ರಜಿನಿ-ಕಮಲ್ ಎದುರು ಎರಡನೇ ಮದುವೆಯಾದ ಶಂಕರ್ ಪುತ್ರಿ ಐಶ್ವರ್ಯ ; ಹುಡುಗ ಯಾರು..?
ಪ್ರೀತಿ ಸುಲಭಕ್ಕೆ ದಕ್ಕುವುದಿಲ್ಲ. ಅಪ್ಪಿ..ತಪ್ಪಿ.. ದಕ್ಕಿದರು ಕೂಡ ಕೆಲವರ ಬದುಕಿನಲ್ಲಿ ಹೆಚ್ಚು ದಿನ ಉಳಿಯಲ್ಲ. ಇದಕ್ಕೆ ದಕ್ಷಿಣವಷ್ಟೇ ಅಲ್ಲ, ಭಾರತ ಕಂಡ ಅತ್ಯುತ್ತಮ ನಿರ್ದೇಶಕ ಶಂಕರ್ ಅವರ ಮಗಳು ಐಶ್ವರ್ಯ ಸದ್ಯದ ಅತ್ಯುತ್ತಮ ಉದಾಹರಣೆ.
ಹೌದು, ನಿಮಗೆ ನೆನಪಿದ್ದರೆ .. ಈಗ್ಗೆ ಕೆಲ ವರ್ಷದ ಹಿಂದೆ ಅಂದರೆ ಕೊರೊನಾದ ಕಾಲಘಟ್ಟದಲ್ಲಿ, ಜೆಂಟಲ್ ಮನ್ .. ಕಾದಲನ್ .. ಇಂಡಿಯನ್ .. ಜೀನ್ಸ್ .. ಬಾಯ್ಸ್ .. ಅನಿಯನ್ .. ಶಿವಾಜಿ .. ಪ್ರಸ್ತುತ ಇಂಡಿಯನ್ 2 ಸೇರಿ ಹತ್ತಾರು ಚಿತ್ರ ನಿರ್ದೇಶಿಸಿರುವ ಶಂಕರ್ ಷಣ್ಮುಗಂ, ತಮ್ಮ ಮುದ್ದಾದ ಮಗಳು ಐಶ್ವರ್ಯ ಅವರ ಕೈಯನ್ನ,ಕ್ರಿಕೆಟ್ ಪ್ಲೇಯರ್ ದಾಮೋದರ್ ರೊಹೀತ್ ಕೈಗೆ ಕೊಟ್ಟಿದ್ದರು. ಅದ್ಧೂರಿಯಾಗಿ ಅಲ್ಲದಿದ್ದರೂ ವಿಜೃಂಭಣೆಯಿಂದ ಮದುವೆ ಮಾಡಿ ಕೊಟ್ಟಿದ್ದರು. ಮದುವೆಗೆ ಹತ್ ಹತ್ರ ಹತ್ತು ಕೋಟಿಯನ್ನ ಖರ್ಚು ಮಾಡಿದ್ದರು.

ಆದರೆ, ದುರಾದೃಷ್ಟವಶಾತ್ .. ಆ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೆಲವೇ ದಿನದಲ್ಲಿ ಸಂಬಂಧ ಮುರಿದು ಬಿತ್ತು. ಯಾಕೆಂದರೆ ಪುದುಚೇರಿ ಕ್ರಿಕೆಟ್ ತಂಡದ ನಾಯಕನಾಗಿದ್ದ ದಾಮೋದರ್ ರೊಹೀತ್ ವಿರುದ್ದ ಮದುವೆಯಾದ ವರ್ಷದಂದೇ ಅಂದರೆ 2021ರಲ್ಲಿಯೇ 16 ವರ್ಷದ ಯುವತಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣವನ್ನ ಕೂಡ ದಾಖಲಿಸಿಕೊಂಡಿದ್ದರು.
ಆ ನಂತರ ದಾಮೋದರ್ ರೊಹೀತ್ ಕೈಗೆ ವಿಚ್ಚೇದನದ ಅರ್ಜಿಯನ್ನ ಕೊಟ್ಟು ಬಂದಿದ್ದ ಶಂಕರ್ ಪುತ್ರಿ ಐಶ್ವರ್ಯ ಈಗ ಮೂರು ವರ್ಷದ ನಂತರ, ಹೊಸ ಬದುಕಿಗೆ ಮತ್ತೊಮ್ಮೆ ಮುನ್ನುಡಿ ಬರೆದಿದ್ದಾರೆ. ತರುಣ್ ಕಾರ್ತಿಕೇಯನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನೂ ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್.. ಸಕಲಕಲಾವಲ್ಲಭ ಕಮಲ್ ಹಾಸನ್.. ಸೂರ್ಯ.. ಚಿಯಾನ್ ವಿಕ್ರಮ್.. ಮಣಿರತ್ನಂ.. ಸುಹಾಸಿನಿ.. ನಯನತಾರಾ.. ವಿಘ್ನೇಶ್ ಶಿವನ್.. ಹೀಗೆ ಅನೇಕ ಧ್ರುವ ತಾರೆಯರು ಭಾಗಿಯಾಗಿದ್ದರು. ನವ ಜೋಡಿಗೆ ಶುಭಾಶಯವನ್ನ ಕೋರಿ, ಆಶೀರ್ವದಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎಂ.ಕೆ.ಸ್ಟಾಲಿನ್ ಕೂಡ ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಬಂದು ವಧುವರನನ್ನ ಹರಸಿ ಹಾರೈಸಿದರು. ಕೇವಲ ಇವರಷ್ಟೇ ಅಲ್ಲ ಚಿತ್ರರಂಗ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಇನ್ನೂ ಅನೇಕರು ಮದುವೆಯಲ್ಲಿ ಭಾಗಿಯಾಗಿದ್ದರು

ಒಟ್ನಲ್ಲಿ ಮದುವೆಯಾದ ಮೂರೇ ತಿಂಗ್ಳಿಗೆ ಮೊದಲ ಗಂಡ ದಾಮೋದರ್ ರೊಹೀತ್ ನಿಜವಾದ ಬಣ್ಣವನ್ನ ಅರಿತು ಬೆಚ್ಚಿ ಬಿದ್ದಿದ್ದ ಶಂಕರ್ ಪುತ್ರಿ ಐಶ್ವರ್ಯ, ಇದೀಗ ಹಳೆಯದನ್ನೆಲ್ಲ ಮರೆತು ಹೊಸ ಬದುಕನ್ನ ಪ್ರಾರಂಭ ಮಾಡಿದ್ದಾರೆ. ಎರಡನೇ ಮದುವೆಯಾಗಿದ್ದಾರೆ. ಐಶ್ವರ್ಯ ಮತ್ತು ತರುಣ್ ಕಾರ್ತಿಕೇಯನ್ ಅವರ ಈ ಪವಿತ್ರ ಸಂಬಂಧಕ್ಕೆ ಯಾರ ಕಣ್ಣು ಬೀಳದೇ ಇರಲಿ, ನಿಮ್ಮ ಆಶೀರ್ವಾದ ಈ ನವ ಜೋಡಿಯ ಮೇಲಿರಲಿ.


Click it and Unblock the Notifications











