿಂಗ್ ತಿರುವನ್ನು ನೀಡಿದ್ದು, ಇದನ್ನು ಸಿನಿಮಾ ಮಾಡಬಹುದು ನೋಡಿ, ಇಂತಹ ದ್ರೋಹ ಬಗೆಯುವವರು ನಾಲ್ಕು ವರ್ಷಗಳಿಂದ ಕಂಡು ಹಿಡಿಯಲು ಆಗದ ನೀವೇ ಯಾಕೆ ಈ ಕಥೆಗ ಹಣ ಹೂಡಿ ಚಿತ್ರ ನಿರ್ಮಿಸಬಾರದು ಎಂದು ನೆಟ್ಟಿಗರು ಐಶ್ವರ್ಯ ರಜನಿಕಾಂತ್ ಅವರ ಕಾಲೆಳೆದಿದ್ದಾರೆ.


Click it and Unblock the Notifications











