Indian 2 Trailer- ಭ್ರಷ್ಟರ ವಿರುದ್ಧ ಮಾರುವೇಷದ ಮಾಸ್ಟರ್, ಹೇಗಿದೆ ಸೇನಾಪತಿಯ ಸಮರ..?

ಸಕಲ ಕಲಾವಲ್ಲಭ.. ಉಲಗನಾಯಗನ್.. ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರಲ್ಲೊಬ್ಬರು. ರಾಜಕಾರಣ.. ರಿಯಾಲಿಟಿ ಶೋ.. ಸಿನಿಮಾ.. ಹೀಗೆ ಮೂರು ಮೂರು ದೋಣಿಯ ನಾವಿಕನಾದ ಈ ಮಹಾನಾಯಕ ಅಭಿನಯದ ಇಂಡಿಯನ್ 2 ಚಿತ್ರದ ಟ್ರೇಲರ್ ಸದ್ಯಕ್ಕೆ ಬಿಡುಗಡೆಯಾಗಿದೆ. ವ್ಯಾಪಕವಾದ ಸದ್ದನ್ನೂ ಮಾಡುತ್ತಿದೆ.

ಭಾಷೆಯ ಭೇದ ಭಾವ ಇಲ್ಲದೇ ಎಲ್ಲ ವರ್ಗದ ಸಿನಿಮಾ ಪ್ರಿಯರು ಕಾಯುತ್ತಿರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತೊಮ್ಮೆ ತಮ್ಮ ವಿಶ್ವರೂಪದ ಪ್ರದರ್ಶನ ಮಾಡಿದ್ದಾರೆ. ಹತ್ತಾರು ತರಹದ ಅವತಾರವೆತ್ತಿದ್ದಾರೆ. ಇನ್ನೂ.. ಕಮಲ್ ಹಾಸನ್ ಅವರಿಗೆ ಈಗ 69ರ ಪ್ರಾಯ. ಈ ವಯಸ್ಸಿನಲ್ಲಿಯೂ ಕಮಲ್ ಸಾಹಸದಲ್ಲಿ ಕಮಾಲ್ ಮಾಡಿದ್ದಾರೆ. ಅವರ ಎನರ್ಜಿ ಮೆಚ್ಚುವಂತಹದ್ದೇ. ಅದರಲ್ಲಿಯೂ ಆ ಶರ್ಟ್ ಲೆಸ್ ಫೈಟ್ ಬೆಳ್ಳಿ ತೆರೆಯಲ್ಲಿ ಬಂದಾಗ ಜನ ಹುಚ್ಚೆದ್ದು ಕುಣಿಯುವುದು ಪಕ್ಕಾ.

indian-2-trailer-kamal-haasan-returns-with-spectacular-impact

ಇನ್ನೂ ಎಲ್ಲರಿಗೂ ಗೊತ್ತಿರುವಂತೆ ಇಂಡಿಯನ್ 2 1996ರ ಕಲ್ಟ್ ಸಿನಿಮಾ ಇಂಡಿಯನ್ ಚಿತ್ರದ ಮುಂದುವರೆದ ಭಾಗ. ಅಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಕಮಲ್ ಹಾಸನ್ ಸಮರ ಸಾರಿದ್ದರು. ಆ ಸಮರ ಎರಡೂವರೆ ದಶಕದ ನಂತರ ಮತ್ತೊಮ್ಮೆ ಆರಂಭವಾಗಿದೆ. ನಿರುದ್ಯೋಗ.. ಭಾರಿ ತೆರಿಗೆ ಹೊರೆ.. ಮೂಲಭೂತ ಸೌಲಭ್ಯಗಳ ಕೊರತೆ.. ದೊಡ್ಡ ದೊಡ್ಡವರ ದೊಂಬರಾಟ.. ರಾಜಕೀಯದವರ ಮೇಲಾಟ.. ಭಾರತದ ಜನಸಾಮಾನ್ಯರು ಅನುದಿನ, ಅನು ಕ್ಷಣ ಎದುರಿಸುತ್ತಿರುವ ನಾನಾ ಸಮಸ್ಯೆಯ ವಿರುದ್ಧ ಕಮಲ್ ಹಾಸನ್ ಇಲ್ಲಿ ಯುದ್ಧವನ್ನ ಸಾರಿದ್ದಾರೆ. ಅಹಿಂಸೆಯ ದಾರಿಯನ್ನು ತುಳಿಯದೇ ಉಗ್ರ ರೂಪ ತಾಳಿದ್ದಾರೆ.

