ಧನುಷ್ ಜೊತೆ ಎರಡನೇ ಮದುವೆ ? ಸ್ವಾತಿ ಮುತ್ತು ಮೀನಾ ಹೇಳಿದ್ದೇನು ?
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಕುಂತರು ನಿಂತರು ಇವರ ಕುರಿತು ನಿರಂತರವಾಗಿ ಚರ್ಚೆಯಾಗುತ್ತಲೇ ಇರುತ್ತೆ. ವ್ಯೆಯಕ್ತಿಕ ಜೀವನದ ಕುರಿತು ಸುದ್ದಿಯಾಗುತ್ತಲೇ ಇರುತ್ತೆ. ವಿಭಿನ್ನ ರೀತಿಯಲ್ಲಿ ಕಮೆಂಟ್ ಹಾಕೋದು, ಕೆಲವು ಸಲ ಅವಹೇಳನ ಮಾಡಿ ಕೂಡ ಮಾತನಾಡಲಾಗುತ್ತೆ.
ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಇದಕ್ಕೆ ಬಹುಭಾಷಾ ಚೆಲುವೆ ಮೀನಾ ಸದ್ಯದ ಉದಾಹರಣೆ.

ಹೌದು, ಮೀನಾ.. ಹೆಚ್ಚು ಕಡಿಮೆ ಎರಡು ವರ್ಷ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದ ನಾಯಕಿ. ಕೇವಲ ಕಾಲಿವುಡ್ ಮಾತ್ರ ಅಲ್ಲದೇ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕೂಡ ಅಂದಕಾಲತ್ತಿಲ್ ತಮ್ಮ ಅಭಿನಯದಿಂದ ಎಲ್ಲರ ಹೃದಯಕ್ಕೆ ಕನ್ನ ಹಾಕಿದ್ದವರು ಮೀನಾ.
ಕನ್ನಡದಲ್ಲಿ ಪುಟ್ನಂಜ, ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಹೀಗೆ ಹಲವಾರು ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದರು. ಕನ್ನಡಿಗರ ಹೃದಯವನ್ನೂ ಗೆದ್ದಿದ್ದರು.
ಆ ನಂತರ 2009ರಲ್ಲಿ ವಿದ್ಯಾ ಸಾಗರ್ ಅವರ ಜೊತೆ ಮದುವೆಯಾಗಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಮೀನಾ 2022ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಇಂಥಾ ಮೀನಾಗೆ ಈಗ 48ರ ಹರೆಯ. ಇವರಿಗೆ ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಮತ್ತೊಮ್ಮೆ ಮೀನಾ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಾಜಿ ಅಳಿಯ ಧನುಷ್ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಹಾಗಂಥ ಈ ಸುದ್ದಿ ಇಂದು ನಿನ್ನೆಯದ್ದಲ್ಲ. ಕಳೆದ ವರ್ಷದಿಂದ ಮೀನಾ ಎರಡನೇ ಮದುವೆಯ ಕುರಿತು ಚರ್ಚೆ ನಡೆಯುತ್ತಲೇ ಇದೆ. ಮೀನಾ ಸ್ಪಷ್ಟೀಕರಣವನ್ನು ನೀಡಿಯೂ ಆಗಿದೆ. ಆದರೂ ಕೂಡ ಚರ್ಚೆ ಕಡಿಮೆಯಾಗಿಲ್ಲ. ಬದಲಿಗೆ ಇನ್ನೂ ಹೆಚ್ಚಾಗಿದೆ. ಧನುಷ್ ಜೊತೆ ಮೀನಾ ಮದುವೆಯಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.
''ನ್ಯಾಷನಲ್ ಕಾರಿಡರ್ಸ್'' ಸೇರಿ ಅನೇಕ ಹಿಂದಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೂಡ ನಿನ್ನೆ..ಮೊನ್ನೆಯೆಲ್ಲ ಮೀನಾ ಮತ್ತು ಧನುಷ್ ಮದುವೆ ಕುರಿತು ಚರ್ಚೆಯಾಗಿದೆ. ವರದಿಗಳು ಪ್ರಸಾರವಾಗಿವೆ. ತಮ್ಮ ಬಗ್ಗೆ ನಿರಂತರವಾಗಿ ಕೇಳಿ ಬರುತ್ತಿರುವ ಈ ಸುದ್ದಿಗಳಿಂದ ಸಹಜವಾಗಿ ಮೀನಾ ನೊಂದು ಬೆಂದಿದ್ದಾರೆ. ತಮ್ಮ ಆಕ್ರೋಶವನ್ನು ಕೂಡ ಸದ್ಯ ಹೊರ ಹಾಕಿದ್ದಾರೆ.
''ಕೇರಳ ಕೌಮದಿ'' ವೆಬ್ ಸೈಟ್ ವರದಿ ಮಾಡಿರುವಂತೆ ಧನುಷ್ ಜೊತೆಗಿನ ಮದುವೆಯ ಕುರಿತು ಹಬ್ಬಿರುವ ಸುದ್ದಿಯಲ್ಲಿ ಯಾವುದೇ ಸತ್ಯ ಇಲ್ಲ ಎಂದು ಮೀನಾ ಹೇಳಿದ್ದಾರೆ.
ಆಧಾರರಹಿತ ಸುದ್ದಿಗಳನ್ನು ಓದಿ ನನಗೆ ಆಘಾತವಾಗಿದೆ ಎಂದು ಮೀನಾ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಳ್ಳುವ ಈ ತರಹದ ಸುದ್ದಿಗಳನ್ನು ನಂಬಬೇಡಿ ಎಂದು ಮೀನಾ ಮನವಿಯನ್ನು ಕೂಡ ಮಾಡಿಕೊಂಡಿದ್ದು ಈ ರೀತಿಯ ಸುದ್ದಿಗಳು ನಮ್ಮ ವ್ಯೆಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ, ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ಮುಂದುವರೆದು ಒಬ್ಬರ ವ್ಯೆಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಜವಾಬ್ಧಾರಿಯುತವಾಗಿ ಎಲ್ಲರು ವರ್ತಿಸಬೇಕೆ ಹೊರತು ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಎಂದು ಮೀನಾ ಹೇಳಿದ್ದಾರೆ. ನನಗೆ ಮತ್ತೊಂದು ಮದುವೆಯಾಗುವ ಯಾವ ಆಸೆಯೂ ಇಲ್ಲ ನನ್ನ ಮದುವೆಯ ವಿಚಾರವನ್ನು ಮರೆತು ನನ್ನ ವೃತ್ತಿ ಜೀವನದ ಬಗ್ಗೆ ನನ್ನ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಕೂಡ ಮೀನಾ ಹೇಳಿದ್ದಾರೆ.


Click it and Unblock the Notifications











