ಎದೆಯೆತ್ತರಕ್ಕೆ ಬೆಳೆದ ಮಗನನ್ನು ಪರಿಚಯಿಸಿ ಪ್ರಭುದೇವ ಭಾವುಕ, ಡ್ಯಾನ್ಸ್‌ನಲ್ಲಿ ತಂದೆಯನ್ನೇ ಮೀರಿಸುತ್ತಾನೆ ರಿಷಿ...!

ಡ್ಯಾನ್ಸ್ ಕಿಂಗ್ ಪ್ರಭುದೇವಾ ಅವರ ಕುಣಿತವನ್ನು ಯಾರ್ ತಾನೇ ಲೈಕ್ ಮಾಡಲ್ಲ ಹೇಳಿ. ಇವರ ನೃತ್ಯ ನಿರ್ದೇಶನದಲ್ಲಿ ಅಥವಾ ಇವರ ಚಿತ್ರಗಳಲ್ಲಿ ಪ್ರತಿ ಬಾರಿ ಹೊಸ ಹೊಸ ಹೆಜ್ಜೆಗಳಿಗೆ ಬರ ಇರಲ್ಲ ಅನ್ನೋದು ನೃತ್ಯ ಪ್ರಿಯರ ಅಭಿಪ್ರಾಯ. ಅಂತಹ ಅದ್ಭುತ ನೃತ್ಯಗಾರ ಪ್ರಭುದೇವಾ. ಇವರ ಡ್ಯಾನ್ಸ್ ಸ್ಪೀಡ್‌ಗೆ ಹೆಜ್ಜೆ ಹಾಕುವುದು ತುಸು ಕಷ್ಟ ಎಂದು ಅನೇಕ ನಟಿಮಣಿಯರು ಕೊರಗಿದ್ದು ಉಂಟು.

ಇಂಥಾ ಹೆಜ್ಜೆಗಳ ಜಾದೂಗಾರ ಈಗ ತಮ್ಮ ಮಗನನ್ನು ಪರಿಚಯಿಸಿದ್ದಾರೆ. ಹೌದು, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ.

India s Michael Jackson Prabhu Deva introduces his son Rishi for the first time in a stage show

ಹೀಗಿರುವಾಗ ಸ್ಟೆಪ್ಸ್ ಮೂಲಕ ಮೋಡಿ ಮಾಡುವ ಮ್ಯಾಜಿಕ್ ಮ್ಯಾನ್ ನ ಮಗ ಚಿತ್ರರಂಗಕ್ಕೆ ಬಾರದಿರಲು, ಅಪ್ಪನಂತೆಯೇ ಹೆಜ್ಜೆ ಹಾಕದಿರಲು ಹೇಗೆ ಸಾಧ್ಯ ? ಈ ಪ್ರಶ್ನೆಗೆ ಉತ್ತರ ಶೀಘ್ರದಲ್ಲಿಯೇ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಪ್ರಭುದೇವಾ ಮಗನ ಮುಂದಿನ ಹೆಜ್ಜೆಯ ಕುರಿತು ಸುಳಿವನ್ನು ನೀಡಿದ್ದಾರೆ.