ಅಂದ್ಹಾಗೇ ಕಮಲ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಈ ಜುಲೈ 12ಕ್ಕೆ ತೆರೆಗೆ ಬರುತ್ತಿರುವ ಇಂಡಿಯನ್ 02 ಶುರುವಾಗಿದ್ದು 2019ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಹತ್ತಾರು ಅಡಚಣೆಗಳು ಈ ಚಿತ್ರಕ್ಕೆ ಎದುರಾಗುತ್ತಲೇ ಇದ್ದವು. ಮೇಕಪ್ ಮತ್ತು ಇನ್ನಿತರೆ ತಾಂತ್ರಿಕ ಕಾರಣಗಳಿಂದಾಗಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿಯೂ ಈ ಹಿಂದೆ ಹಬ್ಬಿತ್ತು. ಬಂಡವಾಳದ ಕೊರತೆಯಿಂದ ನಿಂತು ಹೋಗಿದೆ ಎಂಬ ಸುದ್ದಿಯೂ ಹರಡಿಕೊಂಡಿತ್ತು. ಇದೆಲ್ಲದರ ನಡುವೆ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ಅವಘಡ ನಡೆದು ಸ್ಥಳದಲ್ಲಿಯೇ ಮೂರು ಜನರ ಪ್ರಾಣ ಪಕ್ಷಿ ಕೂಡ ಹಾರಿ ಹೋಯಿತು. ಹೀಗೆ ಒಂದಲ್ಲ ಒಂದು ಸಮಸ್ಯೆಗಳಿಂದ ವಿಚಲಿತಗೊಂಡ ಈ ಸೇನಾಪತಿ ಇದೀಗ ಬೆಳ್ಳಿ ತೆರೆಯ ಮೇಲೆ ಧಗಧಗಿಸಲು ಸಿದ್ಧವಾಗಿದ್ದಾನೆ.

indian-2-trailer-kamal-haasan-returns-with-spectacular-impact

ಕಮಲ್ ಹಾಸನ್ ಅವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕಣಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲಾ ಕಿಶೋರ್, ಜಾಕಿರ್ ಹುಸೇನ್, ಪಿಯೂಷ್ ಮಿಶ್ರಾ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ ಮತ್ತು ಅಶ್ವಿನಿ ತಂಗರಾಜ್ ಮುಂತಾದವರು ನಟಿಸಿದ್ದಾರೆ.

ಇನ್ನೂ ಇಂಡಿಯನ್ 2 ಕೇವಲ ತಮಿಳಿನಲ್ಲಿ ಅಷ್ಟೇ ಅಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಯಲ್ಲಿಯೂ ಕೂಡ ಬಿಡುಗಡೆಯಾಗಲಿದೆ. ಆದರೆ ಕನ್ನಡದಲ್ಲಿ ಈ ಚಿತ್ರ ನೋಡುವ ಸೌಭಾಗ್ಯ ಇಲ್ಲವೆನ್ನುವುದು ಬೇಸರದ ಸಂಗತಿ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಚಿತ್ರಕ್ಕೆ ಬಂಡವಾಳ ಹೂಡಿವೆ. ಸದ್ಯಕ್ಕೆ ಇಂಡಿಯನ್ 2 ಚಿತ್ರದ ಟ್ರೇಲರ್ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಕಮಲ್ ಹಾಸನ್ ಅವರ ವಿಶ್ವರೂಪ ಇವರ ಅಭಿಮಾನಿಗಳನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ಜುಲೈ 12ಕ್ಕೆ ಚಿತ್ರ ತೆರೆಗೆ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X