'ಹುಡುಗರು' ನಟಿ ಅಭಿನಯ ಮದುವೆ ಆಗುವ ಹುಡುಗ; ಈತನ ಹಿನ್ನೆಲೆ ಏನು?
ತಮಿಳು ನಟಿ ಅಭಿನಯ ಪ್ರೀತಿ ಹಾಗೂ ಮದುವೆ ವಿಚಾರ ಇತ್ತೀಚೆಗೆ ಬಹಳ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೆ ಆಕೆ ತನ್ನ ಮದುವೆ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಹುಡುಗ ಯಾರು ಎನ್ನುವುದನ್ನು ತೋರಿಸದೇ ಬರೀ ಕೈಗೆ ಉಂಗುರ ಹಾಕಿಕೊಂಡಿರುವ ಫೋಟೊ ಹಂಚಿಕೊಂಡಿದ್ದರು.
ನಟ ವಿಶಾಲ್ ಹಾಗೂ ಅಭಿನಯ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ವಿಶಾಲ್ ಜೊತೆ ಲವ್ ಎನ್ನುವುದು ಸುಳ್ಳು, ಕಾರಣ ನಾನು ಒಬ್ಬ ವ್ಯಕ್ತಿಯ ಜೊತೆ 15 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದೀನಿ ಎಂದು ಸ್ವತಃ ಅಭಿನಯ ಸ್ಪಷ್ಟಪಡಿಸಿದ್ದರು. ಇದೀಗ ಆತನ ಜೊತೆಗೆ ಎಂಗೇಜ್‌ಮೆಂಟ್ ನಡೆದಿರುವುದು ಗೊತ್ತಾಗುತ್ತಿದೆ.

ಅಷ್ಟಕ್ಕೂ ನಟಿ ಅಭಿನಯ ಮನಗೆದ್ದ ಹುಡುಗ ಯಾರು? ಆತನ ಹಿನ್ನೆಲೆ ಏನು? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಸದ್ಯ ಒಬ್ಬ ವ್ಯಕ್ತಿಯ ಜೊತೆ ನಟಿ ಅಭಿನಯ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಈತನೇ ಆಕೆಯ ಪ್ರಿಯಕರ. ಇಬ್ಬರೂ 15 ವರ್ಷಗಳಿಂದ ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
ಸರಿಯಾಗಿ ಮಾತು ಬಾರದ, ಕಿವಿ ಕೇಳಿಸದ ವಿಶೇಷ ಚೇತನ ಅಭಿನಯ ತನ್ನ ನಟಿನೆಯಿಂದ ಮೋಡಿ ಮಾಡಿದ್ದಾರೆ. ಸನ್ನೆಯ ಭಾಷೆಯಲ್ಲೇ ಎಲ್ಲರ ಜೊತೆ ಮಾತನಾಡುತ್ತಾರೆ. ಆಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಅಭಿನಯ ಜೊತೆ ಫೋಟೊದಲ್ಲಿ ಇರುವ ಈ ವ್ಯಕ್ತಿಯ ಹೆಸರು ಕಾರ್ತಿಕ್. ಕೆಲ ದಿನಗಳ ಹಿಂದೆ ಆತನ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ಲಿಕ್ಕಿಸಿದ ಫೋಟೊಗಳು ಇವು ಎಂದು ಗೊತ್ತಾಗುತ್ತಿದೆ.
ಹೈದರಾಬಾದ್ ಮೂಲದ ಕಾರ್ತಿಕ್ ಒಬ್ಬ ಉದ್ಯಮಿ ಎನ್ನಲಾಗ್ತಿದೆ. ಕೆಲ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ಕಾರ್ತಿಕ್ ಹಾಗೂ ಅಭಿನಯ ಪರಿಚಯವಾಗಿತ್ತು. ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪ್ರೀತಿಸಲು ಆರಂಭಿಸಿದ್ದರು. ಇದೀಗ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ನಟಿ ಅಭಿನಯ ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸಮುದ್ರಖನಿ ನಿರ್ದೇಶದನ 'ನಾಡೋಡಿಗಳ್' ಚಿತ್ರದಲ್ಲಿ ನಾಯಕ ಸಹೋದರಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಆಕೆಯ ನಟನೆಗಾಗಿ ಪ್ರಶಸ್ತಿಗಳು ಹುಡುಕಿ ಬಂದಿತ್ತು. ಮುಂದೆ ಆ ಸಿನಿಮಾ 'ಹುಡುಗರು' ಹೆಸರಿನಲ್ಲಿ ಕನ್ನಡಕ್ಕೆ ರೀಮೆಕ್ ಆಗಿತ್ತು. ಆಗ ಪುನೀತ್ ರಾಜ್‌ಕುಮಾರ್ ಸಹೋದರಿಯಾಗಿ ಇದೇ ಅಭಿನಯ ಕಾಣಿಸಿಕೊಂಡಿದ್ದರು.
'ಹುಡುಗರು' ಬಳಿಕ ಕನ್ನಡದ 'ಕಿಚ್ಚು' ಹಾಗೂ 'ಆಟೋ ರಾಮಣ್ಣ' ಚಿತ್ರದಲ್ಲಿ ಅಭಿನಯ ಮಿಂಚಿದ್ದರು. ಇನ್ನುಳಿದಂತೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 'ಮಾರ್ಕ್ ಆಂಟನಿ' ಎಂಬ ತಮಿಳು ಚಿತ್ರದಲ್ಲಿ ನಟ ವಿಶಾಲ್ ಜೋಡಿಯಾಗಿ ಅಭಿನಯ ಕಾಣಿಸಿಕೊಂಡಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಲವ್ವಾಗಿದೆ, ಮದುವೆ ಆಗುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು.
ಕಳೆದ ವರ್ಷ ಬಂದ ಮಲಯಾಳಂನ 'ಪನಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಗಮನ ಸೆಳೆದಿದ್ದರು. ಸದ್ಯ 'ಮೂಕುಟ್ಟಿ ಅಮ್ಮನ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರ್ .ಸಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಮೀನಾ, ರೆಜಿನಾ, ದುನಿಯಾ ವಿಜಯ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಇನ್ನು ಕಾರ್ತಿಕ್ ಜೊತೆಗಿನ ಅಭಿನಯ ಫೋಟೊಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.


Click it and Unblock the Notifications