ಹೌದು, ಪ್ರಭುದೇವ ತಮ್ಮ ಮಗನ ಜೊತೆ ಇದೇ ಮೊದಲ ಬಾರಿ ಡ್ಯಾನ್ಸ್ ಮಾಡಿದ್ದಾರೆ. ನನ್ನ ಮಗ ರಿಷಿ ರಾಘವೇಂದ್ರ ದೇವನ ನಿಮ್ಮೆಲ್ಲರಿಗೆ ಪರಿಚಯಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳ ಆಶೀರ್ವಾದವನ್ನು ಬೇಡಿ ವೇದಿಕೆಯ ಮೇಲೆ ಕುಣಿದಿದ್ದಾರೆ. ಆ ನಂತರ ಮಗನನ್ನು ಮುದ್ದಾಡಿ ವೇದಿಕೆಗೆ ನಮಸ್ಕಾರ ಮಾಡುವಂತೆ ಮಗನಿಗೆ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದೆ. ಪ್ರಭುದೇವಾ ಹಂಚಿಕೊಂಡ ಈ ವಿಡಿಯೋವನ್ನು ಕಣ್ತುಂಬಿಕೊಂಡ ಅನೇಕರು ಪ್ರಭುದೇವ ಚಿತ್ರರಂಗಕ್ಕೆ ಬಂದಾಗ ಹೇಗಿದ್ದರೋ ಅವರ ಮಗ ಸೇಮ್ ಅದೇ ರೀತಿ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಂದೆಯಂತೆ ಡ್ಯಾನ್ಸ್ ಮಾಡುವ ಪರಿಯನ್ನು ಕೂಡ ನಿಬ್ಬೇರಗಾಗಿದ್ದಾರೆ. ತಂದೆಗೆ ತಕ್ಕ ಮಗ ಎಂದು ಹೇಳಿದ್ದಾರೆ. ಮುಂದೊಂದು ದಿನ ಡ್ಯಾನ್ಸ್‌ನಲ್ಲಿ ರಿಷಿ ರಾಘವೇಂದ್ರ ರಾವ್ ತಮ್ಮ ತಂದೆಯನ್ನೇ ಮೀರಿಸಬಹುದು ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಕಲೆ ರಕ್ತದಲ್ಲಿಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

ಅಂದ್ಹಾಗೇ ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸ್ಟಾರ್‌ಗಳು ಹಾಜರಿದ್ದರು. ಧನುಷ್, ವಡಿವೇಲು, ಎಸ್‌ಜೆ ಸೂರ್ಯ, ರೋಜಾ, ಮೀನಾ, ಅರುಣ್ ವಿಜಯ್, ಹೀಗೆ ಹಲವರು ಪ್ರಭುದೇವಾ ಮತ್ತು ಅವರ ಮಗ ರಿಷಿ ಡ್ಯಾನ್ಸ್ ನ ನೋಡಿದರು. ಶಿಳ್ಳೆ ಹೊಡೆದು ಸಂಭ್ರಮಿಸಿದರು. ಇದೇ ಸಮಯದಲ್ಲಿ ಧನುಷ್ ಸೇರಿ ಹಲವರು ಪ್ರಭುದೇವ ಜೊತೆ ತಮ್ಮ ಒಡನಾಟವನ್ನು ಕೂಡ ನೆನೆದಿದ್ದಾರೆ.

ಇನ್ನುಳಿದಂತೆ ಪ್ರಭುದೇವ ತೀರಾ ಇತ್ತೀಚೆಗಷ್ಟೇ ಹಿಮೇಶ್ ರೇಶ್ಮಿಯಾ ಅಭಿನಯದ ಬ್ಯಾಡ್ಯಾಸ್ ರವಿಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಬಂದ ಕರಟಕ ದಮನಕ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆ ಹಂಚಿಕೊಂಡಿದ್ದರು. ಇನ್ನು ಕೇವಲ ನಟನಾಗಿ ಮಾತ್ರವಲ್ಲದೇ ನೃತ್ಯ ನಿರ್ದೇಶಕರಾಗಿ ಕೂಡ ಸದ್ಯ ಬ್ಯುಸಿಯಾಗಿರುವ ಪ್ರಭುದೇವ ಕಳೆದ ಕೆಲ ದಿನಗಳಿಂದ ನಿರ್ದೇಶನದಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಒಟ್ನಲ್ಲಿ ಸದ್ಯ ಪ್ರಭುದೇವ ತಮ್ಮ ಮಗನನ್ನು ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೆ ಪರಿಚಯಿಸಿದ್ದಾರೆ. ಮಗನ ಜೊತೆ ಕುಣಿದಿದ್ದಾರೆ. ಇನ್ನೇನು ಪ್ರಭುದೇವ ಅವರ ಮಗ ರಿಶಿ ಚಿತ್ರರಂಗಕ್ಕೆ ಬರಬೇಕಷ್ಟೇ.

More from Filmibeat

Read more about: prabhudeva dance filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X