For Quick Alerts
  ALLOW NOTIFICATIONS  
  For Daily Alerts

  ಪತ್ನಿಯಿಂದ ನಗ್ನ ಚಿತ್ರ ಕ್ಲಿಕ್ಕಿಸಿಕೊಂಡು ಹಂಚಿಕೊಂಡ ತಮಿಳು ನಟ!

  |

  ಬಾಲಿವುಡ್ ನಟ ರಣ್ವೀರ್ ಸಿಂಗ್‌ರ ನಗ್ನ ಚಿತ್ರಗಳು ಚರ್ಚೆ ಎಬ್ಬಿಸಿರುವ ನಡುವೆ ರಣ್ವೀರ್ ಸಿಂಗ್ ಅವರನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತಮಿಳು ನಟನೊಬ್ಬ ತನ್ನ ನಗ್ನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

  2009 ರಿಂದ ಈವರೆಗೆ ತಮಿಳಿನ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿರುವ ವಿಷ್ಣು ವಿಶಾಲ್ ತಮ್ಮ ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ರಣ್ವೀರ್‌ ಸಿಂಗ್‌ರಂತೆ ವಿಷ್ಣು ಸಹ ಪೂರ್ಣ ಬಟ್ಟೆ ಕಳಚಿದ್ದಾದಾರೂ ಹಾಸಿಗೆಯನ್ನು ಖಾಸಗಿ ಅಂಗಗಳಿಗೆ ಅಡ್ಡವಾಗಿಟ್ಟುಕೊಂಡಿದ್ದಾರೆ.

  ಬಾಲಿವುಡ್ ಸ್ಟಾರ್ ಜೋಡಿಗೆ ಜೀವ ಬೆದರಿಕೆ, ದೂರು ನೀಡಿದ ಕತ್ರಿನಾ ಕೈಫ್ಬಾಲಿವುಡ್ ಸ್ಟಾರ್ ಜೋಡಿಗೆ ಜೀವ ಬೆದರಿಕೆ, ದೂರು ನೀಡಿದ ಕತ್ರಿನಾ ಕೈಫ್

  ರಣ್ವೀರ್ ಸಿಂಗ್‌ರ ಚಿತ್ರಗಳನ್ನು ವೃತ್ತಿಪರ ಫೊಟೊಗ್ರಾಫರ್ ತೆಗೆದಿದ್ದರೆ, ವಿಷ್ಣು ವಿಶಾಲ್‌ರ ಬೆತ್ತಲೆ ಚಿತ್ರಗಳನ್ನು ಅವರ ಪತ್ನಿಯೇ ತೆಗೆದಿದ್ದಾರೆ. ಅಂದಹಾಗೆ, ಭಾರತದ ಖ್ಯಾತ ಬ್ಯಾಡ್‌ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೇ ವಿಷ್ಣು ವಿಶಾಲ್ ಪತ್ನಿ.

  ಪತ್ನಿ ಕ್ಲಿಕ್ಕಿಸಿರುವ ಚಿತ್ರಗಳು

  ಪತ್ನಿ ಕ್ಲಿಕ್ಕಿಸಿರುವ ಚಿತ್ರಗಳು

  ತಮ್ಮ ನಾಲ್ಕು ನಗ್ನ ಚಿತ್ರಗಳನ್ನು ಟ್ವಿಟ್ಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ವಿಷ್ಣು ವಿಶಾಲ್, ''ನಾನೂ ಸಹ ಟ್ರೆಂಡ್ ಸೇರಿಕೊಂಡೆ'' ಎಂದು ಬರೆದಿದ್ದಾರೆ. ಜೊತೆಗೆ ಪತ್ನಿ ಜ್ವಾಲಾ ಗುಟ್ಟಾ ಈ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಪತ್ನಿಗೂ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ ವಿಷ್ಣು ಶಿವನ್.

