For Quick Alerts
  ALLOW NOTIFICATIONS  
  For Daily Alerts

  ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ

  |

  ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಮಿಳಿನ ಖ್ಯಾತ ನಟ ವಿಜಯ್ ಮತ್ತು ಬಿಗಿಲ್ ಚಿತ್ರತಂಡದ ಹಣಕಾಸುದಾರ ಮೇಲೆ ನಡೆದ ಐಟಿ ದಾಳಿಯ ಶೋಧ ಇನ್ನು ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ನಟ ವಿಜಯ್ ಮನೆ ಮತ್ತು ಆಫೀಸ್ ಸೇರಿದಂತೆ ಸಾಕಷ್ಟು ಕಡೆ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿರುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಬಿಗಿಲ್ ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರು, ವಿತರಕರು ಮತ್ತು ಕಣಕಾಸುದಾರರು ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈ ಹಾಗೂ ಮಧುರೈ ಸೇರಿದಂತೆ ಸುತ್ತಮುತ್ತ ಒಟ್ಟು 38 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು ಒಟ್ಟು 77 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  ತಮಿಳು ನಟ ವಿಜಯ್ ಐಟಿಗೆ 'ಟಾರ್ಗೆಟ್' ಆಗಲು ಕಾರಣ ಆ 65 ಕೋಟಿತಮಿಳು ನಟ ವಿಜಯ್ ಐಟಿಗೆ 'ಟಾರ್ಗೆಟ್' ಆಗಲು ಕಾರಣ ಆ 65 ಕೋಟಿ

  ನಟ ವಿಜಯ್ ಮಾಸ್ಟರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿದ್ದರು. ಚಿತ್ರೀಕರಣ ಸೆಟ್ ಗೆ ಬೇಟಿ ನೀಡಿದ ಐಟಿ ಅದಿಕಾರಿಗಳು ಸೆಟ್ ನಲ್ಲಿಯೆ ವಿಜಯ್ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಗಿಲ್ ಸಿನಿಮಾದ ಫೈನಾನ್ಶಿಯರ್ ಅನ್ಬು ಚೆಲಿಯಾನ್ ಮತ್ತು ನಟ ವಿಜಯ್ ನಡುವಿನ ಹಣದ ವಹಿವಾಟು ಬಗ್ಗೆ ಸರಿಯಾದ ಲೆಕ್ಕ ಸಿಗದ ಕಾರಣ, ವಿಜಯ್ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

  ಆದರೆ ವಿಜಯ್ ನಿವಾಸದಲ್ಲಿ ಹಣ ವಶಪಡಿಸಿ ಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ವಿಜಯ್ ಗೆ ಸಂಬಂಧಿಸದ ಚರಾಸ್ತಿ ಮತ್ತು ಮತ್ತು ನಿರ್ಮಾಪಕರಿಂದ ಪಡೆದ ಸಂಭಾವನೆಯ ಬಗ್ಗೆ ತನಿಖೆನಡೆಸಲಾಗುತ್ತಿದೆಯಂತೆ. ಬಿಗಿಲ್ ವಿಜಯ್ ನಟಿಸಿ, ಅಟ್ಲಿ ನಿರ್ದೇಶನ ಮಾಡಿದ್ದ ಬಿಗಿಲ್ ಸಿನಿಮಾ. ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿತ್ತು. 150 ಕೋಟಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಸುಮಾರು 250 ಕೋಟಿ ಬಿಸಿನೆಸ್ ಮಾಡಿತ್ತು ಎನ್ನಲಾಗಿದೆ.

  English summary
  Income Tax Officials Seize 77 Crores From Bigil’s Financier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X