  ತಮಿಳರು ಸಹಿಸಲ್ಲ ಎಂದ ನೆಟ್ಟಿಗರು

  ತಮಿಳರು ಸಹಿಸಲ್ಲ ಎಂದ ನೆಟ್ಟಿಗರು

  ವಿಷ್ಣು ವಿಶಾಲ್ ಹಂಚಿಕೊಂಡಿರುವ ಚಿತ್ರಕ್ಕೆ ಹಲವರು ಹಲವು ರೀತಿಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಹಲವರಿಗೆ ವಿಷ್ಣು ವಿಶಾಲ್ ಹಂಚಿಕೊಂಡಿರುವ ಚಿತ್ರಗಳು ಇಷ್ಟವಾಗಿಲ್ಲ. ''ನಿಮಗೆ ಇದು ಸರಿ ಎನ್ನಿಸಬಹುದೇನೋ ಆದರೆ ತಮಿಳರು ಇದನ್ನು ಸಹಿಸುವುದಿಲ್ಲ'' ಎಂದಿದ್ದಾರೆ. ಇನ್ನು ಕೆಲವರು ಆತ ತನ್ನ ಪೂರ್ಣ ಬೆತ್ತಲೆ ದೇಹವನ್ನು ಪ್ರದರ್ಶಿಸಿಲ್ಲ ಮೇಲಿನ ಭಾಗವನ್ನಷ್ಟೆ ಪ್ರದರ್ಶಿಸಿದ್ದಾನೆ ಎಂದಿದ್ದಾರೆ. ಹಲವರು ಈ ಚಿತ್ರಗಳು ಚೆನ್ನಾಗಿಲ್ಲವೆಂದು ಹೇಳಿದ್ದಾರೆ.

  ಮ್ಯಾಗಜೈನ್‌ಗಾಗಿ ಬೆತ್ತಲಾದ ರಣ್ವೀರ್‌

  ಮ್ಯಾಗಜೈನ್‌ಗಾಗಿ ಬೆತ್ತಲಾದ ರಣ್ವೀರ್‌

  ನಟ ರಣ್ವೀರ್ ಸಿಂಗ್, ಪೇಪರ್ ಹೆಸರಿನ ಮ್ಯಾಗಜೈನ್‌ಗಾಗಿ ಸಂಪೂರ್ಣ ಬೆತ್ತಲಾಗಿ ಚಿತ್ರಗಳನ್ನುನ ತೆಗೆಸಿಕೊಂಡಿದ್ದರು. ಸಂಪೂರ್ಣ ಬೆತ್ತಲಾಗಿದ್ದರೂ ನಟನ ಖಾಸಗಿ ಅಂಗ ಕಾಣದಂತೆ ತೆಗೆದ ಫೋಟೊ ಅದಾಗಿತ್ತು. ರಣ್ವೀರ್‌ ಸಿಂಗ್‌ರ ಈ ಚಿತ್ರಗಳು ಸಾಕಷ್ಟು ವೈರಲ್ ಆಗಿವೆ. ಅಲ್ಲದೆ ಸಾಕಷ್ಟು ಚರ್ಚೆಯನ್ನೂ ಎಬ್ಬಿಸಿವೆ. ಬೆತ್ತಲೆಯಾಗಿ ಚಿತ್ರ ತೆಗೆಸಿಕೊಂಡಿದ್ದಕ್ಕೆ ಹಲವರು ರಣ್ವೀರ್ ಅನ್ನು ಟ್ರೋಲ್ ಮಾಡಿದ್ದಾರೆ. ಆದರೆ ಹಲವು ಬಾಲಿವುಡ್ಡಿಗರು ರಣ್ವೀರ್ ಬೆಂಬಲಕ್ಕೆ ನಿಂತಿದ್ದಾರೆ.

  ನಟಿ ಹೀಗೆ ಚಿತ್ರ ತೆಗೆಸಿಕೊಂಡಿದ್ದರೆ?

  ನಟಿ ಹೀಗೆ ಚಿತ್ರ ತೆಗೆಸಿಕೊಂಡಿದ್ದರೆ?

  ಇನ್ನು ಕೆಲವರು ರಣ್ವೀರ್ ಸಿಂಗ್ ಬೆತ್ತಲಾಗಿ ಚಿತ್ರ ತೆಗೆಸಿಕೊಂಡಂತೆ ನಟಿಯೊಬ್ಬಾಕೆ ಇದೇ ರೀತಿ ಬೆತ್ತಲಾಗಿ ಚಿತ್ರ ತೆಗೆಸಿಕೊಂಡಿದ್ದರೆ ಸಮಾಜ ಒಪ್ಪುತ್ತಿತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ವಿಷ್ಣು ವಿಶಾಲ್ ಹಂಚಿಕೊಂಡಿರುವ ಚಿತ್ರಕ್ಕೂ ಇದೇ ರೀತಿಯ ಕಮೆಂಟ್‌ಗಳು ಬಂದಿವೆ. ಇದೇ ರೀತಿ ವಿಷ್ಣು ವಿಶಾಲ್‌ರ ಪತ್ನಿ ಜ್ವಾಲಾ ಚಿತ್ರ ತೆಗೆಸಿಕೊಂಡಿದ್ದಿದ್ದರೆ ಈತ ಅವನ್ನು ಹಂಚಿಕೊಳ್ಳುತ್ತಿದ್ದನೆ ಎಂದು ಕಮೆಂಟ್ ಮಾಡಿದ್ದಾರೆ.

  English summary
  Inspired by Bollywood actor Ranveer Singh's recent photos actor Vishnu Vishal shared his hot pics.
  Tuesday, July 26, 2022, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X